ಶಿವಮೊಗ್ಗ : ರಾಜ್ಯ ಮತ್ತು ಜಿಲ್ಲಾ ಟೇಕ್ವಾಂಡೊ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಡಿ.೫ರಿಂದ ೮ರವರೆಗೆ ನೆಹರೂ ಒಳಾಂಗಣ ಕ್ರೀಡಾಂಗಣದಲ್ಲಿ ೩೮ನೇ ರಾಷ್ಟ್ರೀಯ ಜೂನಿಯರ್ ಟೇಕ್ವಾಂಡೊ ಚಾಂಪಿಯನ್ ಶಿಪ್-೨೦೧೮ನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಟೇಕ್ವಾಂಡೊ ಸಂಸ್ಥೆ ಅಧ್ಯಕ್ಷ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಶಿವಕುಮಾರ್ ಹೇಳಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ರಾಷ್ಟ್ರೀಯ ಟೇಕ್ವಾಂಡೊ ಸಂಸ್ಥೆಯ ಅನುಮತಿಯೊಂದಿಗೆ ಈ ಪಂದ್ಯಾವಳಿಯನ್ನು ಆಯೋಜಿಸಲಾ ಗಿದ್ದು, ರಾಷ್ಟ್ರದ ೩೦ ರಾಜ್ಯಗಳಿಂದ ಸುಮಾರು ೧ಸಾವಿರ ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಟೇಕ್ವಾಂಡೊ ಕ್ರೀಡೆಯು ಕೋರಿಯಾದ ಕದನ ಮತ್ತು ಸಮರ ಕಲೆಯಾಗಿದೆ. ಈ ಕಲೆಯು ವಿಶ್ವದ ಅತ್ಯಂತ ಜನಪ್ರಿಯ ಕಲೆಯಾಗಿದೆ. ಇದು ಕೂಡ ಹೋರಾಟದ ತಂತ್ರಗಳನ್ನು, ಸ್ವರಕ್ಷಣೆ, ಕ್ರೀಡೆ, ಕಸರತ್ತು, ಧ್ಯಾನ ಹಾಗೂ ಸಿದ್ದಾಂತಗಳನ್ನು ಒಳ ಗೊಂಡಿದೆ. ಪ್ರಪಂಚದ ೧೮೮ ದೇಶಗಳಲ್ಲಿ ಈ ಕಲೆಯನ್ನು ಅಭ್ಯಾಸಿಸಲಾಗುತ್ತಿದೆ ಹಾಗೂ ಇದು ಒಲಪಿಂಕ್ ಕ್ರೀಡೆಗ ಳಲ್ಲಿರುವ ೨ ಏಷ್ಯನ್ ಸಮರ ಕಲೆಯಲ್ಲಿ ಒಂದಾಗಿದೆ ಎಂದರು.
೧೪ರಿಂದ ೧೭ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ೧೦ ವಿಭಾಗಗಳಲ್ಲಿ, ಪೂಂಮ್‌ಸೇ ೩ ವಿಭಾಗದಲ್ಲಿ, ವೈಯ ಕ್ತಿಕ, ಜೋಡಿ ಮತ್ತು ತಂಡ ವಿಭಾಗದಲ್ಲಿ ನಡೆಯುವ ಈ ಪಂದ್ಯಾವಳಿಯಲ್ಲಿ ಪ್ರತಿ ರಾಜ್ಯದಿಂದ ೧೦ ಬಾಲಕರು ಮತ್ತು ೧೦ ಬಾಲಕಿಯರು ಭಾಗವಹಿಸಲಿದ್ದು, ೧೦೦ಮಂದಿ ತೀರ್ಪುಗಾರರು ಭಾಗವಹಿಸ ಲಿದ್ದಾರೆ. ಎಲ್ಲಾ ಕ್ರೀಡಾಪಟುಗಳಿಗೆ ವಸತಿ, ಊಟದ ವ್ಯವಸ್ಥೆಯನ್ನು ಮಾಡ ಲಾಗಿದೆ ಎಂದು ಸಂಸ್ಥೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ದೊರೈ ತಿಳಿಸಿದರು.
ಡಿ.೫ರಂದು ನೊಂದಣಿ ಕಾರ್ಯ ನಡೆಯಲಿದ್ದು, ೬ರ ಬೆಳಿಗ್ಗೆ ೧೦ಗಂಟೆಗೆ ಸಂಸದ ಬಿ.ವೈ.ರಾಘವೇಂದ್ರ ಹಾಗೂ ಶಾಸಕ ಕೆ.ಎಸ್.ಈಶ್ವರಪ್ಪ ಪಂದ್ಯಾವಳಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿ ಯಾಗಿ ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಚುನಾಯಿತ ಪ್ರತಿನಿಗಳು, ರಾಷ್ಟ್ರ ಮತ್ತು ರಾಜ್ಯ ಟೇಕ್ವಾಂಡೊ ಸಂಸ್ಥೆಯ ಪದಾಕಾರಿಗಳು ಆಗಮಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಉದ್ಯಮಿ ಡಿ.ಎಸ್.ಅರುಣ್, ಬಳ್ಳೇಕೆರೆ ಸಂತೋಷ್, ಮಹೇಶ್, ಅಶ್ವಿನಿ ದೊರೈ, ರಾಜೇಶ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪಂದ್ಯಾವಳಿಯ ಲಾಂಛನವನ್ನು ಬಿಡುಗಡೆ ಮಾಡಲಾಯಿತು.
ಡಿ.೫ ರಿಂದ ರಾಷ್ಟ್ರಮಟ್ಟದ ಟೇಕ್ವಾಂಡೊ ಪಂದ್ಯಾವಳಿ ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಕೆ.ವಿ.ಶಿವಕುಮಾರ್
RELATED ARTICLES