Tuesday, November 5, 2024
Google search engine
Homeಇ-ಪತ್ರಿಕೆಸಾಗರ: ಅರೆಹದ ಗ್ರಾಮ ಲೆಕ್ಕಾಧಿಕಾರಿ ಆತ್ಮಹತ್ಯೆ ಯತ್ನ: ಡೆತ್‌ ನೋಟ್‌ ನಲ್ಲಿ ತಹಸೀಲ್ದಾರ್  ಹೆಸರು ಪತ್ತೆ

ಸಾಗರ: ಅರೆಹದ ಗ್ರಾಮ ಲೆಕ್ಕಾಧಿಕಾರಿ ಆತ್ಮಹತ್ಯೆ ಯತ್ನ: ಡೆತ್‌ ನೋಟ್‌ ನಲ್ಲಿ ತಹಸೀಲ್ದಾರ್  ಹೆಸರು ಪತ್ತೆ


ಸಾಗರ: ತಾಲ್ಲೂಕಿನ ಆರೆಹದ ವೃತ್ತದಲ್ಲಿ  ಗ್ರಾಮ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಮಲಾ ಎಂಬುವವರು ಗುರುವಾರ ಮಧ್ಯಾಹ್ನ ತಾಲ್ಲೂಕು ಕಚೇರಿ ಸಮೀಪ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ತಹಸೀಲ್ದಾರ್ ನೀಡುತ್ತಿದ್ದ ಮಾನಸಿಕ ಹಿಂಸೆಯಿಂದ ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್‌ನಲ್ಲಿ ಬರೆದಿರುವುದು ಪತ್ತೆಯಾಗಿದೆ

ತಾಲ್ಲೂಕು ಕಚೇರಿಯಲ್ಲಿ ಮಾತ್ರೆ ತಿಂದು ತೀವೃ ಅಸ್ವಸ್ಥರಾಗಿದ್ದ ವಿಮಲ ಅವರನ್ನು ತಕ್ಷಣ ಕಚೇರಿ ಸಿಬ್ಬಂದಿಗಳು ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪೇಟೆಠಾಣೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದು ವಿಚಾರಣೆ ಪ್ರಾರಂಭಿಸಿದ್ದಾರೆ.

ಮೂಲತಃ ತ್ಯಾಗರ್ತಿಯವರಾದ ವಿಮಲ ಅವರು ಮೂರ್‍ನಾಲ್ಕು ವರ್ಷದಿಂದ ಅರೆಹದ ವೃತ್ತದಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದರ ಜೊತೆ ಹೆಚ್ಚುವರಿಯಾಗಿ ಮರತ್ತೂರು ಗ್ರಾಮ ಲೆಕ್ಕಾಧಿಕಾರಿ ಹೊಣೆಗಾರಿಕೆಯನ್ನು ಸಹ ಅವರಿಗೆ ವಹಿಸಲಾಗಿತ್ತು.

ಚುನಾವಣೆ ಸಂದರ್ಭದಲ್ಲಿ ವಿಮಲ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ರಜೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ೧೫ ದಿನಗಳ ಕಾಲ ಬರೂರು ವೃತ್ತಕ್ಕೆ ವರ್ಗಾಯಿಸಲಾಯಿತು. ಆರೋಗ್ಯ ಸಮಸ್ಯೆ ಇರುವುದರಿಂದ ತಮ್ಮನ್ನು ಬರೂರು ವೃತ್ತದಲ್ಲಿಯೆ ಮುಂದುವರೆಸುವಂತೆ ವಿಮಲ ತಹಶೀಲ್ದಾರ್‌ಗೆ ಮನವಿ ಮಾಡಿದ್ದರು. ಆದರೆ ತಹಶೀಲ್ದಾರ್ ಇದಕ್ಕೆ ಒಪ್ಪದೆ ಅವರನ್ನು ಅರೆಹದ ವೃತ್ತಕ್ಕೆ ವರ್ಗಾಯಿಸಿ ಜೊತೆಗೆ ಮರತ್ತೂರು ವೃತ್ತವನ್ನು ನಿರ್ವಹಣೆ ಮಾಡುವಂತೆ ಸೂಚಿಸಿದ್ದರು.

ಈ ಹಿನ್ನೆಲೆಯಲ್ಲಿ ವಿಮಲ ಅವರು ತಮ್ಮ ಆರೋಗ್ಯ ಸರಿ ಇಲ್ಲದೆ ಇದ್ದರೂ ತಹಶೀಲ್ದಾರ್ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಆರೋಗ್ಯದ ಸಮಸ್ಯೆ ಇರುವುದರಿಂದ ರಜೆ ಕೇಳಿದರೆ ಉಪ ತಹಶೀಲ್ದಾರ್ ಮೂಲಕ ನೋಟಿಸ್ ನೀಡುತ್ತಿದ್ದಾರೆ. ಇದರಿಂದ ತಅವು ಬೇಸತ್ತಿರುವುದಾಗಿ ವಿಮಲ ಅವರು ಡೆತ್‌ನೋಟ್‌ನಲ್ಲಿ ಬರೆದುಕೊಂಡಿದ್ದಾರೆ ಎನ್ನಲಾಗಿದೆ.

RELATED ARTICLES
- Advertisment -
Google search engine

Most Popular

Recent Comments