ದಾವಣಗೆರೆ: ಇಲ್ಲಿನ ವಿನೋಬಾ ನಗರದ 4ನೇ ಮುಖ್ಯ ರಸ್ಥೆಯಲ್ಲಿರುವ ಕೆ.ಎಸ್.ವೈನ್ ಲ್ಯಾಂಡ್ ಮದ್ಯಪಾನ ಅಂಗಡಿ ತೆರವಿಗೆ ಒತ್ತಾಯಿಸಿ ಅಲ್ಲಿನ ನಿವಾಸಿಗಳು ಪ್ರತಿಭಟನೆ
ನಡೆಸಿದರು.
ಈ ಮದ್ಯಪಾನ ಅಂಗಡಿಯು ರಸ್ತೆಯ ಮಧ್ಯಭಾಗದಲ್ಲಿರುವುದರಿಂದ ಇಲ್ಲಿ ಪಾನಮಕ್ತರು ಗಲಾಟೆ ಮಾಡಿ, ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆಯನ್ನು ಮಾಡುವುದರಿಂದ ಇಲ್ಲಿನ ನಿವಾಸಿಗಳು
ಸೇರಿದಂತೆ ದಾರಿಹೋಕರಿಗೂ ಸಮಸ್ಯೆ ಅಗುತ್ತಿದೆ. ಆದ್ದರಿಂದ ಕೂಡಲೇ ಸ್ಥಳಾಂತರ ಮಾಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸ್ಥಳೀಯರಾದ ಅನುಪಮ, ವಿಜಯ ಲಕ್ಷ್ಮಿ ನಿರಂಜನ, ನಿವೇದಿತಾ ಸಚಿನ್, ಭಾಗಿರಥಿ ಪಾಂಡುರಂಗ, ಸರೋಜ, ವಿಜಯ, ನಾಗರಾಜ್, ಸೋಗಿ ವೀರೇಶ್ ಮುಂತಾದವರು
ಹಾಜರಿದ್ದರು.