ಶಿವಮೊಗ್ಗ: ಇದೇ ಮೊದಲ ಬಾರಿಗೆ ರಣಜಿ ಕ್ರಿಕೆಟ್ ಪಂದ್ಯಾವಳಿ ನಗರದ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಆಯೋಜಿಸ ಲಾಗಿದೆ ಎಂದು ಕೆಎಸ್‌ಸಿಎ ಶಿವಮೊಗ್ಗ ವಲಯ ಸಂಚಾಲಕ ಡಿ.ಆರ್. ನಾಗರಾಜ್ ಮತ್ತು ಡಿ.ಎಸ್. ಅರುಣ್ ಸುದ್ದಿ ಗೋಷ್ಟಿಯಲ್ಲಿ ಹೇಳಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.೨೪ ರಿಂದ ೨೭ರವರೆಗೆ ಅತಿಥೇಯ ಕರ್ನಾಟಕ – ಹೈದರಾಬಾದ್ ತಂಡಗಳು ಪರಸ್ಪರ ಸೆಣೆಸಲಿವೆ. ಈಗಾಗಲೇ ಜಿಲ್ಲೆಯಲ್ಲಿ ಹಲವು ರಣಜಿ ಪಂದ್ಯಗಳು ನಡೆದಿದ್ದರೂ, ಕೆಎಸ್‌ಸಿಎ ತನ್ನ ಮೈದಾನದಲ್ಲಿ ನಡೆಸುತ್ತಿರುವ ಮೊದಲ ಪಂದ್ಯ ಇದಾಗಿದೆ ಎಂದರು.
ಪಂದ್ಯ ನಡೆಸಲು ಅಗತ್ಯ ಸಿದ್ಧತೆಗಳು ನಡೆದಿದ್ದು, ನ.೨೧ರ ಸಂಜೆ ಎರಡೂ ತಂಡಗಳು ಶಿವಮೊಗ್ಗಕ್ಕೆ ಆಗಮಿಸಲಿವೆ. ಪಂದ್ಯ ವೀಕ್ಷಣೆಗೆ ಸಾರ್ವಜನಿಕರೆಲ್ಲರಿಗೂ ಉಚಿತ ಪ್ರವೇಶವಿದೆ ಎಂದರು.
ಕೆಎಸ್‌ಸಿಎ ಶಿವಮೊಗ್ಗ ವಲಯ ಛೇರ‍್ಮನ್ ಸುಕುಮಾರ್ ಪಟೇಲ್ ಮಾತನಾಡಿ, ಪಂದ್ಯ ವೀಕ್ಷಣೆಗೆ ಕೆಎಸ್‌ಸಿಎ ಮೈದಾನಕ್ಕೆ ಬರುವವರಿಗೆ ೨ ಗೇಟ್‌ಗಳ ಮೂಲಕ ಪ್ರವೇಶ ನೀಡಲಾಗುತ್ತಿದೆ. ಮೊದಲ ಗೇಟ್‌ನ ಮೂಲಕ ಸಾರ್ವಜನಿಕರು , ೨ನೇ ಗೇಟ್ ಮೂಲಕ ವಿಐಪಿಗಳಿಗೆ ಪ್ರವೇಶ ನೀಡಲಾಗುವುದು. ಕಾರುಗಳು ಹಾಗೂ ಬೈಕ್‌ಗಳಿಗೆ ಪ್ರತ್ಯೇತ ನಿಲುಗಡೆ ಸ್ಥಳ ನಿಗದಿ ಮಾಡಲಾಗಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಕೆಎಸ್‌ಸಿಎಯ ಯಶವಂತ್ ಉಪಸ್ಥಿತರಿದ್ದರು.
Oct 24-27 – ಶಿವಮೊಗ್ಗದಲ್ಲಿ ಕರ್ನಾಟಕ- ಹೈದರಾಬಾದ್ ರಣಜಿ ಪಂದ್ಯ
RELATED ARTICLES