ವಿಜಯಪುರ: ದಲಿತ ವಿದ್ಯಾರ್ಥಿ ಪರಿಷತ್ ನಗರದ ಗಾಂಧೀ ವೃತ್ತ ದಿಂದ ಅಂಬೇಡ್ಕರ್ ವೃತ್ತದ ವರೆಗೆ ರ್ಯಾಲಿ ನಡೆಸಿ NEET ಪ್ರವೇಶ ಪರೀಕ್ಷೆಯಲ್ಲಿ ನಡೆದ ಭ್ರಷ್ಟಾಚಾರವನ್ನೂ ವಿರೋಧಿಸಿ ಜಿಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಪ್ರತಿಭಟಿಸಿದೆ.
ಈ ಪ್ರತಿಭಟನಾ ರ್‍ಯಾಲಿಯಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ನ ಸಾವಿರಾರು ವಿಧ್ಯಾರ್ಥಿಗಳು ಪಾಲ್ಗೊಂಡಿದ್ದರು.
ದಲಿತ ವಿದ್ಯಾರ್ಥಿ ಪರಿಷತ್ ಮುಖಂಡ ಅಕ್ಷಯ್ ಕುಮಾರ್ ಈ ಸಂದರ್ಭದಲ್ಲಿ ಮಾತನಾಡಿ, ದೇಶದಲ್ಲಿರುವ ಶೋಷಿತ ಸಮಾಜದ ಜನರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಜೀವನವನ್ನೇ ತೆಯದು ಶಿಕ್ಷಣದ ವ್ಯಾಪಾರೀಕರಣದ ವ್ಯವಸ್ಥೆಯ ಮಧ್ಯೆಯೂ ನನ್ನ ಮಗಳು ಮತ್ತು ನನ್ನ ಮಗ ಒಳ್ಳೇ ಶಿಕ್ಷಣವನ್ನು ಪಡೆಯಬೇಕೆಂದು ಬಯಸುತ್ತಿದ್ದಾರೆ. ತಾವೂ ದುಡಿದ ಬೆವರಿನ ಹಣದಲ್ಲಿ ಕೂಡಿಸಿ ಇಟ್ಟು, ಸಾಲ ಸೂಲ ಮಾಡಿ ಡಾಕ್ಟರ್ ಆಗಲಿ ಎಂಬ ಆಶೆಗೆ ಇವತ್ತು ಎಳ್ಳು ನೀರು ಬಿಟ್ಟಂಗಾಗಿದೆ. ಈ ದೇಶದಲ್ಲಿ ಇದಕ್ಕಿಂತ ದೊಡ್ದ ಭ್ರಷ್ಟಾಚಾರ ಮತ್ತೊಂದಿಲ್ಲ ಎಂದು ಹೇಳಿದರು.
ಜಿಲ್ಲಾಧಿಕಾರಿಗೆ ಮನವಿ ಸಲ್ಲಿದ ನಂತರ ದಲಿತ್ ವಿದ್ಯಾರ್ಥಿ ಪರಿಷತ್ ತನ್ನ ಪ್ರತಿಭಟನೆಯನ್ನು ಹಿಂದೆಗೆದುಕೊಂಡಿತು.