ಬೆಂಗಳೂರು: ನಟಿ ಪವಿತ್ರಾ ಗೌಡಾಗೆ ಪೊಲೀಸ್ ಕಸ್ಟಡಿ ವೇಳೆ ಮೇಕ್ ಅಪ್ ಮಾಡಿಕೊಳ್ಳುವುದಕ್ಕೆ ಅವಕಾಶ ನೀಡಿದ ಮಹಿಳಾ ಸಬ್-ಇನ್ಸ್ ಪೆಕ್ಟರ್ ಗೆ ಪೊಲೀಸ್ ಇಲಾಖೆ ನೊಟೀಸ್ ಜಾರಿ ಮಾಡಿದೆ.
ಜೂ.15 ರಂದು ಪವಿತ್ರಾ ಗೌಡ ಅವರನ್ನು ಸ್ಥಳ ಮಹಜರು ನಡೆಸಲು ಪೊಲೀಸ್ ಅಧಿಕಾರಿಗಳು ಆಕೆಯ
ಮನೆಗೆ ಕರೆದೊಯ್ಯಲಾಗಿತ್ತು. ನಟಿಯನ್ನು ಹಿಂದಿರುಗಿ ಕರೆ ತರುವ ವೇಳೆ ಲಿಪ್ ಸ್ಟಿಕ್ ಹಾಗೂ ಮೇಕಪ್ ಮಾಡಿಕೊಂಡು ನಗುತ್ತಾ ಹೊರಬರುತ್ತಿದ್ದದ್ದು ವಿಡಿಯೋದಲ್ಲಿ ಸೆರೆಯಾಗಿತ್ತು.
ಈ ಕುರಿತು ಡಿಸಿಪಿ ಕಚೇರಿಯಿಂದ ಎಸ್‌ಐಗೆ ನೋಟಿಸ್ ಜಾರಿ ಮಾಡಲಾಗಿದೆ.