ಶಿವಮೊಗ್ಗ: ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಎಚ್. ಎನ್. ನಿರಂ ಜನ್ ಇಂದು ಅಪಾರ ಬೆಂಬಲಿಗ ರೊಂದಿಗೆ ತೆರಳಿ ನಾಮಪತ್ರ ಸಲ್ಲಿಸಿದರು.
ಅಪಾರ ಸಂಖ್ಯೆಯ ಕಾರ್ಯ ಕರ್ತರೊಂದಿಗೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಮೆರವಣಿಗೆ ಹೊರಟು ಗೋಪಿ ವೃತ್ತದಲ್ಲಿ ಬಹಿರಂಗ ಸಭೆ ನಡೆಸಲಾಯಿತು. ಅಲ್ಲಿಂದ ಮಹಾನಗರಪಾಲಿಕೆಯಲ್ಲಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಿರಂಜನ್, ಈಗಾಗಲೇ ಕ್ಷೇತ್ರದೆಲ್ಲೆಡೆ ಮನೆಮನೆಗೆ ಭೆಟಿ ನೀಡಿ ಮತದಾರರನ್ನು ವೈಯುಕ್ತಿಕವಾಗಿ ಕಂಡು ಮತಯಾಚಿಸುತ್ತಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹೇಳಿದರು.
ಜನರು ರಾಷ್ಟ್ರೀಯ ಪಕ್ಷಗಳಿಂದ ಬೇಸತ್ತಿದ್ದು, ಹೆಚ್.ಡಿ. ಕುಮಾರ ಸ್ವಾಮಿ ಅವರನ್ನು ಮುಖ್ಯಮಂತ್ರಿ ಯಾಗಿಸುವ ನಿಟ್ಟಿನಲ್ಲಿ ಜೆಡಿಎಸ್ ಪಕ್ಷದ ಬಗ್ಗೆ ಹೆಚ್ಚು ಒಲವನ್ನು ಹೊಂದಿದ್ದಾರೆ. ಇದರಿಂದ ಈ ಚುನಾವಣೆಯಲ್ಲಿ ಗೆಲ್ಲಲು ಅನುಕೂಲವಾಗುವುದು ಎಂದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯ ದರ್ಶಿ ಎಂ. ಶ್ರೀಕಾಂತ್ ಮಾತ ನಾಡಿ, ಈಗಾಗಲೇ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಹೆಚ್.ಎನ್. ನಿರಂಜನ್ ಅವರಿಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಇಂದು ನಮ್ಮ ನಿರೀಕ್ಷೆಗೂ ಮೀರಿದ ಜನರು ಜನರು ನಾಮಪತ್ರ ಸಲ್ಲಿಕೆಗೆ ಆಗಮಿಸಿದ್ದಾರೆ ಎಂದರು.
ಮೇಯರ್ ನಾಗರಾಜ್ ಕಂಕಾರಿ, ಮಾಜಿ ಮೇಯರ್ ಏಳುಮಲೈ, ನಗರ ಪಾಲಿಕೆ ಸದಸ್ಯ ಎಚ್.ಪಾಲಾಕ್ಷಿ, ಮುಖಂಡರಾದ ಕಡಿದಾಳ್ ಗೋಪಾಲ್, ಹೆವೆನ್ ಹಬೀಬ್, ವಾಜೀದ್, ಆಯನೂರು ಶಿವನಾಯ್ಕ, ಶಾಂತಾ ಸುರೇಂದ್ರ, ಭಾಸ್ಕರ್, ಮಹೇಶ್, ಮಹಮದ್ ಯೂಸುಫ್ ಬಯ್ಯಾ, ಜಿ.ಡಿ.ಮಂಜುನಾಥ್, ಸಿದ್ದಪ್ಪ, ತ್ಯಾಗರಾಜ್, ಎಂ.ರಾಜಣ್ಣ ಇದ್ದರು.
ಜೆಡಿಎಸ್‌ಗೆ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿದ ಬೆಂಬಲ ಜೆಡಿಎಸ್ ಅಭ್ಯರ್ಥಿಯಾಗಿ ನಿರಂಜನ್ ನಾಮಪತ್ರ ಸಲ್ಲಿಕೆ
RELATED ARTICLES