Sunday, November 10, 2024
Google search engine
Homeಇ-ಪತ್ರಿಕೆಮಾಜಿ ಸೂಡಾ ಅಧ್ಯಕ್ಷ ರಿಚರ್ಡ್‌ ಕ್ವಾಡ್ರಸ್‌ ಇನ್ನಿಲ್ಲ.!

ಮಾಜಿ ಸೂಡಾ ಅಧ್ಯಕ್ಷ ರಿಚರ್ಡ್‌ ಕ್ವಾಡ್ರಸ್‌ ಇನ್ನಿಲ್ಲ.!

ಶಿವಮೊಗ್ಗ: ಹಿರಿಯ ರಾಜಕಾರಣಿ ಹಾಗೂ ಸೂಡಾ ಮಾಜಿ ಅಧ್ಯಕ್ಷ ರಿಚರ್ಡ್‌ ಕ್ವಾಡ್ರಸ್‌ ಅವರು ಅನಾರೋಗ್ಯದ ಹಿನ್ನಲೆಯಲ್ಲಿ ಸೋಮವಾರ ಸಂಜೆ ನಿಧನರಾಗಿದ್ದಾರೆ.

ಅನಾರೋಗ್ಯದ ಹಿನ್ನಲೆಯಲ್ಲಿ ಸೋಮವಾರ 7 ಗಂಟೆಯ ಸುಮಾರಿಗೆ ಈ ಬದುಕಿನ ಅಂತ್ಯ ಮುಗಿಸಿ ನಮ್ಮೆಲ್ಲರನ್ನು ಆಗಲಿದ್ದಾರೆ.!

ಮಲೆನಾಡು ಕಂಡ ಪ್ರಾಮಾಣಿಕ ಜನಪ್ರಿಯ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ ರಿಚರ್ಡ್‌ ಕ್ವಾಡ್ರಸ್‌ ರಾಜಕಾರಣಕ್ಕೆ ಹಣ ಹೆಸರು ಮಾಡಲು ಬಂದವರಲ್ಲ ತಮ್ಮಿಂದಾದ ಸಹಾಯವನ್ನು ಜನರಿಗೆ ಮಾಡಲು ಬಂದಂತಹ ವ್ಯಕ್ತಿ. ಇವರು ಯಾವುದನ್ನು ಬಯಸಿ ಹೊದವರಲ್ಲ ಅವರ ಪರಿಶುದ್ಧ ರಾಜಕಾರಣವನ್ನು ಗಮನಿಸಿದ ಪಕ್ಷದ ಹಿರಿಯ ನಾಯಕರು ಇವರಿಗೆ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೆಮಿಸಿದ್ದರು.

ಹಾಗೂ ರಿಚರ್ಡ್‌ ಕ್ವಾಡ್ರಸ್‌ ತಮ್ಮ ಜನಪ್ರಿಯತೆಯ ಅಧಾರದ ಮೇಲೆ ಶಿವಮೊಗ್ಗ ನಗರಸಭೆಯ ಸದಸ್ಯರಾಗಿದ್ದರು ಹಾಗೂ ಶಿವಮೊಗ್ಗ ನಗರದ ಹೆಸರಾಂತ ಸಿಟಿ ಕೋ ಆಪರೇಟಿವ್ ಬ್ಯಾಂಕಿನ ಮಾಜಿ ಅಧ್ಯಕ್ಷರಾಗಿ ಹಾಲಿ ಸದಸ್ಯರಾಗಿದ್ದರು ರಿಚರ್ಡ್‌ ಕ್ವಾಡ್ರಸ್‌. ಅದರಲ್ಲೂ ಸಿಟಿ ಕೋ ಆಪರೇಟಿವ್ ಬ್ಯಾಂಕಿಗೆ ನಿರಂತರವಾಗಿ ಆಯ್ಕೆಯಾದ ಹಿರಿಮೆ ರಿಚರ್ಡ್‌ ಕ್ವಾಡ್ರಸ್‌ ಅವರದು.ಇಂದು ಮಡದಿ ಮಕ್ಕಳು,ಬಂದು ಬಳಗದವರ ಜೋತೆಗೆ ಅಪಾರ ಅಭಿಮಾನಿ ಬಳಗವನ್ನು ಬಿಟ್ಟು ಆಗಲಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments