Saturday, November 9, 2024
Google search engine
Homeಅಂಕಣಗಳುಲೇಖನಗಳುಮಾಂಸಾಹಾರ -ಭಾರತೀಯ ರೈತನ ಸಂಕಟ

ಮಾಂಸಾಹಾರ -ಭಾರತೀಯ ರೈತನ ಸಂಕಟ

ಭಾರತೀಯ ಪರಿಸರ ಕಾರ್ಯಕರ್ತೆಯಾಗಿ ನಾನು ಮಾಂಸಾಹಾರ ವಿರೋಧಿಸುವುದಿಲ್ಲ ಎನ್ನುವ ಸುನೀತಾ ನಾರಿಯನ್

ಮಾಂಸಾಹಾರದ ಕುರಿತು ಚರ್ಚಿಸುವುದು ಸುಲಭವಲ್ಲ. ಭಾವನಾತ್ಮಕವಾಗಿ ದೇಶವನ್ನು ಇಬ್ಭಾಗವಾಗಿಸಿರುವ ವಿಷಯವಿದು. ಆದರೂ ಇದರ ಕುರಿತು ಚರ್ಚಿಸಲೇಬೇಕೆಂದು ಅನ್ನಿಸಿದ್ದು, ಸುನೀತ ನಾರಿಯನ್ ಅವರು ತಮ್ಮ ಲೇಖನವೊಂದರಲ್ಲಿ ನೀಡಿರುವ ಹೇಳಿಕೆಯ ಕಾರಣದಿಂದ. ಇವರು ಹೊಸದಿಲ್ಲಿಯಲ್ಲಿರುವ ವಿಜ್ಞಾನ ಮತ್ತು ಪರಿಸರ ಕೇಂದ್ರದ ನಿರ್ದೇಶಕಿ. ನನಗೆ ತಿಳಿದಂತೆ, ಇಂದಿಗೆ ಮೂವತ್ತೈದು ವರ್ಷಗಳ ಹಿಂದೆಯೇ ಪತಿ ಅನಿಲ್ ಅಗರ್ ವಾಲ್‌ರೊಂದಿಗೆ ಭಾರತದಲ್ಲಿ ಪರಿಸರ ರಕ್ಷಣೆಯ ಕುರಿತು ವೈಜ್ಞಾನಿಕ ಸಂಶೋಧನೆ ಗಳನ್ನಾಧರಿಸಿದ ಚರ್ಚೆಯನ್ನು ಆರಂಭಿಸಿz ವರು. ಡೌನ್ ಟು ಅರ್ಥ್’ ನಿಯತಕಾಲಿಕದ ಮೂಲಕ ಭಾರತದಲ್ಲಿ ಪರಿಸರ ಸಂಬಂಧಿ ವಿಷಯಗಳನ್ನು ಸಮರ್ಥವಾಗಿ ಪ್ರತಿಪಾದಿ ಸುತ್ತಿರುವವರು.
ನಾನೋರ್ವ ಭಾರತೀಯ ಪರಿಸರ ವಾದಿಯಾಗಿ ಭಾರತದಲ್ಲಿ ಮಾಂಸಾಹಾರದ ನಿಷೆಧವನ್ನು ಬೆಂಬಲಿಸುವುದಿಲ್ಲ ಎನ್ನುವುದು ಅವರ ಲೇಖನದಲ್ಲಿರುವ ಹೇಳಿಕೆ. ಇದೊಂದು ಆಸಕ್ತಿದಾಯಕ ಹೇಳಿಕೆ. ಏಕೆಂ ದರೆ ಭೂಮಿಯ ತಾಪದ ಹೆಚ್ಚಳದಲ್ಲಿ ಮುಖ್ಯ ಕೊಡುಗೆ ಮಾಂಸಾಹಾರಿಗಳದ್ದು ಎನ್ನುವುದನ್ನು ಸಂಶೋಧನೆಗಳು ಸಾಬೀತುಪಡಿಸಿವೆ! ಹಸಿರು ಮನೆ ಪರಿಣಾಮವನ್ನುಂಟು ಮಾಡುವ ಅನಿಲಗಳ ಶೇ.೧೫ರಷ ಉತ್ಪಾದನೆ ಕೃಷಿ ಚಟುಟಿಕೆಗಳಿಂದ ಉಂಟಾಗುತ್ತದೆ ಮತ್ತು ಅದರಲ್ಲಿ ಅರ್ಧಪಾಲು ಮಾಂಸ ಉತ್ಪಾ ದನೆಯ ಪಕ್ರಿಯೆಯಿಂದ ಉಂಟಾಗುತ್ತದೆ. ಇಷ್ಟೇ ಅಲ್ಲದೇ ಲಭ್ಯವಿರುವ ಭೂಮಿಯಲ್ಲಿ ಶೇ.೩೦ರಷ್ಟು ಪ್ರದೇಶ ಮಾಂಸ ಉತ್ಪಾದನೆ ದೃಷ್ಟಿಯಿಂದ ಬೆಳೆಸುವ ಪಶುಗಳ ಆಹಾg ಕ್ಕಾಗಿ ಬಳಕೆಯಾಗುತ್ತದೆ. ಇಷ್ಟಿದ್ದೂ ಸುನೀತ ಅವರು ಭಾರತಕ್ಕೆ ಸೀಮಿತವಾಗಿ ಮಾಂಸಾ ಹಾರವನ್ನು ಬೆಂಬಲಿಸಲು ಕಾರಣವೇನು? ಅದರಲ್ಲೂ ಇಂದಿನ ರಾಜಕೀಯ ಸನ್ನಿವೇಶ ದಲ್ಲೂ ಸ್ಪಷ್ಟವಾಗಿ ಇದರ ಕುರಿತು ಮಾತನಾ ಡಲು ಕಾರಣವೇನು? ಎಂಬುದು ಬಹು ಮುಖ್ಯ ಪ್ರಶ್ನೆ.
ಅವರೇ ಹೇಳುವಂತೆ ಮೂರು ಕಾರಣಗಳಿವೆ.
೧.ಭಾರತೀಯ ಆಹಾರ ಪದ್ಧತಿಯ ವೈವಿಧ್ಯತೆ ಮತ್ತು ಅದರೊಂದಿಗೆ ಹಾಸು ಹೊಕ್ಕಾ ಗಿರುವ ಜೀವನ ಕ್ರಮ.
೨.ನಮ್ಮ ದೇಶದ ಬಹುಸಂಖ್ಯಾತರಿಗೆ ಪ್ರೊಟೀನ್ ಲಭ್ಯತೆಯ ಏಕೈಕ ಮೂಲ ಮಾಂಸಾಹಾರ. ಹಾಗಾಗಿ ದೇಶದ ಪೌಷ್ಟಿ ಕಾಂಶಗಳ ಭದ್ರತೆಯ ದೃಷ್ಟಿಯಿಂದ ಇದು ಅನಿವಾರ್ಯ.
೩.ನಮ್ಮ ದೇಶದಲ್ಲಿ ಮಾಂಸದ ಉತ್ಪಾದನೆಗೆ ಅನುಸರಿಸುವ ವಿಧಾನ ಮತ್ತು ಬಳಕೆಯ ಪ್ರಮಾಣ. ಅಮೆರಿಕ ದೇಶದಲ್ಲಿ ಮಾಂಸದ ಸರಾಸರಿ ಬಳಕೆ ಪ್ರತಿ ವ್ಯಕ್ತಿಗೆ ವಾರ್ಷಿಕ ೧೨೦ ಕೆ.ಜಿ.ಗಳಾದರೆ, ಭಾರತ ದಲ್ಲಿ ಬಳಕೆ ಪ್ರಮಾಣ ಕೇವಲ ೩ರಿಂದ ೫ ಕೆ.ಜಿ.ಗಳು ಮಾತ್ರ!
ಮುಂದುವರಿದು ಸುನೀತ ಅವರು ಇನ್ನೂ ಕೆಲವು ಸಮರ್ಥನೆಗಳನ್ನು ನೀಡು ತ್ತಾರೆ. ನಮ್ಮ ದೇಶದಲ್ಲಿ ಜಾರಿಯಲ್ಲಿರುವ ಕೃಷಿ ಪದ್ಧತಿಯನ್ನು ವೈಜ್ಞಾನಿಕವಾಗಿ ‘ಅಗೋ- ಸಿಲ್ವೋ- ಪಾಸ್ಟೋರಿಲಿಸಂ’ ಎಂದು ಗುರು ತಿಸಲಾಗುತ್ತದೆ. ಅಂದರೆ, ನಮ್ಮಲ್ಲಿ ಭೂಮಿ ಯನ್ನು ಮುಖ್ಯವಾಗಿ ಆಹಾರ ಬೆಳೆಗಳಿಗಾಗಿ ಮತ್ತು ಕೆಲವು ಮರಗಳ ಬೆಳವಣಿಗೆಗಾಗಿ ಬಳಸಲಾಗುತ್ತದೆ. ಆಹಾರ ಬೆಳೆಗಳ ಮತ್ತು ಮರಗಳ ಉಪಉತ್ಪನ್ನಗಳನ್ನು ಪಶುಗಳ ಸಾಕಾಣಿಕೆಗಾಗಿ ಬಳಸಲಾಗುತ್ತದೆ. ಎಲ್ಲೂ ಭೂಮಿಯನ್ನು ಕೇವಲ ಪಶುಗಳ ಸಾಕಾಣಿಕೆ ಗಾಗಿ ಪೂರ್ಣ ವಾಗಿ ಮೀಸಲಿಡುವ ವಿಧಾನ ಗಳಿಲ್ಲ. ಆಹಾರ ಬೆಳೆಗಳಿಂದ ಧಾನ್ಯಗಳ ಸಂಗ್ರಹಣೆ ಮಾಡಿ ಉಳಿದದ್ದನ್ನು ಪಶುಗಳ ಆಹಾರವಾಗಿ ಬಳಸಲಾಗುತ್ತದೆ. ಮರ ಗಳಿಂದ ರೈತ ತನ್ನ ಅಗತ್ಯವನ್ನು ಪೂರೈಸಿ ಕೊಂಡು ಉಳಿದದ್ದನ್ನು ಪಶುಗಳಿಗೆ ನೀಡು ತ್ತಾನೆ. ಹಾಗಾಗಿ ಎಲ್ಲೂ ಮಾಂಸದ ಉತ್ಪಾದನೆ ಗಾಗಿ ಭೂಮಿಯನ್ನೋ, ನೀರನ್ನೋ ಅಥವಾ ಇನ್ಯಾವುದೋ ಸಂಪನ್ಮೂಲವನ್ನೋ ನೇರ ಬಳಕೆ ಮಾಡುವುದಿಲ್ಲ. ಹಾಗಾಗಿ ಮುಂದು ವರಿದ ದೇಶಗಳ ರೀತಿಯಲ್ಲಿ ಭಾರತೀಯ ರೈತರ ಪಶು ಸಾಕಾಣಿಕೆ ಪರಿಸರ ವಿರೋಧಿಯಲ್ಲ.
ಸುನೀತ ಅವರ ಪ್ರಕಾರ ಪಶುಗಳು ರೈತರ ಪಾಲಿಗಿರುವ ಬಲವಾದ ವಿಮೆ. ಯಾವುದೇ ವೈಪರೀತ್ಯಗಳಿಗೆ ರೈತ ಈಡಾದಾಗ, ಅವನಿಗೆ ಪಶುಗಳು ಅಗತ್ಯ ಸಂಪನ್ಮೂಲ ಸಂಗ್ರಹಣೆ ಗಿರುವ ಮಾರ್ಗ. ರೈತನಿಗೆ ಬ್ಯಾಂಕುಗಳಿಗಿಂತ ಹೆಚ್ಚಿನ ಆರ್ಥಿಕ ರಕ್ಷಣೆಯನ್ನು ಪಶುಗಳು ನೀಡುತ್ತವೆ. ವಾರದ ಸಂತೆಯಲ್ಲಿ ತಕ್ಷಣ ಬಿಕರಿ ಯಾಗುವ ಪಶುಗಳು ಅವನ ತುರ್ತು ಅಗತ್ಯ ವನ್ನು ಪೂರೈಸಲು ಸಮರ್ಥವಾಗಿರುತ್ತವೆ. ಇದಷ್ಟೇ ಅಲ್ಲದೆ, ಪಶು ಗಳು ಅದರಲ್ಲೂ ಹಸು ಮತ್ತು ಎಮ್ಮೆಗಳು ರೈತನಿಗೆ ಇನ್ನೂ ಅನೇಕ ಪ್ರಯೋ ಜನ ನೀಡುತ್ತವೆ. ಉಳು ಮೆ ಮತ್ತು ಸಾಗಾಣಿಕೆಗೆ ಜೊತೆಯಾಗುತ್ತವೆ ಹಾಗೂ ಆತನ ಹಾಲಿನ ಅಗತ್ಯ ವನ್ನೂ ಪೂರೈಸುತ್ತವೆ.
ಬಹಳ ಪ್ರಮುಖ ವಾದ ವಿಷಯವೆಂದರೆ, ಭಾರತದಲ್ಲಿ ಪಶು ಸಾಕು ವವರಲ್ಲಿ ಸಣ್ಣ ಮತ್ತು ಅತೀ ಸಣ್ಣ ರೈತರೇ ಹೆಚ್ಚು. ಪಶ್ಚಿಮದಲ್ಲಿರು ವಂತೆ ಬೃಹತ್ ಉದ್ಯಮಿ ಗಳಲ್ಲ. ಹಸು ಮತ್ತು ಎಮ್ಮೆ ಗಳಿಂದ ರೈತನಿಗೆ ಸಿಗುವ ಲಾಭಗಳು ಈ ಪ್ರಕಾರ ದಲ್ಲೇ ಇರುತ್ತವೆ; ಹಾಲು ಇಲ್ಲವೇ ಅವುಗಳ ಸ್ನಾಯು ಶಕ್ತಿಯ ಲಾಭ (ಉಳುಮೆ, ಗಾಡಿ ಎಳೆಯಲು ಇತ್ಯಾದಿ), ಗೊಬ್ಬರ, ಮಾಂಸ ಮತ್ತು ಚರ್ಮ. ಗಮನಿಸಬೇಕಾದ ಅಂಶ ಮಾಂಸ ಮತ್ತು ಚರ್ಮ ಕೊನೆಯ ಹಂತದ ಲಾಭಗಳು ಎನ್ನುವುದು.
ಸುನೀತ ಅವರು ಇನ್ನೊಂದು ಪ್ರಮುಖ ವಾದ ಅಂಶವನ್ನು ಪ್ರ ಸ್ತಾಪಿಸುತ್ತಾರೆ. ಐತಿ ಹಾಸಿಕವಾಗಿ ಎತ್ತು, ಕೋಣ, ಎಮ್ಮೆ ಮತ್ತು ಹಸುಗಳನ್ನು ಅವುಗಳ ಸ್ನಾಯುಶಕ್ತಿಯ ಬಳಕೆಯ ಮೂಲ ಉದ್ದೇಶದಿಂದಲೇ ಸಾಕಲಾಗುತ್ತಿತ್ತು. ನಾನು ಸಣ್ಣವನಿದ್ದಾಗ ನಾಟಿ ಹಸು ಗಳನ್ನು ಉಳುಮೆಗಾಗಿ ಬಳಸುತ್ತಿದ್ದುದನ್ನು ಹತ್ತಿರ ದಿಂದ ಕಂಡಿದ್ದೇನೆ. ಉಳುಮೆ ದಿನಗಳಲ್ಲಿ ಅಜ್ಜಿ ಅವುಗಳಿಂದ ಹಾಲನ್ನು ಹೆಚ್ಚು ಹಿಂಡಿದರೆ ಬಡಕಲಾಗಿ ಉಳುಮೆಗೆ ತೊಂದರೆ ಯಾಗುತ್ತ ದೆಂದು ಹೇಳುತ್ತಿ ದ್ದದ್ದು ನನಗೆ ನೆನಪಿದೆ. ಹೈನುಗಾರಿಕೆ ಎನ್ನುವುದು ಮನೆಯ ಹಾಲು, ತುಪ್ಪ, ಮೊಸರು ಮಜ್ಜಿಗೆ ಪೂರೈ ಕೆಯ ಸೀಮಿತ ಉದ್ದೇಶವನ್ನು ಮಾತ್ರ ಹೊಂದಿತ್ತು.
೧೯೭೦ರ ದಶಕದಲ್ಲಿ ಹಸಿರು ಕಾಂತಿಯ ಹೆಸರಲ್ಲಿ ಹಳ್ಳಿಹಳ್ಳಿಗೆ ದಾಳಿಯಿಟ್ಟ ಟ್ರ್ಯಾಕ್ಟರ್‌ಗಳು ಎತ್ತು ಎಮ್ಮೆಗಳ ಸ್ನಾಯುಶಕ್ತಿಯ ಮೇಲಿನ ಅವ ಲಂಬನೆಯನ್ನು ಕಡಿಮೆ ಮಾಡಿದವು. ತಾವೇ ಸಾಕಿದ ರಾಸುಗಳಿಂದ ತಮ್ಮ ಅಗತ್ಯದ ಶಕ್ತಿ ಯನ್ನು ಉತ್ಪಾದಿಸಿ ಕೊಳ್ಳುತ್ತಿದ್ದ ರೈತರನ್ನು ಸಾಲಗಾರರಾಗಿಸಿದ ಮೊದಲ ಯಂತ್ರವೇ ಈ ಟ್ರಾಕ್ಟರ್! ೧೯೮೦ರಲ್ಲಿ ಎನ್.ಎಸ್. ರಾಮ ಸ್ವಾಮಿ ಎನ್ನುವ ‘ಪ್ರಾಣಿ ಶಕ್ತಿ’ ತಜ್ಞರು ಅಂದು ಲಭ್ಯವಿದ್ದ ಪ್ರಾಣಿ ಸ್ನಾಯು ಶಕ್ತಿಯ ಲೆಕ್ಕ ತೆಗೆಯುತ್ತಾರೆ. ಅವರ ಪ್ರಕಾರ ಅಂದು ಭಾರತದಲ್ಲಿ ಲಭ್ಯವಿದ್ದ ವಿದ್ಯುತ್ ಉತ್ಪಾದನ ಕೇಂದ್ರಗಳ ಒಟ್ಟು ಶಕ್ತಿಯಷ್ಟು ಪಶು ಸ್ನಾಯು ಶಕ್ತಿ ದೇಶದಲ್ಲಿತ್ತು! ಆದರೆ, ಇದೆಲ್ಲವೂ ಹಸಿರು ಕ್ರಾಂತಿಯ ಹುಚ್ಚಿನಲ್ಲಿ ದೇಶದಲ್ಲಾದ ಯಾಂತ್ರೀಕರಣದ ಹೊಳೆಯಲ್ಲಿ ಕೊಚ್ಚಿ ಹೋಯಿತು.
ಈ ಯಾಂತ್ರೀಕರಣದ ಪ್ರಭಾವ ಎಷ್ಟ್ಟರ ಮಟ್ಟಿಗೆ ಆಯಿತು ಎಂದರೆ ಸುಮಾರು ೨೦೦೦ ಇಸವಿ ಹೊತ್ತಿಗೆ ದೇಶದಲ್ಲಿ ಲಭ್ಯವಿದ್ದ ಒಟ್ಟು ರಾಸುಗಳಲ್ಲಿ ಕೇವಲ ಶೇ.೨೮ ಮಾತ್ರ ಗಂಡು ಪಶುಗಳಿದ್ದವು! ಈಗ ಹೈನುಗಾರಿಕೆಗಾಗಿ ಮಾತ್ರ ಪಶುಗಳು ಎಂಬಂತಾಗಿದೆ! ರೈತನಿಗೆ ನೇರವಾಗಿ ಅರಿವಾಗದಿರುವ
ಲೆಕ್ಕವೊಂದು ಇಲ್ಲಿದೆ. ೧೫ರಿಂದ ೨೦ ವರ್ಷ ಬದುಕುವ ಹಸು, ಎಮ್ಮೆಗಳು ೭ರಿಂದ ೮ ವರ್ಷ ಮಾತ್ರ ಕರುಗಳನ್ನು ಹಾಕಿ ಹಾಲು ನೀಡ ಬಲ್ಲವು. ಉಳಿದ ಅರ್ಧ ಆಯಸ್ಸು ಅವು ಹೈನು ಗಾರಿಕೆಯ ದೃಷ್ಟಿಯಿಂದ ಪ್ರಯೋಜಕವಲ್ಲ. ಸುನೀತ ಅವರ ತಂಡದ ಪರಿಣಿತರ ಲೆಕ್ಕಾ ಚಾರದ ಪಕಾರ ಒಂದು ಹಸುವನ್ನು ಸಾಕಲು ವರ್ಷಕ್ಕೆ ಸರಾಸರಿ ೭೦ ಸಾವಿರ ರೂ.ಗಳಷ ಖರ್ಚು ರೈತನಿಗೆ ತಗುಲುತ್ತದೆ! ಒಂದು ಹಸು ಸರಾಸರಿ ೧೦ ಲೀಟರ್ ಹಾಲನ್ನು ದಿನ ವೊಂದಕ್ಕೆ ನೀಡುತ್ತದೆ ಎಂದರೆ ೮ ತಿಂಗಳಲ್ಲಿ ಅದು ನೀಡುವ ಹಾಲಿನ ಪ್ರಮಾಣ ೨೪೦೦ ಲೀಟರ್. ಪ್ರತಿ ಲೀಟರಿಗೆ ೨೫ ರೂ.ಗಳ ರೀತಿಯಲ್ಲಿ ರೈತನಿಗೆ ದೊರೆಯ ಬಹುದಾದ ಒಟ್ಟು ಮೊತ್ತ ೬೦ ಸಾವಿರ ರೂ. ಗಳು ಮಾತ್ರ ಅಂದರೆ ರೈತ ಕೈಯಿಂದ ಇನ್ನೂ ೧೦ ಸಾವಿರ ರೂ. ಹೊಂದಿಸುವ ಅಗತ್ಯವಿರು ತ್ತದೆ! ತಾನು ಬೆಳೆದ ಹುಲ್ಲನ್ನೋ ಇಲ್ಲವೇ ತನ್ನ ಆಹಾರಕ್ಕಾಗಿ ಬೆಳೆದುಕೊಂಡ ಬೆಳೆಯ ಉಳಿಕೆ ಭಾಗವನ್ನೋ ಪಶುವಿನ ಆಹಾರವಾಗಿ ಬಳಸುತ್ತಿರುವು ದರಿಂದ ರೈತ ಬಚಾವ್. ಜೊತೆಗೆ ದೊರೆ ಯುವ ಗೊಬ್ಬರ ಒಂದಿಷ್ಟು ಅನುಕೂಲ ವಾಗುತ್ತದೆ. ಪಶ್ನೆಯಿರುವುದು ಹಸುವಿನ ಅರ್ಧ ಆಯಸ್ಸು ಮಾತ್ರ ಹೈನು ಗಾರಿಕೆಗೆ ಯೋಗ್ಯವಾಗಿರುವುದರಿಂದ ಅದರ ಉಳಿದ ಆಯಸ್ಸಿನಲ್ಲಿ ಅದರ ಸಾಕಾಣಿಕೆಯನ್ನು ರೈತ ಹೇಗೆ ಮಾಡಬೇಕೆಂಬುದು? ಈ ಕಾರಣ ಗಳಿಂದ ನಾನು ಬಡ ರೈತನಿಗೆ ಅಲ್ಪ ಲಾಭ ತರಬಹುದಾದ ಮಾಂಸ ಹಾಗೂ ಚರ್ಮ ಮಾರಾಟದ ಮೇಲಿನ ನಿಷೇಧವನ್ನು ಬೆಂಬಲಿಸುವುದಿಲ್ಲ ಎನ್ನುತ್ತಾರೆ ಸುನೀತ.

-ಸದಾನಂದ ಆರ್.

RELATED ARTICLES
- Advertisment -
Google search engine

Most Popular

Recent Comments