ಅದೃಷ್ಟ ಎಂದರೆ ಇದೇ ನೋಡಿ. ರಾಜ್ಯ ಕಾಂಗ್ರೆಸ್‌ನ ನೂತನ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಕೂಡಾ ಬರುತ್ತಿದ್ದ ಹಾಗೆಯೇ ಸಿದ್ದು ಪರ ಬ್ಯಾಟಿಂಗ್ ಬೀಸತೊಡಗಿದ್ದಾರೆ.
ನಿನ್ನೆಯಷ್ಟೇ ಅಧಿಕೃತವಾಗಿ ಕರ್ನಾಟಕ ಕಾಂಗ್ರೆಸ್‌ನ ವಿದ್ಯಮಾನಗಳ ಅಧ್ಯಯನ ನಡೆಸಲು ಆರಂಭಿಸಿರುವ ವೇಣುಗೋಪಾಲ್, ವಿವಿಧ ಜಿಲ್ಲಾ ಘಟಕಗಳ ಅಧ್ಯಕ್ಷರು ಸೇರಿದಂತೆ ೪೦ಕ್ಕೂ ಹೆಚ್ಚು ಮಂದಿ ಚರ್ಚಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ವಿರುದ್ಧ ದೂರು ಕುರಿತು ಅಷ್ಟೇ ಸಮಂಜಸ ಉತ್ತರ ನೀಡಿರೆನ್ನಲಾಗಿದೆ.
೪ ದಿನಗಳ ಕಾಲ ರಾಜ್ಯದ ಸಾಲು, ಸಾಲು ಮುಖಂಡರು ನಾಯಕರನ್ನು ಭೇಟಿ ಮಾಡಲಿರುವ ವೇಣುಗೋಪಾಲ್ ಸಹನೆಯಿಂದ ನಾಯಕರ ವಿರುದ್ಧ ದೂರು ಆಲಿಸುತ್ತಿದ್ದಾರೆ ಎನ್ನಲಾಗಿದೆ.
ರಾಜ್ಯಕ್ಕೆ ಕಾಲಿಡುವ ಮುನ್ನ ದೆಹಲಿಯಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿಯವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ್ದು, ಚರ್ಚೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಮುಂಬರುವ ಚುನಾವಣೆಯನ್ನು ಸಿದ್ಧರಾಮಯ್ಯ ನೇತೃತ್ವದಲ್ಲಿಯೇ ಮುನ್ನಡೆಯಬೇಕು. ಪಕ್ಷವು ಮರಳಿ ಅಧಿಕಾರಗಳಿಸಿದರೆ ಸಿದ್ಧರಾಮಯ್ಯ ನವರೇ ಮುಂದಿನ ಮುಖ್ಯಮಂತ್ರಿ ಎಂದು ರಾಹಲ್‌ಗಾಂಧಿ ತಿಳಿಸಿದ್ದಾರೆನ್ನಲಾಗಿದೆ.
ಇದು ಮೇಲ್ನೋಟಕ್ಕೆ ಹೈಕಮಾಂಡ್ ಮುಖ್ಯಮಂತ್ರಿ ಪರ ನಿಂತಿರುವುದು ಸ್ಪಷ್ಟವಾಗುತ್ತದೆ. ಹೀಗಾಗಿ ಯಾರು ಏನೇ ದೂರು ಹೇಳಿದರೂ ಹೈಕಮಾಂಡ್ ಕೇಳುವ ಸ್ಥಿತಿಯಲ್ಲಿಲ್ಲ. ಕೇಳಿಸಿ ಕೊಂಡರೂ ಪರ್ಯಾಯ ಕ್ರಮಕ್ಕೆ ಅವಕಾಶವೇ ಇಲ್ಲ ದಷ್ಟು ಸಿದ್ದು ಪರ ಹೈಕಮಾಂಡ್ ನಿಂತಿರುವುದು ವೇಣುಗೋಪಾ ಲ್‌ರೊಂದಿಗೆ ರಾಹುಲ್‌ಗಾಂಧಿ ಚರ್ಚಿಸುವ ಸಂದರ್ಭದಲ್ಲಿ ಸ್ಪಷ್ಟಗೊಂಡಿದೆ.
ಮಂತ್ರಿ ಸ್ಥಾನ ಸಿಗದ ಕಾರಣ ಮುನಿಸಿ ಕೊಂಡಿರುವ ಮಾಲೀಕಯ್ಯ ಗುತ್ತೇದಾರ್, ರಾಜಶೇಖರ್ ಪಾಟೀಲ್, ಡಾ.ಬಿ.ಮಲಕರೆಡ್ಡಿ, ಬಾಬುರಾವ್ ಚಿಂಚನಸೂರು, ಅನಿಲ್‌ಲಾಡ್, ಖಮರುಲ್ ಇಸ್ಲಾಂ , ಹೆಚ್.ವಿಶ್ವನಾಥ್ ಸೇರಿ ದಂತೆ ಪ್ರಮುಖರು ಸಿದ್ಧು ವಿರುದ್ಧವಾಗಿದ್ದಾರೆ.
ಮುಂಬರುವ ಚುನಾವಣೆಯಲ್ಲಿ ಇತರರನ್ನು ಕರೆದೊಯ್ಯಲು ಹೈಕಮಾಂಡ್ ಈ ಬಗ್ಗೆ ಸಿದ್ದುಗೆ ಸೂಚಿಸುವ ಸಾಧ್ಯತೆ ಇದೆ. ಆದರೆ ಇವರಲ್ಲಿ ಹಲವು ಮುಖಂಡರು ಜೆಡಿಎಸ್ ಹಾಗೂ ಬಿಜೆಪಿ ಬಾಗಿಲು ಬಡಿಯುತ್ತಿದ್ದಾರೆಂಬ ಸಂಗತಿ ಮುಖ್ಯ ಮಂತ್ರಿಗಳಿಗೆ ತಿಳಿದ ವಿಷಯವೇ ಆಗಿರುವುದ ರಿಂದ ಈ ಮುಖಂಡರನ್ನು ಓಲೈಸುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.
ಅಲ್ಲದೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರ ಕುರಿತಾಗಿ ಮೃದು ಧೋರಣೆ ತಳೆದಿರುವ ರಾಹುಲ್ ಗಾಂಧಿ, ಯಾವುದೇ ಕಾರ ಣಕ್ಕೂ ಜೆಡಿಎಸ್ ವಿರುದ್ಧ ಹೇಳಿಕೆ ನೀಡಬಾರದೆಂದು ರಾಜ್ಯ ಕಾಂಗ್ರೆಸ್ ನಾಯಕರಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
ಈಗಲೇ ಮೈತ್ರಿ ಕುರಿತು ಹೇಳಿಕೆ ಬೇಡ. ಚುನಾವಣೆ ನಂತರ ಸಂದರ್ಭ ಬಂದರೆ ಜೆಡಿಎಸ್ ಜೊತೆ ಮೈತ್ರಿಗೆ ಸಿದ್ಧವಾಗಿರಬೇಕೆಂಬ ಸಂದೇಶವನ್ನು ರಾಜ್ಯ ಉಸ್ತುವಾರಿ ಹಾಗೂ ಮುಖ್ಯಮಂತ್ರಿ ಸಿದ್ಧರಾ ಮಯ್ಯ ಅವರಿಗೆ ರಾಹುಲ್ ಮನವರಿಕೆ ಮಾಡಿದ್ದಾರೆನ್ನಲಾಗಿದೆ.
ಅಲ್ಲದೇ ಕೆಪಿಸಿಸಿ ಅಧ್ಯಕ್ಷ ಗಾದಿಗೆ ಎಷ್ಟೇ ಲಾಭಿ ಮಾಡಿದರೂ ಅಂತಿಮವಾಗಿ ಸಿದ್ಧರಾಮಯ್ಯ ಬೆಂಬಲಿಸುವ ವ್ಯಕ್ತಿಯೇ ಅಧ್ಯಕ್ಷ ಸ್ಥಾನಕ್ಕೆ ಬರು ವುದು ಖಚಿತವಾಗಿದೆ. ಹೀಗಾಗಿ ಚುನಾವಣೆ ಯಿಂದ ಹಿಡಿದು ಮುಂದಿನ ಅವಧಿಗೂ ಕಾಂಗ್ರೆಸ್ ನಲ್ಲಿ ಸಿದ್ಧರಾಮಯ್ಯ ಅವರದೇ ಪ್ರಭಾವಳಿ ಇರುತ್ತದೆ ಎಂಬುದನ್ನು ಈಗಾಗಲೇ ಹೈಕಮಾಂಡ್ ಖಚಿತಪಡಿಸಿದೆ. ಒಟ್ಟಾರೆ ಸಿದ್ದುಗೆ ಅದೃಷ್ಟ ಖುಲಾಯಿಸಿಬಿಟ್ಟಿದೆ.
ಹೊಸ ಉಸ್ತುವಾರಿಯೂ ಸಿದ್ಧು ಪರ
RELATED ARTICLES