ಶಿವಮೊಗ್ಗ ಜಿಲ್ಲೆಯಲ್ಲಿ ಎರಡು ದಿನಗಳಿಂದ ಮಳೆಯ ಹೆಚ್ಚಳ ಹೆಚ್ಚಾಗಿದ್ದು, ತುಂಗಾ ಡ್ಯಾಂನಲ್ಲಿ ಒಳ ಹರಿವು ಹೆಚ್ಚಳವಾಗಿರುವುದರಿಂದ ಗಾಜನೂರಿನ ತುಂಗಾ ಅಣೆಕಟ್ಟಿನ 14 ಗೇಟ್‌ಗಳನ್ನು ತೆರೆಯಲಾಗಿದೆ.
ತುಂಗಾ ನದಿಯಲ್ಲಿ ನೀರಿನ ಹೊರ ಹರಿವಿನಲ್ಲಿ ಹೆಚ್ಚಳವಾಗಿದೆ. ನಗರದ ತುಂಗಾ ಮಂಟಪ ತುಂಬಲು ಕೇವಲ 2 ಅಡಿ ಬಾಕಿಯಿದ್ದು, ತುಂಬಿದ ತುಂಗೆ ಸಾರ್ವಜನಿಕರ ಗಮನ ಸೆಳೆದಿದೆ.
ತುಂಗೆಯ ಒಳಹರಿವು 18442ಕ್ಯೂಸೆಕ್‌ಯಿದ್ದು, ಅಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಡಲಾಗಿದೆ.