Sunday, November 10, 2024
Google search engine
Homeಇ-ಪತ್ರಿಕೆಗೃಹ ಸಚಿವರಿಂದ ಪೊಲೀಸ್ ಸಮುದಾಯ ಭವನ ಉದ್ಘಾಟನೆ

ಗೃಹ ಸಚಿವರಿಂದ ಪೊಲೀಸ್ ಸಮುದಾಯ ಭವನ ಉದ್ಘಾಟನೆ

ಶಿವಮೊಗ್ಗ : ಶಿವಮೊಗ್ಗದ ಡಿ.ಎ.ಆರ್. ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಪೊಲೀಸ್ ಸಮುದಾಯ ಭವನದ ಉದ್ಘಾಟನೆಯನ್ನು ಶನಿವಾರದಂದು ಕರ್ನಾಟಕ ಸರ್ಕಾರದ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ನೆರವೇರಿಸಿದರು.


ಡಿ.ಎ.ಆರ್ ಆವರಣದಲ್ಲಿ 3.75 ಕೋಟಿ ವೆಚ್ಚದಲ್ಲಿ ನಿರ್ಮಿತಿ ಕೇಂದ್ರದ ವತಿಯಿಂದ ನೂತನವಾಗಿ ಪೊಲೀಸ್ ಸಮುದಾಯ ಭವನವನ್ನು ನಿರ್ಮಿಸಲಾಗಿದೆ. 500 ಸೀಟಿಂಗ್ ಸಾಮರ್ಥ್ಯ, ಊಟದ ಹಾಲ್ ಸೇರಿದಂತೆ ಸುಸಜ್ಜಿತವಾಗಿ ಭವನವನ್ನು ನಿರ್ಮಿಸಲಾಗಿದೆ.


ನಂತರ ಡಿಎಆರ್ ಸಭಾಂಗಣದಲ್ಲಿ ಗೃಹ ಸಚಿವರು ಪೂರ್ವ ವಯಲದ ಉಪ ಪೊಲೀಸ್ ಮಹಾ ನಿರೀಕ್ಷಕರಾದ ಬಿ.ರಮೇಶ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಹಾಗೂ ಇತರೆ ಪೊಲೀಸ್ ಅಧಿಕಾರಿಗಳೊಂದಿಗೆ ಜಿಲ್ಲಾ ಪೊಲೀಸ್ ವಿಮರ್ಶನಾ ಸಭೆಯನ್ನು ನಡೆಸಿದರು.


ಡಿಎಆರ್ ಪೊಲೀಸ್ ಭವನದ ಉದ್ಘಾಟನೆ ವೇಳೆ ಶಾಸಕರಾದ ಎಸ್.ಎನ್ ಚನ್ನಬಸಪ್ಪ, ಬಿ.ಕೆ ಸಂಗಮೇಶ್ವರ್, ಗೋಪಾಲ ಕೃಷ್ಣ ಬೇಳೂರು, ವಿಧಾನ ಪರಿಷತ್ ಶಾಸಕರಾದ ಬಲ್ಕೀಶ್ ಬಾನು, ಡಿ.ಎಸ್.ಅರುಣ್, ಡಾ.ಧನಂಜಯ ಸರ್ಜಿ, ಮಂಜುನಾಥ ಭಂಡಾರಿ ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಂಡಿದ್ದರು.

RELATED ARTICLES
- Advertisment -
Google search engine

Most Popular

Recent Comments