Thursday, December 5, 2024
Google search engine
Homeಇ-ಪತ್ರಿಕೆಸುರಕ್ಷತೆಗಳಿಗೆ ನಿರ್ಲಕ್ಷ್ಯ ತೋರಿದರೆ : ಭದ್ರತಾ ಲೋಪಕ್ಕೆ ನೀವೂ ಹೊಣೆ

ಸುರಕ್ಷತೆಗಳಿಗೆ ನಿರ್ಲಕ್ಷ್ಯ ತೋರಿದರೆ : ಭದ್ರತಾ ಲೋಪಕ್ಕೆ ನೀವೂ ಹೊಣೆ

ಬ್ಯಾಂಕ್‌ ಅಧಿಕಾರಿಗಳಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್‌ ಕುಮಾರ್‌ ಎಚ್ಚರಿಕೆ

ಶಿವಮೊಗ್ಗ:  ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಮಿಥುನ್‌ಕುಮಾರ್ ಅವರ ನೇತೃತ್ವದಲ್ಲಿ ಶಿವಮೊಗ್ಗದ ಬ್ಯಾಂಕ್ ಅಧಿಕಾರಿಗಳ ಸಭೆಯನ್ನು ಹಮ್ಮಿಕೊಂಡು ಬ್ಯಾಂಕ್‌ನ ಸುರಕ್ಷತೆಗಾಗಿ ಕೈಗೊಳ್ಳಬೇಕಾದ  ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಭೆ ನಡೆಸಿ ಸಲಹೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬ್ಯಾಂಕಿನ ಗ್ರಾಹಕರು  ತಮ್ಮ ಜೀವಮಾನದ ಗಳಿಕೆಯನ್ನು ಬ್ಯಾಂಕ್‌ಗಳ ಮೇಲೆ ವಿಶ್ವಾಸದಿಂದ ಬ್ಯಾಂಕಿನಲ್ಲಿ ಇಟ್ಟಿರುತ್ತಾರೆ. ಅನೇಕ ಬ್ಯಾಂಕ್‌ಗಳು ವಿವಿಧ ರೀತಿಯ ಸೇವೆಗಳನ್ನು ನೀಡುತ್ತದೆ. ಆದರೆ ಇತ್ತೀಚಿಗೆ ನ್ಯಾಮತಿ ತಾಲ್ಲೂಕಿನ ಬ್ಯಾಂಕ್‌ವೊಂದರಲ್ಲಿ ಹಲವಾರು ಕೋಟಿ ರೂ.ಗಳ  ಚಿನ್ನಾಭರಣವನ್ನು ಲಾಕರ್ ಹೊಡೆದು ಕಳ್ಳರು ಲೂಟಿ ಮಾಡಿದ್ದರು. ಇದು ಗ್ರಾಹಕರಿಗೆ ಸಹಜವಾಗಿ ಆತಂಕ ತರುತ್ತದೆ. ಬ್ಯಾಂಕ್‌ಗಳ ಸುರಕ್ಷತೆ ಮತ್ತು ಭದ್ರತೆ ಬಗ್ಗೆ ಆರ್‌ಬಿಐ ಅನೇಕ ಗೈಡ್‌ಲೈನ್ಸ್ ನೀಡಿದೆ. ಜಿಲ್ಲಾ ಪೋಲೀಸ್ ಕೂಡ ಹಲವಾರು ಬಾರಿ ಬ್ಯಾಂಕ್ ಅಧಿಕಾರಿಗಳ ಗಮನಕ್ಕೆ ತಂದಿದೆ.

ಇತ್ತೀಚೆಗೆ ಹಲವು ಕಡೆ ಎಟಿಎಂಗಳಲ್ಲಿ ಕಳ್ಳತನ, ಆನ್‌ಲೈನ್ ವಂಚನೆ ಅನೇಕ ರೀತಿಯ ಬ್ಯಾಂಕ್ ವಂಚನೆಗಳು ನಡೆದಿದ್ದು, ಮತ್ತು ಕೆಲವೆಡೆ ವಿಫಲ ಪ್ರಯತ್ನ ಆಗಿದ್ದು ಕೂಡ ನಮ್ಮೆಲ್ಲರ ಗಮನಕ್ಕೆ ಬಂದಿದೆ. ಅನೇಕ ಕಡೆ ಬ್ಯಾಂಕಿನ ಒಳಗೆ ಮತ್ತು ಹೊರಗೆ ಅಸುರಕ್ಷತೆ, ಸಿಬ್ಬಂದಿಗಳ ನಿರ್ಲಕ್ಷ್ಯತನ ಮತ್ತು ನಿಯಮಾವಳಿಗಳ ಪ್ರಕಾರ ಮುನ್ನೆಚ್ಚರಿಕೆ ವಹಿಸದೇ ಇರುವುದು, ಈ ಘಟನೆಗಳಿಗೆ ಕಾರಣವಾಗಿದೆ. ಸುರಕ್ಷತೆಗಾಗಿ ಇರುವ ಹಳೆ ಪದ್ದತಿಗಳನ್ನು ಬದಲಯಿಸಿ ಅತ್ಯಾಧುನಿಕ ತಂತ್ರಜ್ಞಾನ ಉಪಯೋಗಿಸಿ ಎಂದರು.

ಎಟಿಎಂಗಳಿಗೆ ಭದ್ರತೆ ಒದಗಿಸಿ, ಎಟಿಎಂ ಹಾಗೂ ಬ್ಯಾಂಕಿನ ಶಾಖೆಗಳ ಮುಂಭಾಗ, ಹಿಂಭಾಗ ಹಾಗೂ ೩೬೦ ಡಿಗ್ರಿ ಸುತ್ತಲೂ ಉತ್ತಮ ದರ್ಜೆಯ ಕತ್ತಲಲ್ಲು ಕಾರ್ಯಾಚರಿಸುವ  ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಅದರ ಡಿವಿಆರ್ ಬಾಕ್ಸ್‌ಗಳನ್ನು ಕಣ್ಣಿಗೆ ಕಾಣದಂತೆ ಇಡಿ, ಅನುಮಾನ ಬಾರದ ಜಾಗದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಿ. ಸಾಲು ಸಾಲು ರಜೆಗಳಿದ್ದಾಗ ಸೂಕ್ತ ಬಂಧೋಬಸ್ತ್ ಒದಗಿಸಿ, ಬ್ಯಾಂಕಿನ ಪ್ರಮುಖ ಜವಾಬ್ದಾರಿಯುತ ಅಧಿಕಾರಿಗಳ ಮೊಬೈಲ್ ನಂ.ನ್ನು ಸ್ಥಳೀಯರಿಗೆ, ಗ್ರಾಹಕರಿಗೆ ಹಾಗೂ ಪಕ್ಕದ ಪೊಲೀಸ್ ಠಾಣೆಗೆ ನೀಡಿ, ಅಧಿಕಾರಿಗಳು ವರ್ಗಾವಾಗುವ ಸಂದರ್ಭದಲ್ಲೂ ಕೂಡ ಕಡ್ಡಾಯವಾಗಿ ಎಲ್ಲಾ ಬ್ರಾಂಚುಗಳ ಪ್ರಮುಖರು ತಮ್ಮ ನಂಬರ್‌ ಅನ್ನು ಸಂಬಂಧಪಟ್ಟವರಿಗೆ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಗುಪ್ತದಳದ ಡಿವೈಎಸ್‌ಪಿ ಕೃಷ್ಣಮೂರ್ತಿ, ಅನೇಕ ಸಲಹೆಗಳನ್ನು ನೀಡಿದರು. ವೇದಿಕೆಯಲ್ಲಿ ಲೀಡ್ ಬ್ಯಾಂಕ್ ಅಧಿಕಾರಿ ಚಂದ್ರಶೇಖರ್, ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿಗಳಾದ ಎ.ಜೆ.ಕಾರಿಯಪ್ಪ,  ಅನಿಲ್‌ಕುಮಾರ್ ಭೂಮರೆಡ್ಡಿ, ಡಿ.ವೈ.ಎಸ್.ಪಿ.ಅಂಜನಪ್ಪ ಹಾಗೂ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಜಿ.ಕೆ.ಮಿಥುನ್‌ ಕುಮಾರ್‌, ಎಸ್ಪಿ :

ಎಲ್ಲಾ ಬ್ರಾಂಚು ಮ್ಯಾನೇಜರ್‌ಗಳ ಅಫೀಶಿಯಲ್ ಮೊಬೈಲ್ ಸಂಖ್ಯೆಗಳನ್ನು ಪಡೆದು ವಾಟ್ಸ್‌ಪ್ ಗ್ರೂಪ್ ಮಾಡಿ ಚರ್ಚಿಸಿಕೊಳ್ಳಿ, ವಿಚಾರ ವಿನಿಮಯ ಮಾಡಿ, ಈ ಬೀಟ್ ವ್ಯವಸ್ಥೆಯ ಬಗ್ಗೆ ಗಮನವಿಡಿ, ಪೊಲೀಸ್ ಇಲಾಖೆಯೊಂದಿಗೆ ಸದಾಸಂಪರ್ಕದಲ್ಲಿರಿ, ಬ್ಯಾಂಕಿನ ಕಿಟಕಿ ಬಾಗಿಲುಗಳ ಭದ್ರತೆಯ ಬಗ್ಗೆ ಗಮನಹರಿಸಿ, ಲೋಪದೋಷವಿದ್ದಲ್ಲಿ ಕೂಡಲೇ ಸರಿಪಡಿಸಿ, ಭದ್ರತೆಯ ಬಗ್ಗೆ ಹೆಚ್ಚಿನ ಗಮನ ನೀಡಿ.

ಅನಿಲ್ ಕುಮಾರ್ ಭೂಮರೆಡ್ಡಿ, ಅಡಿಷನಲ್ ಎಸ್ಪಿ :

ಸಿಸಿ ಟಿವಿ ಅಳವಡಿಸಿ ನುರಿತ ಸೆಕ್ಯೂರಿಟಿ ಗಾರ್ಡನ್ನ ನೇಮಿಸಿಕೊಳ್ಳಬೇಕು.  (ಐಎಸ್ ಡಿ) ಆಂತರಿಕ ಭದ್ರತಾ ವಿಭಾಗದಿಂದ ಪರವಾನಗಿ ಪಡೆದ ಸೆಕ್ಯೂರಿಟಿ ಏಜೆನ್ಸಿಗೆ ಬ್ಯಾಂಕ್ ಮತ್ತು ಎಟಿಎಂನ ಭದ್ರತೆ ಒದಗಿಸಬೇಕು ಹಾಗೂ  ಸೆಕ್ಯೂರಿಟಿ ಆಡಿಟ್‌ ಅನ್ನು ಬ್ಯಾಂಕುಗಳು ಮೊದಲು ಮಾಡಿಸಬೇಕು.

RELATED ARTICLES
- Advertisment -
Google search engine

Most Popular

Recent Comments