ಶಿವಮೊಗ್ಗ: ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರ ಕಾಲ್ನಡಿಗೆ ವಿಶೇಷ ಗಸ್ತು ವೇಳೆ ವ್ಯಕ್ತಿಯೊಬ್ವ ಮಾದಕ ವಸ್ತು ಸೇವನೆ ಮಾಡಿರುವುದು ದೃಡಪಟ್ಟ ಹಿನ್ನಲೆಯಲ್ಲಿ ಬಂಧಿಸಲಾಗಿದೆ.
ಮಂಗಳವಾರ ಸಂಜೆ ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ ಆರ್ ಎಸ್ ಪಾರ್ಕ್, ಕೋಟೆ ರಸ್ತೆ, ಬಿ ಬಿ ರಸ್ತೆ, ಸಿ ಎಲ್ ರಾಮಣ್ಣ ರಸ್ತೆ, ಸೂಳೆ ಬೈಲು, ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ ಬೆಂಕಿ ನಗರ, ಕೆ ಕೆ ನಗರ, ಚಿಕ್ಕಲ್, ಆಯನೂರು, ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಶಿವಾನಿ ಕ್ರಾಸ್, ಕೊಡಿಹಳ್ಳಿ, ಬಾಬಳ್ಳಿ, ಸಾಗರ ಉಪ ವಿಭಾಗ ವ್ಯಾಪ್ತಿಯ ಮಾಲ್ಲಂದೂರು, ಶಿಕಾರಿಪುರ ಉಪ ವಿಭಾಗ ವ್ಯಾಪ್ತಿಯ ಆನವಟ್ಟಿಯಲ್ಲಿ ಆಯಾ ಪೊಲೀಸ್ ಉಪಾಧೀಕ್ಷಕರುಗಳ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರು, ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡಗಳಿಂದ ಸೂಕ್ಷ್ಮ ಪ್ರದೇಶಗಳಲ್ಲಿ ಕಾಲ್ನಡಿಗೆ ವಿಶೇಷ ಗಸ್ತು ನಡೆಸಲಾಗಿದೆ.
ಈ ವೇಳೆ ಅನುಮಾನಸ್ಪಾದ ವ್ಯಕ್ತಿಗಳ ವಿರುದ್ದ ಒಟ್ಟು 19 ಲಘು ಪ್ರಕರಣಗಳನ್ನು ಹಾಗೂ ಮಾದಕ ವಸ್ತು ಗಾಂಜಾ ಸೇವನೆ ಮಾಡಿರುವ ಬಗ್ಗೆ ಅನುಮಾನ ಬಂದ ವ್ಯಕ್ತಿಯೊಬ್ಬನನ್ನು ವೈಧ್ಯಕೀಯ ಪರೀಕ್ಷೆಗೊಳಪಡಿಸಿದ್ದು, ಗಾಂಜಾ ಸೇವನೆ ಮಾಡಿರುವುದು ದೃಡಪಟ್ಟ ಹಿನ್ನೆಲೆಯಲ್ಲಿ NDPS ಕಾಯ್ದೆಯಡಿ 01 ಪ್ರಕರಣವನ್ನು ದಾಖಲಿಸಲಾಗಿರುತ್ತದೆ.