ಶಿಕಾರಿಪುರ: ಶಿವಮೊಗ್ಗ- ಹುಬ್ಬಳಿ ರಾಜ್ಯ ಹೆದ್ದಾರಿ ಶಿಕಾರಿಪುರ ಕಣಿವೇಮನೆ ಟೋಲ್ ಹತ್ತಿರ ಇಂದು ಬೆಳಿಗ್ಗೆ 11:30 ಗಂಟೆಗೆ ಬಸ್ ಅಪಘಾತದಲ್ಲಿ ಹಿರಿಯ ವ್ಯಕ್ತಿಯೋರ್ವರು ಸಾವನ್ನಪ್ಪಿದ್ದಾರೆ.
ಮೃತ ವ್ಯಕ್ತಿಯನ್ನು ಕುಂಬತಿ ಈರಪ್ಪ (73) ಎಂದು ಗುರುತಿಸಲಾಗಿದೆ. ಇವರು ಜನ ಚೈತನ್ಯ ವೇದಿಕೆ (ಜೆಸಿವಿ)ಯ ಸಕ್ರಿಯ ಕಾರ್ಯಕರ್ತ ನಾಗರಾಜ ಸಂಡ ಅವರ ತಂದೆಯಾಗಿದ್ದಾರೆ.
ಬಸ್ಸಿಳಿದು ಬಲ ಭಾಗಕ್ಕೆ ರಸ್ತೆ ಕ್ರಾಸ್ ಮಾಡುವಾಗ ಬಸ್ಸಿಗೆ ಸಿಕ್ಕಿ ಈ ದುರ್ಘಟನೆ ಸಂಭವಿಸಿದೆ. ತಲೆಗೆ ತೀವ್ರ ಪೆಟ್ಟು ಬಿದ್ಜ ಕಾರಣ ಶಿಕಾರಿಪುರ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ದಾರಿಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.
ಇವರು ಒಡನಾಡಿ ಬಳಗ ಹಾಗೂ ಜನ ಚೈತನ್ಯ ವೇದಿಕೆಯ ಸಕ್ರಿಯ ಕಾರ್ಯಕರ್ತರು ಆದ ನಾಗರಾಜ ಸಂಡ ಅವರ ತಂದೆಯವರಾಗಿದ್ದು, ದಲಿತ, ಬಡತನದ ಹಿನ್ನಲೆ ಕಡುಕಷ್ಟದಲ್ಲಿ ಎಂಟು ಮಕ್ಕಳನ್ನು ಸಾಕಿದ್ದರು. ಸಂಡ ಗ್ರಾಮದಲ್ಲಿ ಹಲವು ವರ್ಷಗಳ ಕಾಲ ಗ್ರಾಮದ ಮುಖಂಡರು ಆಗಿದ್ದರು. ಬಡವರು ಶ್ರಮಿಕರ ಪರವಾಗಿದ್ದರು ಎಂದು ಜನಚೈತನ್ಯ ವೇದಿಕೆಯ ಸದಸ್ಯರು ತಿಳಿಸಿದ್ದಾರೆ.
ಗಟ್ಟಿಮುಟ್ಟಾಗಿದ್ದ ವೀರಪ್ಪ ಹೀಗೆ ಅಕಾಲಿಕ ಅಪಘಾತದ ದುರ್ಮರಣಕ್ಕಿಡಾಗಿರುವುದು ದುಂಖದ ಸಂಗತಿ. ಒಡನಾಡಿ ಗೆಳೆಯ ನಾಗರಾಜ್ ಸಂಡ ಹಾಗೂ ಕುಟುಂಬ ಬಂಧು ಬಾಂದವರಿಗೆ ಒಡನಾಡಿ ಬಳಗದ ಗೆಳೆಯರ ಪರವಾಗಿ ಸಾಂತ್ವನ ಎಂದು ಹೇಳಿದ್ದಾರೆ.