Saturday, November 9, 2024
Google search engine
Homeಇ-ಪತ್ರಿಕೆಪೆಟ್ರೋಲ್-ಡಿಸೇಲ್ ದರ ಏರಿಕೆ ವಿರೋಧಿಸಿ ಬಿಜೆಪಿ ಪ್ರತಿಭಟನೆ: ಶಾಸಕ ಚನ್ನಬಸಪ್ಪ ಬಂಧನ, ಬಿಡುಗಡೆ

ಪೆಟ್ರೋಲ್-ಡಿಸೇಲ್ ದರ ಏರಿಕೆ ವಿರೋಧಿಸಿ ಬಿಜೆಪಿ ಪ್ರತಿಭಟನೆ: ಶಾಸಕ ಚನ್ನಬಸಪ್ಪ ಬಂಧನ, ಬಿಡುಗಡೆ

ರಾಜ್ಯದ ಜನರ ಬದುಕನ್ನು ದುಸ್ತರವಾಗಿಸುತ್ತಿರುವ ಜನವಿರೋಧಿ ಕಾಂಗ್ರೆಸ್‌ ಸರ್ಕಾರಕ್ಕೆ ಧಿಕ್ಕಾರ!: ಶಾಸಕ ಎಸ್ ಎನ್ ಚನ್ನಬಸಪ್ಪ

ಶಿವಮೊಗ್ಗ: ಅವೈಜ್ಞಾನಿಕ ಗ್ಯಾರಂಟಿಗಳ ಹೆಸರಿನಲ್ಲಿ ರಾಜ್ಯದ ಚುಕ್ಕಾಣಿ ಹಿಡಿದ ಭ್ರಷ್ಟ ಕಾಂಗ್ರೆಸ್ ಸರ್ಕಾರ ತನ್ನ ಖಜಾನೆಯನ್ನು ತುಂಬಿಸಿಕೊಳ್ಳಲು ಬೆಲೆ ಏರಿಕೆ ಗ್ಯಾರಂಟಿ ಪ್ರಾರಂಭಿಸಿದೆ. ತೈಲದರ ಏರಿಕೆ ಮಾಡಿ ಕನ್ನಡಿಗರಿಗೆ ಇಂಧನ ಬರೆ ಹಾಕಿರುವ ಕಾಂಗ್ರೆಸ್, ದಿನದಿಂದ ದಿನಕ್ಕೆ ಹೊಸ ಗ್ಯಾರೆಂಟಿಗಳೊಂದಿಗೆ ಜನಸಾಮಾನ್ಯರನ್ನು ಸುಲಿಗೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರ ಇದೀಗ ತರಕಾರಿ, ಹಣ್ಣು, ದಿನಸಿ ಸೇರಿದಂತೆ ದಿನಬಳಕೆಯ ವಸ್ತುಗಳ ಹಾಗೂ ಕುಡಿಯುವ ನೀರಿಗೂ ಸುಂಕ ಹೆಚ್ಚಿಸಿ ಕನ್ನಡಿಗರಿಗೆ ಮತ್ತಷ್ಟು ಬೆಲೆ ಏರಿಕೆಯ ಬರೆ ಹಾಕುವ ಮೂಲಕ ರಾಜ್ಯ ಹಾಗೂ ರಾಜ್ಯದ ಜನತೆಯನ್ನು ದಿವಾಳಿ ಮಾಡಲು ಹೊರಟಿರುವ ಕಾಂಗ್ರೆಸ್ ಸರ್ಕಾರಕ್ಕೆ ನನ್ನ ಧಿಕ್ಕಾರವಿರಲಿ ಎಂದು ಶಾಸಕರಾದ ಎಸ್ ಎನ್ ಚನ್ನಬಸಪ್ಪ ಹೇಳಿದರು.

ಇಂದು ಬಿಜೆಪಿ ಶಿವಮೊಗ್ಗ ನಗರದ ವತಿಯಿಂದ ರಾಜ್ಯ ಸರ್ಕಾರದ ಡಿಸೇಲ್- ಪೆಟ್ರೋಲ್ ದರ ಏರಿಕೆಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಅವರು ಭಾಗವಹಿಸಿ, ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಪೊಲೀಸರು ಶಾಸಕ ಚೆನ್ನಬಸಪ್ಪ ಸೇರಿದಂತೆ ಕೆಲವರನ್ನು ಬಂಧಿಸಿ, ಬಿಡುಗಡೆಗೊಳಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments