Thursday, December 5, 2024
Google search engine
Homeಅಂಕಣಗಳುಲೇಖನಗಳುಅಭಿವೃದ್ಧಿಗಾಗಿ ಈಶ್ವರಪ್ಪರನ್ನು ಜನ ಬೆಂಬಲಿಸಲಿದ್ದಾರೆ

ಅಭಿವೃದ್ಧಿಗಾಗಿ ಈಶ್ವರಪ್ಪರನ್ನು ಜನ ಬೆಂಬಲಿಸಲಿದ್ದಾರೆ

ಈಗಾಗಲೇ ಹಲವಾರು ಚುನಾವಣೆಗಳಲ್ಲಿ ಪಾಲ್ಗೊಂಡವರೂ, ಚುನಾವಣಾ ಚಟುವಟಿಕೆಗಳನ್ನು ಬಲು ಹತ್ತಿರದಿಂದ ಬಲ್ಲವರೂ ಆದ ಆಯನೂರು ಮಂಜುನಾಥ್, ಸದ್ಯ ವಿಧಾನಪರಿಷತ್ ನೈಋತ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿ ಕೂಡ. ಅವರ ಚುನಾವಣೆ ಸಹ ಹತ್ತಿರದಲ್ಲೇ ಇದೆ. ಈ ಸಂದರ್ಭದಲ್ಲಿ ವಿಧಾನಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿಗಳ ಗೆಲುವಿಗಾಗಿ ಅವರು ಓಡಾಡುತ್ತಿ ದ್ದಾರೆ. ಬಿಡುವಿಲ್ಲದ ಓಡಾಟದ ನಡುವೆಯೂ ಆಯನೂರು ಮಂಜುನಾಥರನ್ನು ಮಾತನಾಡಿಸಿದಾಗ ತಮ್ಮ ಮನದಾಳದ ಮಾತುಗಳನ್ನು ‘ನಮ್ಮನಾಡು’ಗೆ ತೆರೆದಿಟ್ಟಿದ್ದು ಹೀಗೆ:

 ಶಿವಮೊಗ್ಗ ಕ್ಷೇತ್ರದ ಅಭ್ಯರ್ಥಿ ಈಶ್ವರಪ್ಪನವರು ಎಷ್ಟೋ ಮುಂಚೆಯೇ ಅಡಿಕೆ ಮಂಡಿ ನೌಕರರಿಗಾಗಿ ಮನೆ ನಿರ್ಮಾಣ ಮಾಡಿಸಿಕೊಟ್ಟು, ಕಾರ್ಮಿಕ ಕ್ಷೇತ್ರ ಕುರಿತು ತಮ್ಮ ಬದ್ಧತೆಯನ್ನು ತೋರಿಸಿದ್ದಾರೆ. ಅವರನ್ನು ಗೆಲ್ಲಿಸಿದರೆ ಮುಂದಿನ ದಿನಗಳಲ್ಲಿ ಆಶ್ರಯ ನಿವೇಶನಗಳ ವಿಲೇವಾರಿ ಮಾಡಿ, ಬಡವರು, ಕಾರ್ಮಿಕರು, ನೌಕರರಿಗೆ ನೆಲೆ ಕಲ್ಪಿಸುತ್ತಾರೆಂಬ ನಂಬಿಕೆ ನನಗಿದೆ.
ಸಂಘ ಪರಿವಾರದ ಹಿನ್ನೆಲೆಯಲ್ಲಿ ಬೆಳೆದಿರುವ ನಮ್ಮ ನಾಯಕ ಕೆ.ಎಸ್.ಈಶ್ವರಪ್ಪನವರು ಧರ್ಮ, ಸಂಸ್ಕೃತಿ, ಆಚಾರ, ವಿಚಾರಗಳ ಬಗ್ಗೆ ಜ್ಞಾನ ಹೊಂದಿರುವಂತವರು. ಇವರ ಗೆಲುವಿನಿಂದ ಶಿವವಗ್ಗ ನಗರದಲ್ಲಿ ನಮ್ಮ ಸಂಸ್ಕೃತಿಯ ಉಳಿವು ಹೆಚ್ಚಾಗುತ್ತದೆ. ಅಲ್ಲದೆ, ಧಾರ್ಮಿಕ ಕಾರ್ಯಕ್ರಮಗಳು ನಮ್ಮ ನಡುವೆ ನಡೆಯಲು ಅನುಕೂಲವಾಗುತ್ತದೆ. ಈ ಎಲ್ಲಾ ಹಿನ್ನೆಲೆಯಲ್ಲಿ ಶಿವವಗ್ಗ ನಗರದ ಮತದಾರರು ಈ ಬಾರಿ ಈಶ್ವರಪ್ಪನವರನ್ನು ಗೆಲ್ಲಿಸಬೇಕೆಂಬ ನಿರ್ಧಾರಕ್ಕೆ ಬಂದಿದ್ದಾರೆ.
ಐದು ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ಕಾಂಗ್ರೆಸ್ ಸರ್ಕಾರ ವಾಗಲಿ, ಜನಪ್ರತಿನಿಧಿಗಳಾಗಲಿ, ಜಿಲ್ಲೆಗೆ ಹೇಳಿಕೊಳ್ಳುವಂತಹ ಒಂದು ಯೋಜನೆಯನ್ನೂ ಕೊಟ್ಟಿಲ್ಲ. ಗಾಂಧಿ ಪಾರ್ಕ್, ಲಯನ್ ಸಫಾರಿಗಳಂಥವು ಕೂಡ ನಿಂತ ನೀರಿನಂತೆ ಆಗಿವೆ. ಈ ಕೊರತೆ ನೀಗಿಸಬೇಕಿದೆ.
ಶಿವಮೊಗ್ಗದಲ್ಲಿ ಔಜ ಖmZಛಿ ದಿನೇ ದಿನೇ ಕಡಿಮೆ ಆಗುತ್ತಿದೆ. ಅಂದರೆ ಹಾಯಾಗಿ ಉಸಿರಾಡಲು ತಕ್ಕ ಸ್ಥಳ. ನೆಹರೂ ಕ್ರೀಡಾಂಗಣಕ್ಕೆ ಈಗ ಎಲ್ಲರೂ ಹೋಗಲು ಅವಕಾಶ ಇಲ್ಲ. ದೊಡ್ಡ ಪ್ರಮಾಣದ ಸಭೆ ಸಮಾರಂಭ ನಡೆಸಲು ಜಾಗವೇ ಇಲ್ಲ. ಜೈಲು ಸ್ಥಳಾಂತರ ಆಗಿ ಅಲ್ಲೊಂದು ಯೋಜನಾಬದ್ಧವಾದ ಅಂಗಳ ನಿರ್ಮಾಣ ಆಗಬೇಕು. ಈಗಾಗಲೇ ಆಗಬೇಕಿತ್ತು ಇದು. ಆಗಿಲ್ಲ. ಬಿಜೆಪಿ ಸರ್ಕಾರ ಬಂದ ಮೇಲೆ ಈ ಅಗತ್ಯ ಪೂರೈಸಲಿದೆ.
ತುಂಗಾ ನದಿ ದಡದಲ್ಲಿ ನಿರ್ಮಿಸಲಾಗಿರುವ ತಡೆಗೋಡೆ ಹಾಳು ಸುರಿಯುತ್ತಿದೆ. ಅಲ್ಲಿ ಚಂದವಾಗಿ ಗಿಡ ಮರ ಬೆಳೆಸಿ, ಲೈಟಿಂಗ್ ವ್ಯವಸ್ಥೆ, ಸ್ವಚ್ಛತೆ, ಕಾವಲು ಎಲ್ಲ ಮಾಡಿದರೆ ಯಾವ ಹೊತ್ತಿನಲ್ಲಿ ಯಾರು ಬೇಕಾದರೂ ವಾಕ್ ಹೋಗುವಂಥ ಪರಿಸ್ಥಿತಿ ನಿರ್ಮಾಣ ಆಗುತ್ತದೆ. ಅದನ್ನು ಬಿಜೆಪಿ ಜನಪ್ರತಿನಿಧಿಗಳು ಮಾಡುತ್ತಾರೆ.

 ಶಿವಮೊಗ್ಗ ನಗರದಲ್ಲಿ ಕಳೆದ ಐದು ವರ್ಷಗಳಿಂದ ಅಭಿವೃದ್ಧಿ ಎಂಬುದು ನಿಂತ ನೀರಾಗಿದೆ. ಕಾಂಗ್ರೆಸ್ ಅವಧಿಯಲ್ಲಿ ಶಿವಮೊಗ್ಗ ನಗರದಲ್ಲಿ ಗುರುತಿಸುವಂತಹ ಒಂದೇ ಒಂದು ಅಭಿವೃದ್ಧಿ ಕಾಮಗಾರಿಗಳು ನಡೆಯಲಿಲ್ಲ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಲ್ಲಿ ನೋಡಿದರಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಲಾಟರಿ ಹೊಡೆದಂತೆ ಶಾಸಕರಾದ ಕೆ.ಬಿ.ಪ್ರಸನ್ನಕುಮಾರ್ ಶಿವಮೊಗ್ಗ ನಗರದ ಅಭಿವೃದ್ಧಿಗೆ ಕಿಂಚಿತ್ತೂ ಪ್ರಯತ್ನಿಸಲಿಲ್ಲ. ಒಂದು ಧರ್ಮವನ್ನು ಓಲೈಸುವಂತಹ ಮತ್ತು ಓಟ್‌ಬ್ಯಾಂಕ್ ರಾಜಕಾರಣ ಮಾಡುವಂತಹ ಕಾರ್ಯದಲ್ಲಿ ತಮ್ಮ ಐದು ವರ್ಷದ ಅವಧಿಯನ್ನು ಪೂರೈಸಿದ್ದಾರೆ. ಇದೀಗ ಅಭಿವೃದ್ಧಿ ಪರ್ವ ಪುನಃ ಆರಂಭವಾಗಬೇಕಿದೆ.
 ಯಡಿಯೂರಪ್ಪನವರ ಸರ್ಕಾರ ಇದ್ದಾಗ ಎಲ್ಲರಿಗೂ ಒಂದಲ್ಲ ಒಂದು ದುಡಿಮೆಯ ದಾರಿ ತೆರೆದುಕೊಂಡಿತ್ತು. ಈಗ ಅದ್ಯಾವುದೂ ಇಲ್ಲ. ಪುನಃ ಅವನ್ನು ತೆರೆಯಬೇಕಾಗಿದೆ. ಜನರು ಸ್ವಾಭಿಮಾನದಿಂದ ಬದುಕುವ ಅವಕಾಶ ಮೂಡಿಸಬೇಕಾಗಿದೆ.
ಧರ್ಮ, ದೇವರು, ವೈಯಕ್ತಿಕ ನಂಬಿಕೆಗಳು ಇವುಗಳ ಬಗ್ಗೆ ಯಾರ ಪರ, ವಿರೋಧವನ್ನೂ ವಹಿಸದೆ, ಹಿಡನ್ ಅಜೆಂಡಾ ಇಲ್ಲದಂಥ ಜನಪ್ರತಿನಿಧಿಗಳು ಆಗಿನ ಅಗತ್ಯ. ಅಂಥ ಪ್ರಾಮಾಣಿಕ ಜನಪ್ರತಿನಿಧಿಗಳು ಸಿಗುವುದು ಬಿಜೆಪಿಯಲ್ಲಿ ಮಾತ್ರ.
ಈಗ ಸುರಕ್ಷತೆಯ ಕೊರತೆ ಉಂಟಾಗಿದೆ ಅನ್ನುವುದು ಜನರ ಭಾವನೆ. ಎಲ್ಲ ಕಡೆ ಭಯದ ವಾತಾವರಣ. ಗಾಂಧಿ ಪಾರ್ಕ್‌ನಂಥ ಕಡೆ ಚಾಕು ಇರಿತಗಳಾಗುತ್ತಿವೆ. ಕೊಲೆಗಳೂ ಆಗಿವೆ. ಬಿಜೆಪಿ ಜನಪ್ರತಿನಿಧಿಗಳು ಇದ್ದಲ್ಲಿ ಗೂಂಡಾಗಿರಿಗೆ ಅವಕಾಶವಿಲ್ಲ.
ಇಎಸ್‌ಐ ಆಸ್ಪತ್ರೆಗೆ ಅನುಮೋದನೆ ಸಿಕ್ಕಿದೆ. ಕಾಂಗ್ರೆಸ್ ಸರ್ಕಾರ ಜಾಗ ಕೊಡದೆ ಸತಾಯಿಸುತ್ತಿದೆ. ಮಧ್ಯಮ ವರ್ಗದ, ಬಡ ಹಿನ್ನೆಲೆಯ ಮಕ್ಕಳು ಓದಲಿಕ್ಕೆ ಉತ್ತಮ ದರ್ಜೆಯ ಸರ್ಕಾರಿ ಕಾಲೇಜುಗಳು ಹೆಚ್ಚಾಗಬೇಕಾಗಿದೆ. ಸ್ಮಾರ್ಟ್ ಸಿಟಿ ವೇಗವಾಗಿ ಆಗಬೇಕಿದೆ. ಇವೆಲ್ಲವೂ ಆಗಲಿಕ್ಕೆ ಒಂದು ದೃಢವಾದ ಅಭಿವೃದ್ಧಿಶೀಲ ಮನೋಭಾವ ಹೊಂದಿರುವ ಸರ್ಕಾರ, ಜನಪ್ರತಿನಿಧಿಗಳು ಬೇಕು. ಅದು ಬಿಜೆಪಿಯಿಂದ ಮಾತ್ರ ಸಾಧ್ಯವಿದೆ.
ವಿಮಾನ ನಿಲ್ದಾಣ ನಿರ್ಮಾಣದ ಕಾರ್ಯ ನೆನೆಗುದಿಗೆ ಬಿದ್ದಿದೆ. ಅಡಿಕೆ, ಆಟೋಮೊಬೈಲ್ ಬಿಟ್ಟರೆ ಬೇರೆ ರೀತಿಯ ಉದ್ದಿಮೆ ಕಾಣುತ್ತಿಲ್ಲ. ಹೀಗಾಗಿ ಉದ್ಯೋಗಸೃಷ್ಟಿ ಆಗಬೇಕೆಂದರೆ ಹೊರಗಿನ ಉದ್ದಿಮೆದಾರರನ್ನು ತರಬೇಕು. ಅದಕ್ಕೆ ಕೈಗಾರಿಕಾ ಸ್ನೇಹಿಯಾದ ಸರ್ಕಾರ ಬರಬೇಕು. ಇವತ್ತು ಸಮಯವೇ ಹಣ. ಹಾಗಾಗಿ ಕ್ಷಿಪ್ರವಾದ ಸಾರಿಗೆ ಸಂಪರ್ಕಗಳ ಅಭಿವೃದ್ಧಿ ಆಗಬೇಕು. ಇದೆಲ್ಲ ಆಗಲಿಕ್ಕೆ ಯಡಿಯೂರಪ್ಪನವರಂತಹ ಅಭಿವೃದ್ಧಿಯ ಹಸಿವುಳ್ಳ ವ್ಯಕ್ತಿ ಅಧಿಕಾರಕ್ಕೆ ಬಂದರೆ ಮಾತ್ರ ಸಾಧ್ಯ.

ವಿಧಾನಸಭಾ ಚುನಾವಣೆಯ ಬಿಸಿ ಇಡೀ ರಾಜ್ಯದಲ್ಲಿ ತೀವ್ರವಾಗಿದೆ. ಅಂತೆಯೇ ಶಿವಮೊಗ್ಗ ಜಿಲ್ಲೆ, ನಗರಗಳಲ್ಲಿ ಕೂಡ. ಹಿಂದೆ ಬಿಜೆಪಿಯ ಜಿಲ್ಲಾ ಅಧ್ಯಕ್ಷರಾಗಿ, ಪಕ್ಷದಲ್ಲಿ ಹಲವಾರು ಜವಾಬ್ದಾರಿಗಳನ್ನು ಹೊತ್ತಿರುವ ಎಸ್. ದತ್ತಾತ್ರಿ, ಈ ಚುನಾವಣೆಯ ಸಂದರ್ಭದಲ್ಲಿಯೂ ಅನೇಕ ಹೊಣೆಗಾರಿಕೆಗಳನ್ನು ನಿಭಾಯಿಸುತ್ತಿರುವವರು. ಚುನಾವಣೆಯ ತಯಾರಿ ಹೇಗಿದೆ, ಪಕ್ಷದ ಸ್ಥಿತಿ ಗತಿ ಎಂತಿದೆ ಎಂಬ ಬಗ್ಗೆ ‘ನಮ್ಮನಾಡು’ಅವರನ್ನು ಮಾತನಾಡಿಸಿತು.
ಪ್ರಶ್ನೆ: ಶಿವಮೊಗ್ಗದಲ್ಲಿ ಬಿಜೆಪಿ ಗೆಲ್ಲುವ ಸಂಭಾವ್ಯತೆ ಎಷ್ಟು ?
ದತ್ತಾತ್ರಿ: ಆ ಪ್ರಶ್ನೆಯೇ ಅಪ್ರಸ್ತುತ. ಎಷ್ಟು ಅಂತರದಲ್ಲಿ ಗೆಲ್ಲುತ್ತೀರ ಎಂಬ ಪ್ರಶ್ನೆ ಕೇಳಬೇಕು ?
ಪ್ರಶ್ನೆ: ಆಯಿತು, ಹೇಳಿ. ಎಷ್ಟು ಅಂತರದಲ್ಲಿ ಬಿಜೆಪಿ ಗೆಲ್ಲುತ್ತೆ ?
ದತ್ತಾತ್ರಿ: ೨೦,೦೦೦ ಅಂತರದಲ್ಲಿ ನಾವು ಗೆಲ್ಲುತ್ತೇವೆ. ಬರುವ ದಿನಗಳಲ್ಲಿ ಅಂತರ ಇನ್ನೂ ಹೆಚ್ಚಾದರೂ ಆಶ್ಚರ್ಯವಿಲ್ಲ.
ಪ್ರಶ್ನೆ: ಜಿಲ್ಲೆಯಲ್ಲಿ ಹವಾ ಹೇಗಿದೆ ?
ದತ್ತಾತ್ರಿ: ಎಲ್ಲ ಕಡೆ ಬಿಜೆಪಿ ಗಾಳಿ, ಮೋದಿ ಗಾಳಿ ಬೀಸುತ್ತಿದೆ. ಜಿಲ್ಲೆಯ ಎಲ್ಲಾ ೭ ಸ್ಥಾನಗಳನ್ನೂ ನಾವೇ ಗೆಲ್ಲುವ ಸೂಚನೆಗಳೂ ಇವೆ.
ಪ್ರಶ್ನೆ: ಹಾಗಿದ್ದರೆ ಯಡಿಯೂರಪ್ಪನವರು ಮುಂದಿನ ಮುಖ್ಯಮಂತ್ರಿ ಎಂಬುದು ಖಂಡಿತ ?
ದತ್ತಾತ್ರಿ: ನೂರಕ್ಕೆ ನೂರು.
ಪ್ರಶ್ನೆ: ಪ್ರಧಾನಿ ಕೂಡ ಶಿವಮೊಗ್ಗೆಗೆ ಬಂದು ಹೋಗಿದ್ದು ಆಯಿತು. ಚುನಾವಣಾ ವಾತಾವರಣದ ಬಗ್ಗೆ ಏನನ್ನಿಸುತ್ತಿದೆ ?
ದತ್ತಾತ್ರಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶಿವಮೊಗ್ಗೆಗೆ ಬರುತ್ತಾರೆ ಅಂದಾಗಲೇ ಇಡೀ ಜಿಲ್ಲೆಯಲ್ಲಿ ಒಂದು ಸಂಭ್ರಮದ ವಾತಾವರಣ ಮೂಡಿತ್ತು. ನಿಜವಾಗಲೂ ನರೇಂದ್ರ ಮೋದಿಯವರು ಮೇ.೫ರಂದು ಶಿವಮೊಗ್ಗೆಗೆ ಬಂದೇಬಿಟ್ಟಾಗ ಆ ಸಂಭ್ರಮಕ್ಕೆ ಒಂದು ಸಾಕಾರ ರೂಪ ಬಂದಿತು. ಹಿಂದೆಂದೂ ಕಾಣದಷ್ಟು ಸಂಖ್ಯೆಯಲ್ಲಿ ಜನರು ಸ್ವಯಂ ಪ್ರೇರಿತರಾಗಿ ಬಂದು ನಮ್ಮ ಭರವಸೆಯನ್ನು ಹೆಚ್ಚಿಸಿದರು.
ಪ್ರಶ್ನೆ: ಇದರಿಂದ ಮತದಾರರ ಮೇಲೆ ಎಷ್ಟು ಪ್ರಭಾವ ಆಗಬಹುದು ಎನ್ನುತ್ತೀರಿ ?
ದತ್ತಾತ್ರಿ: ಖಂಡಿತ ಒಂದು ದೊಡ್ಡ ರೀತಿಯ ಸಕಾರಾತ್ಮಕ ಪರಿಣಾಮ ಆಗಲಿದೆ. ಅದೇನೆಂಬುದು ಮೇ ೧೨ರಂದು ಎಲ್ಲರಿಗೂ ಗೊತ್ತಾಗಲಿದೆ.
ಪ್ರಶ್ನೆ: ಸ್ಥಳೀಯ ಅಭ್ಯರ್ಥಿಗಳಿಗಿಂತ ಮೋದಿಯವರೇ ಹೆಚ್ಚಿನ ಕ್ಷೇತ್ರಗಳಲ್ಲಿ ಅಭ್ಯರ್ಥಿ ಎಂಬ ರೀತಿಯ ವಾತಾವರಣ ಇದೆಯಲ್ಲ ?
ದತ್ತಾತ್ರಿ: ಒಂದು ರೀತಿಯಲ್ಲಿ ಅದು ನಿಜ. ಮುಂದೆ ೨೦೧೯ರಲ್ಲಿ ಮೋದಿಯವರು ಮತ್ತೊಮ್ಮೆ ಹೆಚ್ಚಿನ ಬಹುಮತದಿಂದ ಆರಿಸಿಬಂದು ಪ್ರಧಾನಿ ಆಗಬೇಕೆಂದರೆ ಕರ್ನಾಟಕದ ಈ ಚುನಾವಣೆಯ ಯಶಸ್ಸು ಅತ್ಯಂತ ಅಗತ್ಯ. ಇದನ್ನು ಅರಿತಿರುವ ಮತದಾರರು ತಮ್ಮ ಮತ ಮೋದಿಗೇ ಎಂಬ ಭಾವನೆಯಲ್ಲಿದ್ದಾರೆ. ಈಗಿನಿಂದಲೇ ಅಂಥದೊಂದು ಭಾವನೆ ಮೂಡಿ ನಿಂತಿರುವುದು ನಿಜವಾಗಿಯೂ ಒಂದು ಆಶಾಕಿರಣ.
ಪ್ರಶ್ನೆ: ಹಾಗಾದಲ್ಲಿ ಶಿವಮೊಗ್ಗ ಜಿಲ್ಲೆಗೆ ನಿಮ್ಮ ಭರವಸೆಗಳು ಏನು ?
ದತ್ತಾತ್ರಿ: ಸಾಕಷ್ಟು ಕೆಲಸಗಳು ಬಾಕಿ ಉಳಿದಿವೆ. ಕಾಂಗ್ರೆಸ್ ಶಾಸಕರು ಕೇವಲ ತುಷ್ಟೀಕರಣದ ರಾಜಕಾರಣವನ್ನೇ ಉದ್ದಕ್ಕೂ ಮಾಡಿಕೊಂಡು ಬಂದರು. ವಿಮಾನ ನಿಲ್ದಾಣ, ಹಳೇ ಕಾರಾಗೃಹದ ವಿಲೇವಾರಿ, ತುಂಗಾ ನದಿ ದಂಡೆ ಯೋಜನೆ ಮೊದಲಾದ ದೊಡ್ಡ ದೊಡ್ಡ ಕೆಲಸಗಳ ಜೊತೆಗೆ ಸ್ವಚ್ಛತೆ, ರಸ್ತೆ, ಚರಂಡಿಯಂತಹ ನಿರಂತರ ಕೆಲಸಗಳ ಕಡೆಗೂ ಆದ್ಯ ಗಮನ ಹರಿಸಬೇಕಾಗಿದೆ. ಇಲ್ಲಿ ಒಂದೂ ಕೆಲಸಗಳು ಆಗಿಲ್ಲ ಅಥವಾ ಆದ ಕೆಲಸಗಳ ಕಾಮಗಾರಿ ಕಳಪೆ ಆಗಿದೆ. ಎಲ್ಲವನ್ನೂ ಒಂದು ತಹಬದಿಗೆ ತರಬೇಕಾಗಿದೆ.
ಪ್ರಶ್ನೆ: ಬರುವ ದಿನಗಳಲ್ಲಿ ಈ ಕಾರ್ಯಗಳನ್ನು ನಿಮ್ಮ ಪ್ರತಿನಿಧಿಯೇ ಮಾಡುತ್ತಾರೆ ಎಂಬ ವಿಶ್ವಾಸ ನಿಮಗಿದೆಯೇ?
ದತ್ತಾತ್ರಿ: ಖಂಡಿತವಾಗಿ ನಾವೇ ಈ ಜವಾಬ್ದಾರಿಗಳನ್ನೆಲ್ಲ ನಿರ್ವಹಿಸುತ್ತೇವೆ.

RELATED ARTICLES
- Advertisment -
Google search engine

Most Popular

Recent Comments