ರಾಷ್ಟ್ರಪತಿ ಆಯ್ಕೆ : ಎನ್‌ಡಿಎ ಹಾದಿ ಸುಗಮ
ಲೇಖನ : ಶಾಂತಪ್ರಿಯ
ಜುಲೈನಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಅಧಿಕಾರಾವಧಿ ಕೊನೆಗೊಳ್ಳಲಿದ್ದು, ಮುಂದಿನ ರಾಷ್ಟ್ರಪತಿ ಆಯ್ಕೆ ಕುರಿತು ಈಗಾಗಲೇ ಸಾಕಷ್ಟು ಚರ್ಚೆ ನಡೆದಿದ್ದು, ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ರಾಷ್ಟ್ರಪತಿ ಆಯ್ಕೆಯ ದಿಕ್ಕನ್ನು ಬದಲಿಸಿಬಿಟ್ಟಿದೆ.
ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಬಹುಮತ ಸಾಧಿಸಿದೆ. ಚುನಾವಣೆಗೆ ಮುನ್ನ ಎನ್‌ಡಿಎಗೆ ರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಮಾಡಲು, ಎಲೆಕ್ಟೋರಲ್ ಕಾಲೇಜಿನಲ್ಲಿ ಬಹು ಮತಕ್ಕೆ 75,000 ಮತಗಳ ಅವಶ್ಯಕತೆ ಇತ್ತು. ತಮ್ಮ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡುವ ಬಿಜೆಪಿ ಕನಸಿಗೆ ಯುಪಿಎ ಸುಲಭವಾಗಿ ಕಲ್ಲು ಹಾಕಿಬಿಡಬಹುದಿತ್ತು.
ಆದರೆ ಈಗ ಉತ್ತರ ಪ್ರದೇಶದ ಬಹುತೇಕ ಸ್ಥಾನಗಳನ್ನು ಬುಟ್ಟಿಗೆ ಹಾಕಿಕೊಂಡ ಬಳಿಕ, ಈ ಅಂತರ 20,000ಕ್ಕೆ ಇಳಿದಿದೆ. ಈಗ ಮೋದಿ ಮಾಡಬೇಕಾಗಿರುವುದು ಅಷ್ಟ್ಟೂ ಮೌಲ್ಯದ ಮತಗಳನ್ನು ಕೊಡಬಲ್ಲ ಸಣ್ಣ ಪಕ್ಷವೊಂದರ ಸಖ್ಯವನ್ನು ಬೆಳೆಸಬೇಕಿದೆ. ಮೋದಿಯವರ ಈಗಿನ ವರ್ಚಸ್ಸಿಗೆ ಅದೇನೂ ಕಷ್ಟವಲ್ಲ.
ಈ ಹಿಂದೆ ಎನ್‌ಡಿಎ ಎರಡು ಬಾರಿ ಗದ್ದುಗೆ ಏರಿದ್ದರೂ ರಾಷ್ಟ್ರದ ಅತ್ಯುನ್ನತ ಪದವಿಗೆ ತನ್ನದೇ ಆದ ವ್ಯಕ್ತಿಯೋರ್ವರನ್ನು ತರುವ ಕನಸು ಈಡೇರಲಿಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾದಾಗಲೂ ಎಲೆಕ್ಟೋರಲ್ ಕಾಲೇಜಿನಲ್ಲಿ ಸಾಕಷ್ಟು ಬಹುಮತ ಪಡೆಯಲು ಸಾಧ್ಯವಾಗದೆ, ಅಬ್ದುಲ್ ಕಲಾಂರಂತ ರಾಜಕೀಯೇ ತರ, ಅಲಿಪ್ತ, ನಿರ್ವಿವಾದಿತ ಹಾಗೂ ದೇಶ ಮೆಚ್ಚುವಂತ ವ್ಯಕ್ತಿಯನ್ನು ರಾಷ್ಟ್ರಪತಿ ಮಾಡಲಾಯಿತು. ಆ ಮೂಲಕ ವಾಜಪೇಯಿಯವರು ವಿರೋಗಳ ಬಾಯಿ ಮುಚ್ಚಿಸಿ ದ್ದರು. ಕಲಾಂ ರಾಷ್ಟ್ರಪತಿ ಸ್ಥಾನಕ್ಕೆ ಘನತೆ ತಂದು ಕೊಟ್ಟಿದ್ದಲ್ಲದೆ, ಉಲ್ಲಾಸದ ವಾತಾವರಣವನ್ನು ಸೃಷ್ಟಿಸಿದ್ದರು.
ಆದರೆ ಅದರ ನಂತರ ಪ್ರತಿಭಾ ಪಾಟೀಲ್ ಹಾಗೂ ಪ್ರಣವ್ ಮುಖರ್ಜಿಯವರಂಥ ಸಂಪೂರ್ಣ ಕಾಂಗ್ರೆಸ್ ವ್ಯಕ್ತಿಗಳನ್ನು ಯುಪಿಎ ರಾಷ್ಟ್ರಪತಿ ಸ್ಥಾನಕ್ಕೆ ತಂದು ಕೂರಿಸಿತು.
ಈಗ ಎನ್‌ಡಿಎ ಸರದಿ, ಮೋದಿಯವರು ತಮ್ಮ ಆಯ್ಕೆಯಲ್ಲಿ ಯಶಸ್ವಿಯಾದರೆ, ದೇಶ ಇದೇ ಮೊದಲ ಬಾರಿಗೆ ಒಬ್ಬ ಬಿಜೆಪಿ ನಾಯಕನನ್ನು ರಾಷ್ಟ್ರಪತಿ ಸ್ಥಾನದಲ್ಲಿ ಕಾಣುವ ಸಾಧ್ಯತೆ ಇದೆ.
ತಮ್ಮ ಆಡಳಿತದ ಹಾದಿಯಲ್ಲಿ ವಿಘ್ನಗಳನ್ನು ಒಡ್ಡದಂತಹ, ತಾನು ಕಳುಹಿಸಿದ ವಿಧೇಯಕಗಳನ್ನು ಕಣ್ಣು ಮುಚ್ಚಿ ಸಹಿ ಮಾಡುವ ವ್ಯಕ್ತಿ ಆ ಪದವಿಯಲ್ಲಿ ಇರಬೇಕು ಎಂದು ಮೋದಿ ಬಯಸಿದ್ದರೆ ಅದರಲ್ಲಿ ತಪ್ಪೇನಿಲ್ಲ. ಅಂಥ ವ್ಯಕ್ತಿಗಳೂ ಸಾಕಷ್ಟಿದ್ದಾರೆ. ಅವರನ್ನು ಆಯ್ಕೆ ಮಾಡುವಂತಹ ವಾತಾವರಣವೂ ದೇಶದಲ್ಲಿದೆ.
ಮೋದಿಯವರ ಕನಸಿನ ಹಲವು ಮಹತ್ವಾಕಾಂಕ್ಷಿ ವಿಧೇಯಕಗಳು ಕಾಯಿದೆಯಾಗಲು ಕಾಯುತ್ತಿದ್ದು, ರಾಜ್ಯಸಭೆಯಲ್ಲಿ ಬಹುಮತ ಹಾಗೂ ಸಹಿ ಹಾಕಲು ತಮ್ಮವರೇ ರಾಷ್ಟ್ರಪತಿಯೊಬ್ಬರು ಬರಬೇಕಾಗಿದೆ. ರಾಷ್ಟ್ರಪತಿ ಹುದ್ದೆಗೆ ಕೆಲವರು ಹೆಸರು ಕೇಳಿ ಬರುತ್ತಿದ್ದು, ಮುಖ್ಯವಾಗಿ ಹಿರಿಯ ಮುತ್ಸದ್ಧಿ ಎಲ್.ಕೆ.ಅಡ್ವಾಣಿಯವರ ಹೆಸರು ಮುಂಚೂಣಿಯಲ್ಲಿದೆ. ಪ್ರಧಾನಿಯಾಗಬೇಕೆಂಬ ಅಡ್ವಾಣಿಯವರ ಕನಸು ಕಳೆದ ಬಾರಿ ನುಚ್ಚುನೂರಾಗಿತ್ತು.
ಬಿಜೆಪಿಯಲ್ಲಿ ವಾಜಪೇಯಿಯವರನ್ನು ಬಿಟ್ಟಿರೆ, ಈಗಿರುವ ಅತ್ಯಂತ ಹಿರಿಯ ನಾಯಕ ಅಡ್ವಾಣಿ, ಪಕ್ಷವನ್ನು ದೇಶದಲ್ಲಿ ದೃಢವಾಗಿ ಕಟ್ಟಿ ಬೆಳೆಸಿದವರು. ಸಂಘ ಪರಿವಾರ ಮಾತ್ರವಲ್ಲದೆ, ವಿಪಕ್ಷಗಳಲ್ಲೂ ಮಿತ್ರರಿದ್ದಾರೆ. ಈಗಿನ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅಡ್ವಾಣಿಯವರ ಆತ್ಮೀಯ ಗೆಳೆಯರು, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಅವರಿಗೂ ಅಡ್ವಾಣಿ ಅಚ್ಚುಮೆಚ್ಚು. ಇದರಿಂದ ಅವರ ಗೆಲುವಿನ ಹಾದಿ ಸುಗಮವಾಗ ಬಹುದು. ಗೋವಾ ಹಾಗೂ ಮಣಿಪುರದಲ್ಲಿ ಸರ್ಕಾರ ರಚಿಸಿದ ವೇಗ ನೋಡಿದರೆ, ಈ ಕೊರತೆಯನ್ನು ಎನ್‌ಡಿಎ ಸುಲಭವಾಗಿ ತುಂಬಿ ಕೊಳ್ಳ ಬಹುದು. ಅದಕ್ಕೆ ಬಿಜೆಪಿ ಹಾಗೂ ಎಐಎ ಡಿಎಂಕೆಗಳ ಸಹಾಯ ಸಾಕು.
ಓಡಿಶಾ ವಿಧಾನಸಭೆಯಲ್ಲಿ 117 ಸದಸ್ಯ ಬಲ ಹೊಂ ದಿರುವ ಬಿಜೆಡಿ 17,433 ಮೌಲ್ಯ ದ ಮತಗಳನ್ನು ತುಂಬಿ ಕೊಡಬಹುದು. ಅದೇ ರೀತಿ ಎಐಎ ಡಿಎಂಕೆ ಕೂಡಾ ಎನ್‌ಡಿಎಗೆ 25,584 ಮತಗಳನ್ನು ಕೊಡಬಲ್ಲದು. ಈ ಪಕ್ಷಕ್ಕೆ ತಮಿಳುನಾಡು ವಿಧಾನಸಬೆಯಲ್ಲಿ 134 ಶಾಸಕರಿದ್ದಾರೆ.
ಎರಡು ರಾಜ್ಯಗಳ ಗೆಲುವು ಎನ್‌ಡಿಗೆ ರಾಜ್ಯಸಬೆಯಲ್ಲಿ ಕೆಲವು ತನ್ನ ಸದಸ್ಯರನ್ನು ಆಯ್ಕೆ ಮಾಡಲು ನೆರವಾಗಲಿದೆ. ಮೇಲ್ಮನೆಯಲ್ಲಿ ಕೆಲವು ಮುಖ್ಯ ವಿ‘ಯಕಗಳನ್ನು ಪಾಸು ಮಾಡಿಸಿಕೊಳ್ಳಲು ಇದು ಸಹಕಾರಿಯಾಗಲಿದೆ. ಆದರೆ ಇದು ಆಗುವುದು ಮುಂದಿನ ಏಪ್ರಿಲ್‌ನಲ್ಲಿ ಆಗ ನಿವೃತ್ತ ರಾಗಲಿರುವ 11 ಮೇಲ್ಮನೆ ಸದಸ್ಯರು ಸ್ಥಾನಕ್ಕೆ ನೇಮಕವಾ ಗಲಿದ್ದಾರೆ. ಜುಲೈನಲ್ಲಿ ನಡೆಯುವ ರಾಷ್ಟ್ರಪತಿ ಚುನಾ ವಣೆಗೆ ಇದು ಸಹಾಯವಾಗಲಾರದು. ಲೋಕಸ‘ಯ ಮೂರು ಸ್ಥಾನಕ್ಕೆ ಚುನಾವಣೆ ಏಪ್ರಿಲ್‌ನಲ್ಲಿ ನಡೆಯಲಿದೆ. ಆದರೆ ಇದೂ ಕೂಡಾ ಮತಗಳ ಮೌಲ್ಯದಲ್ಲಿ ದೊಡ್ಡ ಬದಲಾವಣೆ ತರಲಾರರು.
ರಾಜ್ಯಸಬೆಯಲ್ಲಿ ಬಹುಮತಕ್ಕೆ 123 ಸ್ಥಾನಗಳ ಅಗತ್ಯವಿದೆ. ಆದರೆ ಎನ್‌ಡಿಎ ಬಲ 75 ಸ್ಥಾನ ಮಾತ್ರ. ಬಹುಮತ ಕೂಡ ದೂರವೇ ಇದ್ದರೂ, ಈ ಬಾರಿಯ ಗೆಲುವು ಮುಂದಿನ ವರ್ಷದ ಹೊತ್ತಿಗೆ ಈ ಅಂತರವನ್ನು ಕಡಿಮೆ ಗೊಳಿಸಲು ಸಹಕಾರಿ. ಇತರ ಮೂರು ರಾಜ್ಯಗಳ ಸೀಟು ಲೆಕ್ಕಾಚಾರ ರಾಜ್ಯಸಬೆಯಲ್ಲಿ ಹೆಚ್ಚಿನ ಬದಲಾವಣೆ ಮಾಡ ದು. ಈ ವರ್ಷ ಮೇಲ್ಮನೆ ಸದಸ್ಯರು ಕಳಿಸುವ ಗೋವಾ ಏಕೈಕ ಸಂಸದರನ್ನು ಬಲ ಹೊಂದಿದೆ. ಮುಂದಿನ ವರ್ಷ ರಾಜ್ಯ ಸ‘ಯಲ್ಲಿ ೬೮ ಸ್ಥಾನಗಳು ಖಾಲಿಯಾಗಲಿವೆ.
ಆ ಹೊತ್ತಿಗೆ ಎನ್‌ಡಿಎ ತನ್ನ ಬಲ ಹೆಚ್ಚಿಸಿಕೊಳ್ಳಲಿದೆ. 68ರಲ್ಲಿ 58 ಸ್ಥಾನಗಳು 2018ರ ಏಪ್ರಿಲ್‌ನಲ್ಲಿ ತೆರವಾಗಲಿವೆ. ಅದರಲ್ಲಿ 10 ಉತ್ತರ ಪ್ರದೇಶದಿಂದ , ಒಂದು ಸ್ಥಾನ ಉತ್ತರಖಂಡದಿಂದ ತೆರವಾಗಲಿವೆ. ಉಳಿದಂತೆ ದಿಲ್ಲಿ, ಕೇರಳ, ಮಧ್ಯಪ್ರದೇಶ, ಆಂಧ್ರ ಪ್ರದೇಶ, ಕರ್ನಾಟಕ , ಬಿಹಾರ, ಗುಜರಾತ್, ತೆಲಂಗಾಣ, ರಾಜಸ್ಥಾನ, ಓಡಿಶಾ, ಝಾರ್ಖಂಡ್, ಮಹಾರಾಷ್ಟ್ರ, ಹರಿಯಾಣ ಮತ್ತು ಸಿಕ್ಕಿಂ.ಇದರಲ್ಲಿ ಮಧ್ಯಪ್ರದೇಶ , ಆಂಧ್ರ ಪ್ರದೇಶ, ಗುಜರಾತ್, ರಾಜಸ್ಥಾನ್, ಝಾರ್ಖ ಂಡ್ , ಮಹಾರಾಷ್ಟ್ರ ಮತ್ತು ಹರಿಯಾಣಗಳಲ್ಲಿ ಎನ್‌ಡಿಎಗೆ ಬಹುಮತವಿದೆ. ಹೀಗಾಗಿ ರಾಜ್ಯಸಭೆಯಲ್ಲಿ ತನ್ನ ಸದಸ್ಯರ ಸಂಖ್ಯೆಯನ್ನು ಅದು ಹೆಚ್ಚಿಸಿಕೊಂಡು ಬಲಿಷ್ಠವಾಗುವುದು ಖಚಿತ.
ರಾಷ್ಟ್ರಪತಿ ರೇಸ್‌ನಲ್ಲಿ ಹಿರಿಯ ಮುತ್ಸದ್ದಿ ಎಲ್. ಕೆ. ಅಡ್ವಾಣಿ ಅವರ ಶಿಷ್ಯೆ ಸುಷ್ಮಾ ಸ್ವರಾಜ್, ಯಶವಂತ್ ಸಿನ್ಹಾ, ಮುರಳಿ ಮನೋಹರ್ ಜೋಷಿ ಹಾಗೂ ವೆಂಕಯ್ಯನಾಯ್ಡು ಹೆಸರು ಕೇಳಿ ಬರುತ್ತಿದೆ.