Saturday, December 14, 2024
Google search engine
Homeಇ-ಪತ್ರಿಕೆರಘುಪತಿ ಭಟ್ ಮತ್ತು ನನ್ನ ನಡುವೆ ನೇರ ಹಣಾಹಣಿ: ಎಸ್.ಪಿ.ದಿನೇಶ್

ರಘುಪತಿ ಭಟ್ ಮತ್ತು ನನ್ನ ನಡುವೆ ನೇರ ಹಣಾಹಣಿ: ಎಸ್.ಪಿ.ದಿನೇಶ್

ಶಿವಮೊಗ್ಗ: ೬ ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು ಮತದಾರರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ ಎಂದು ನೈರುತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಸ್.ಪಿ.ದಿನೇಶ್ ಹೇಳಿದ್ದಾರೆ.

ಶನಿವಾರ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಹಿಂದಿನಕ್ಕಿಂತ ಹೆಚ್ಚಿನ ಬೆಂಬಲ ವ್ಯಕ್ತವಾಗಿದ್ದು ಪಕ್ಷಾತೀತವಾಗಿ ಪದವೀಧರರು ಬೆಂಬಲಿಸುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ೨೭,೦೦೦, ದಾವಣಗೆರೆ ೬೫೦೦, ಚಿಕ್ಕಮಗಳೂರು ೧೧,೦೦೦, ಉಡುಪಿ ೧೭,೦೦೦, ದಕ್ಷಿಣ ಕನ್ನಡದಲ್ಲಿ ೧೯,೦೦೦, ಕೊಡಗು ೪,೦೦೦ ಮತದಾರರಿದ್ದು ನಮ್ಮ ಜಿಲ್ಲೆಯೇ ಅತಿ ಹೆಚ್ಚಿನ ಮತದಾರರನ್ನು ಹೊಂದಿದೆ. ಈ ಹಿಂದೆ ಅಲ್ಪ ಮತಗಳ ಅಂತರದಲ್ಲಿ ಸೋತಿರುವ ನಾನು ಈಗ ೩ನೆ ಬಾರಿ ಸ್ಪರ್ಧಿಸುತ್ತಿದ್ದೇನೆ. ಹಳೆಯ ಪ್ರಬಾವ ಇರುವುದರಿಂದ ನನ್ನ ಗೆಲುವು ನಿಶ್ಚಿತ ಎಂದು ಅವರು ಹೇಳಿದರು.

ಮತದಾರರ ಕಷ್ಟು ಸುಖದಲ್ಲಿ ಭಾಗಿಯಾಗಿರುವುದರಿಂದ ನನ್ನ ಕೈ ಹಿಡಿಯುತ್ತಾರೆಂಬ ಆತ್ಮವಿಶ್ವಾಸವಿದೆ. ಇದು ನನ್ನ ಮತ್ತು ರಘುಪತಿ ಭಟ್ ಅವರ ನಡುವಿನ ನೇರಾ ಹಣಾಹಣಿ ಇದೆ. ಕರಾವಳಿಯಲ್ಲಿ ೩೬ ಸಾವಿರ ಮತದಾರರ ನೋಂದಣಿ ಇದ್ದು ಇವರಲ್ಲಿ ಸಾಕಷ್ಟು ಮತದಾರರು ರಘುಪತಿ ಭಟ್ ಅವರ ಕೈ ಹಿಡಿಯುವ ಸಾಧ್ಯತೆ ಎಂದರು.

ಬಿಜೆಪಿಯವರು ನಾನು ತಟಸ್ಥನಾಗಿದ್ದು, ಪ್ರಚಾರ ಕಾರ್ಯದಲ್ಲಿ ತೊಡಗಿಲ್ಲವೆಂದು ಅಪಪ್ರಚಾರ ಮಾಡುತ್ತಿದ್ದಾರೆ. ಈ ರೀತಿ ವಾಮಮಾರ್ಗದ ಅಪಪ್ರಚಾರ ಸಲ್ಲದು. ಈ ಹಿಂದೆ ಯಡಿಯೂರಪ್ಪ ಗರುಡಿಯಲ್ಲೇ ಬೆಳೆದ ಅಯನೂರು ಅವರು ಕೊನೆಗೆ ಯಾರ ವಿರುದ್ಧ ತಿರುಗಿ ಬಿದ್ದರು. ಈಗ ಸರ್ಜಿಯವರನ್ನು ಬೆಳೆಸುತ್ತಿರುವ ಯಡಿಯೂರಪ್ಪನವರಿಗೆ ಇಂತಹ ಅಪಾಯ ಕಾದಿದೆ. ಮುಂದೆ ಇದೇ ಸರ್ಜಿ ನಿಮ್ಮ ಮಗನ ವಿರುದ್ಧ ಸ್ಪರ್ಧೆ ಮಾಡಿದರೆ ಆಶ್ಚರ್ಯವಿಲ್ಲ. ನೀವೆ ಗೆಲ್ಲಿಸಿ ಬೆಳೆಸಿದವರೆ ನಿಮ್ಮ ವಿರುದ್ಧ ತೊಡೆ ತಟ್ಟುತ್ತಿರುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಈ ಬಾರಿ ಗೆಲ್ಲಿಸಿ, ಗೆಲ್ಲುವ ವಿಶ್ವಾಸವಿದೆ. ನಾನು ೨೦೧೨ ಮತ್ತು ೨೦೧೮ರಲ್ಲಿ ಸ್ಪರ್ಧಿಸಿ ಸೋತಿದ್ದೇನೆ. ಈ ಸೋಲಿನ ಹೊಡೆತವನ್ನು ಸುಧಾರಿಸಿಕೊಳ್ಳುವುದು ಯಾರಿಗೂ ಅಷ್ಟು ಸುಲಭವಲ್ಲ. ಶಿವಮೊಗ್ಗದ ಹಲವು ಸಂಘ ಸಂಸ್ಥೆಗಳು ನನಗೆ ಬೆಂಬಲ ಸೂಚಿಸಿವೆ. ಬಿಜೆಪಿಯು ಹಣ ಬಲ, ಹೆಂಡದ ಬಲದಿಂದ ಗೆಲ್ಲಲು ಹವಣಿಸುತ್ತಿದೆ. ಇದು ಪದವೀಧರರನ್ನು ಕೆಟ್ಟ ದಾರಿಗೆ ತಳ್ಳುತ್ತದೆ. ಗೌರವಾನ್ವಿತ ಮತದಾರರು ಅವರಿಂದ ಹಣ ಪಡೆದು ನನಗೆ ಮತ ನೀಡಿದರೆ ನಿಮ್ಮ ಹಲವು ಸಮಸ್ಯೆಗಳ ವಿರುದ್ಧ ಹೋರಾಡುತ್ತೇನೆ ಎಂದು ಭರವಸೆ ನೀಡಿದರು.

ಜೂ.೩ರಂದು ಬೆಳಗ್ಗೆ ೮ರಿಂದ ಸಂಜೆ ೪ರವರೆಗೆ ನಡೆಯಲಿರುವ ಚುನಾವಣೆಗೆ ಮತದಾನದ ಹಕ್ಕನ್ನ ಪಡೆದ ಮತದಾರರನ್ನು ಅಭಿನಂದಿಸಿ ಅವರಿಗೆ ಹೊಸ ವರ್ಷದ ಶುಭಾಶಯ ಪತ್ರ ಹಾಗೂ ಹೊಸ ವರ್ಷದ ಕ್ಯಾಲೆಂಡರ್ ಕಳುಹಿಸುವುದರ ಮೂಲಕ ತಲುಪಿರುತ್ತೇನೆ. ತದನಂತರ ಮತದಾರರ ಮತದಾನದ ಭಾಗ ಸಂಖ್ಯೆ ಮತ್ತು ಕ್ರಮ ಸಂಖ್ಯೆಯುಳ್ಳ ವೋಟರ್ ಐಡಿಯನ್ನು ಕೂಡ ಕಳುಹಿಸಿಕೊಟ್ಟು ಅವರನ್ನು ಮುಟ್ಟಿದ್ದೇನೆ. ಅವರ ಮೇಲಿನ ಅಪಾರವಾದ ಗೌರವ, ಪ್ರೀತಿ ಮತ್ತು ನಂಬಿಕೆಯಿಂದಲೇ ಮೂರನೇ ಬಾರಿ ಸ್ಪರ್ಧಿಸುತ್ತಿದ್ದೇನೆ. ನನ್ನ ಅಭಿಲಾಷೆಗೆ ಆಕಾಂಕ್ಷಿಗೆ ಅವರು ಸ್ಪಂದಿಸುವರೆಂದು ನಂಬಿರುತ್ತೇನೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರೊ.ಸುಧಾಕರ್, ಪ್ರೊ.ವೆಂಕಟಾಚಲ, ಉಮೇಶ್, ಸಚಿನ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments