Wednesday, November 13, 2024
Google search engine
Homeಇ-ಪತ್ರಿಕೆಪ್ಲಾಸ್ಟಿಕ್ ಸರ್ಜರಿಯಿಂದ ಜೀವಕ್ಕೆ ಅಪಾಯ ಇಲ್ಲ: ಸರ್ಜಿ ಅಸ್ಪತ್ರೆಯ ಡಾ.ಚೇತನ್ ಕುಮಾರ್ 

ಪ್ಲಾಸ್ಟಿಕ್ ಸರ್ಜರಿಯಿಂದ ಜೀವಕ್ಕೆ ಅಪಾಯ ಇಲ್ಲ: ಸರ್ಜಿ ಅಸ್ಪತ್ರೆಯ ಡಾ.ಚೇತನ್ ಕುಮಾರ್ 

ಸರ್ಜಿ ಆಸ್ಪತ್ರೆಯಲ್ಲಿ ವಿಶ್ವ ಪ್ಲಾಸ್ಟಿಕ್ ಸರ್ಜರಿ ದಿನ ಆಚರಣೆ

ಶಿವಮೊಗ್ಗ : ಪ್ಲಾಸ್ಟಿಕ್ ಸರ್ಜರಿಯಿಂದ ಜೀವಕ್ಕೆ ಯಾವುದೇ ರೀತಿಯ ಅಪಾಯ ಇಲ್ಲ,  ಈ ಕುರಿತು ತಪ್ಪು ತಿಳಿವಳಿಕೆ,  ಭಯ, ಆತಂಕ ಬೇಡ ಎಂದು ಸರ್ಜಿ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್ನ ಪ್ಲಾಸ್ಟಿಕ್ ಸರ್ಜನ್ ಡಾ.ಚೇತನ್ ಕುಮಾರ್ ಹೇಳಿದರು.

ನಗರದ ಸರ್ಜಿ ಸೂಪರ್ ಸಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಶ್ವ ಪ್ಲಾಸ್ಟಿಕ್ ಸರ್ಜರಿ ದಿನ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಪ್ಲಾಸ್ಟಿಕ್ ಸರ್ಜರಿಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ ಇಡೀ ವಿಶ್ವಾದ್ಯಂತ ಪ್ಲಾಸ್ಟಿಕ್ ಸರ್ಜರಿ ದಿನವನ್ನು ಆಚರಿಸಲಾಗುತ್ತದೆ  ಪ್ಲಾಸ್ಟಿಕ್ ಸರ್ಜರಿ ಇಂದು ನಿನ್ನೆಯದಲ್ಲ, ಭಾರತದಲ್ಲಿ ಪುರಾತನ ಕಾಲದಿಂದಲೂ ಇದೆ, ಸುಶ್ರುತ ಮಹರ್ಷಿಗಳು ಪ್ಲಾಸ್ಟಿಕ್ ಸರ್ಜರಿಯ ಪಿತಾಮಹರಾಗಿದ್ದು, ಇದೀಗ ವಿಶ್ವಮಟ್ಟದಲ್ಲಿ ಅದಕ್ಕೆ ಮಾನ್ಯತೆ ಸಿಕ್ಕಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು. 

ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಪ್ರಶಾಂತ್ ಮಾತನಾಡಿ, ನಾವೆಲ್ಲರೂ ಭಗವಂತನ ಸೃಷ್ಟಿ, ನಮ್ಮ ಹೆತ್ತವರು ಜೀವ ಕೊಟ್ಟವರು, ಅವರೇ ಪ್ರತ್ಯಕ್ಷ ದೇವರು ಕೂಡ. ಪ್ರತಿಯೊಬ್ಬರಿಗೂ ಒಂದೊಂದು ರೂಪ ಇರುತ್ತದೆ,ಆದರೆ ಹುಟ್ಟುತ್ತಲೇ ಕೆಲವರಿಗೆ ವಿರೂಪ ಆಗುತ್ತದೆ, ಇಲ್ಲವೇ ಆಕಸ್ಮಿಕ ಘಟನೆ,ಅಪಘಾತಗಳಿಂದಲೂ ಆಘುವ ಸಾದ್ಯತೆ ಇರುತ್ತದೆ, ಇಂತಹ ಸಮಯದಲ್ಲಿ ದೃತಿಗೆಡಬಾರದು, ಇದಕ್ಕೂ ಇದೀಗ ಚಿಕಿತ್ಸೆಗಳು ಪಸ್ಲಾಸ್ಟಿಕ್ ಸರ್ಜರಿಯ ಮೂಲಕ ಇದೆ, ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು. 

ಅಧ್ಯಕ್ಷತೆ ವಹಿಸಿದ್ದ ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ವಾಧಿರಾಜ ಕುಲಕರ್ಣಿ ಮಾತನಾಡಿದರು. 

ಕಾರ್ಯಕ್ರಮದಲ್ಲಿ ಸರ್ಜಿ ಆಸ್ಪತ್ರೆಗಳ ಸಮೂಹದ ಆಡಳಿತಾಧಿಕಾರಿ ಕೆ.ಆರ್. ಪುರುಷೋತ್ತಮ್, ಡಾ.ಹರೀಶ್, ಡಾ.ಹರ್ಷ ಸೇರಿದಂತೆ ಫಲಾನುಭವಿಗಳು ಹಾಗೂ ದಾದಿಯರು, ಸಿಬ್ಬಂದಿಗಳು ಹಾಜರಿದ್ದರು. ಇದೇ ಸಂದರ್ಭದಲ್ಲಿ ಫಲಾನುಭವಿಗಳು ಅನಿಸಿಕೆ ಹಂಚಿಕೊಂಡರು.

RELATED ARTICLES
- Advertisment -
Google search engine

Most Popular

Recent Comments