ಬೆಂಗಳೂರು: ರೇಣುಕಾಸ್ವಾಮಿ ಹತ್ಯೆಯಾಗಿ ವಾರ ಕಳೆದರೂ ಆತನ ಮೊಬೈಲ್ ಹುಡುಕಾಟ ಇನ್ನೂ ನಿಂತಿಲ್ಲ.
ಹತ್ಯೆ ಸಂಬಂಧ ಮೊಬೈಲ್ ಕೆಲ ಸಾಕ್ಷ್ಯ ಒದಗಿಸುವ ಕಾರಣ ಪೊಲೀಸರು ಅದನ್ನು ಹುಡುಕುತ್ತಿದ್ದಾರೆ. ಅದರ ಕೊನೆಯ ಬಾರಿಯ ಸಿಗ್ನಲ್ ಇದ್ದ ರಾಜಕಾಲುವೆಯಲ್ಲಿ ಅದರ ಹುಡುಕಾಟವನ್ನು ನಡೆಸುತ್ತಿದ್ದಾರೆ.
ಈ ಪ್ರಕರಣದ ಆರೋಪಿಗಳಲ್ಲಿ ಒಬ್ಬಾತನಾದ ಪ್ರದೂಶ್‌ನನ್ನು ಸುಮನಹಳ್ಳಿ ಸತ್ವ ಅಪಾರ್ಟ್‌ಮೆಂಟ್ ಮುಂಭಾಗದಲ್ಲಿರುವ ರಾಜಕಾಲುವೆ ಬಳಿಯ ಶವ ಎಸೆದ ಜಾಗಕ್ಕೆ ಕರೆತಂದಿದ್ದಾರೆ. ಪೊಲೀಸರ ಮನವಿಯ ಮೇರೆಗೆ ಪೌರ ಕಾರ್ಮಿಕರು ರಾಜಕಾಲುವೆಗೆ ಇಳಿದು ಮೊಬೈಲ್ ಹುಡುಕಾಡಿದ್ದಾರೆ. ಆದರೆ ಮೊಬೈಲ್ ಪತ್ತೆಯಾಗದ ಕಾರಣ ಶೋಧ ಕಾರ್ಯ ನಿಲ್ಲಿಸಿದ್ದಾರೆ.
ರೇಣುಕಾಸ್ವಾಮಿ ಮೊಬೈಲ್‌ನಲ್ಲೇ ಆರೋಪಿಗಳು ಕ್ಷಮೆ ಕೋರಿದ್ದ ವಿಡಿಯೋ ಚಿತ್ರೀಕರಿಸಿದ್ದರು ಎನ್ನಲಾಗಿದೆ. ಆರ್‌ಆರ್ ನಗರ, ಪಟ್ಟಣಗೆರೆ ಶೆಡ್ ಸೇರಿ ಹಲವು ಕಡೆ ಹುಡುಕಿದರೂ ಮೊಬೈಲ್ ಸುಳಿವು ಸಿಕ್ಕಿಲ್ಲ.