Tuesday, November 5, 2024
Google search engine
Homeಇ-ಪತ್ರಿಕೆನೀಟ್ ಪಲಿತಾಂಶ; ಕೇವಲ ಹಗರಣವಲ್ಲ, ವಿದ್ಯಾರ್ಥಿಗಳ ಮೇಲಾದ ಅಪರಾಧ! ಎಐಡಿಎಸ್‌ಒ ಖಂಡನೆ

ನೀಟ್ ಪಲಿತಾಂಶ; ಕೇವಲ ಹಗರಣವಲ್ಲ, ವಿದ್ಯಾರ್ಥಿಗಳ ಮೇಲಾದ ಅಪರಾಧ! ಎಐಡಿಎಸ್‌ಒ ಖಂಡನೆ

ನ್ಯಾಯಾಂಗ ತನಿಖೆಗೆ ಆಗ್ರಹಿಸಿ, ಬೃಹತ್‌ ಪ್ರತಿಭಟನೆ

ದಾವಣಗೆರೆ: ನೀಟ್ ಪಲಿತಾಂಶ ಕೇವಲ ಹಗರಣವಲ್ಲ, ಅದು ವಿದ್ಯಾರ್ಥಿಗಳ ಮೇಲಾದ ಅಪರಾಧ!. ಪರೀಕ್ಷಾ ಫಲಿತಾಂಶ ಹಗರಣವನ್ನು ಕೂಡಲೇ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಭಾಗಿಯಾದವರಿಗೆ ಶಿಕ್ಷೆ ಆಗಬೇಕು ಮತ್ತು ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುವ
ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನೂರಾರು ವಿದ್ಯಾರ್ಥಿಗಳು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಜೇಷನ್ (ಎಐಡಿಎಸ್ಓ) ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದರು.

 ಮಂಗಳವಾರ ಬೆಳಿಗ್ಗೆ 11 ಗಂಟೆಗೆ ನಗರದ ವಿವಿಧ ಕಾಲೇಜುಗಳಿಂದ ಬಂದು ನಗರದ ಜಯದೇವ ವೃತ್ತದಲ್ಲಿ ಸೇರಿದ್ದ ನೂರಾರು ವಿದ್ಯಾರ್ಥಿಗಳು ಹಾಗೂ ಪಾಲಕರು ನೀಟ್ ಆಕಾಂಕ್ಷಿಗಳ ಪರವಾಗಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಎಐಡಿಎಸ್ಓದ  ಮುಖಂಡ ಮಹಾಂತೇಶ್ ಬೀಳೂರು ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿ. ಜೂನ್ 4ರಂದು 2024ರ ಲೋಕಸಭಾ ಚುನಾವಣೆಯ ಫಲಿತಾಂಶದ ಅಬ್ಬರದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳ ಕನಸು ಹೊತ್ತ ನೀಟ್ ಫಲಿತಾಂಶ ಪ್ರಕಟವಾಯಿತು. ಅಂದು ಸಹಜವಾಗಿ ಎಲ್ಲರ ಚಿತ್ತ ಚುನಾವಣೆಯ ಫಲಿತಾಂಶದತ್ತ ಇತ್ತು. ನಂತರ ಇಡೀ ದೇಶದ ವಿದ್ಯಾರ್ಥಿಗಳು ಆತಂಕಕ್ಕೆ
ಒಳಗಾಗುವಂತೆ ನೀಟ್ ಪರೀಕ್ಷೆಯಲ್ಲಿ ಆದ ಹಗರಣ ಹೊರಗೆ ಬಿತ್ತು. ರೋಚಕವಾದ ಸಂಗತಿ ಎಂದರೆ, ಈ ವರ್ಷದ ಫಲಿತಾಂಶದಲ್ಲಿ 67 ಅಭ್ಯರ್ಥಿಗಳು 720ಕ್ಕೆ 720 ಅಂಕಗಳನ್ನು ತೆಗೆದುಕೊಂಡು ಮೊದಲ ಸ್ಥಾನದಲ್ಲಿದ್ದಾರೆ. ನೀಟ್ ಪರೀಕ್ಷೆಯ ಇತಿಹಾಸದಲ್ಲೇ ಕಾಣದಷ್ಟು
ಸಂಖ್ಯೆಯ ವಿದ್ಯಾರ್ಥಿಗಳು ಈ ಬಾರಿ 720 ಅಂಕಗಳನ್ನು ಪಡೆದಿದ್ದಾರೆ. ಮೊದಲ ರ್ಯಾಂಕ್‌ ವಿದ್ಯಾರ್ಥಿಗಳಲ್ಲಿ ಹಲವರು ಒಂದೇ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದು ಅಕ್ರಮಗಳ ಕಡೆಗೆ ಬೆರಳು ಮಾಡಿ ತೋರಿಸುತ್ತದೆ. ನೀಟ್ ಪರೀಕ್ಷೆಯ ಉತ್ತರ ಪತ್ರಿಕೆಯ
ಮೌಲ್ಯಮಾಪನದಲ್ಲಿ ಋಣಾತ್ಮಕ ಅಂಕಗಳಿರುವ ಕಾರಣ ಶೇ ನೂರಕ್ಕೆ ನೂರು ಅಂಕ ಗಳಿಸಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ. ಅಂತಹದರಲ್ಲಿ 67 ವಿದ್ಯಾರ್ಥಿಗಳು ಮೊದಲ ರ್ಯಾಂಕ್‌ ಪಡೆದಿದ್ದಾರೆ ಎಂದರೆ, ಪರೀಕ್ಷೆಯಲ್ಲಿ ಹಗರಣ ನಡೆದಿರುವುದು ಮೇಲು ನೋಟಕ್ಕೆ
ಕಾಣುತ್ತಿರುವ ಸತ್ಯವಾಗಿದೆ ಎಂದು ವಿವರಿಸಿದರು.

 ನೀಟ್ ಫಲಿತಾಂಶ ಪ್ರಕಟವಾದಾಗಿನಿಂದ ಕೆಲವೊಂದು ವಿದ್ಯಾರ್ಥಿಗಳು ಆತಂಕಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಲ್ಲದೇ ಬಹಳಷ್ಟು ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ. ವೈದ್ಯಕೀಯ ಶಿಕ್ಷಣ ಹಾಗೂ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆಗಳು ಈಗ ಭ್ರಷ್ಟಚಾರ ಹಾಗೂ ನಿರ್ಲಕ್ಷಕ್ಕೆ ತುತ್ತಾಗಿವೆ. ಉನ್ನತ ಶಿಕ್ಷಣದಿಂದ ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ವಂಚಿತರನ್ನಾಗಿ ಮಾಡುವ ಹುನ್ನಾರ ಇದರ ಹಿಂದೆ ಇದ್ದಂತಿದೆ. ಇಂತಹ ಅಕ್ರಮಗಳನ್ನು ಮಟ್ಟ ಹಾಕಲು ದೇಶದಾದ್ಯಂತ ವಿದ್ಯಾರ್ಥಿಗಳು ಹೋರಾಟ ನಡೆಸಲು ಸಜ್ಜಾಗಬೇಕು ಎಂದು ಅವರು ಕರೆ ನೀಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ, ಕಾರ್ಯದರ್ಶಿ ಸುಮನ್ ಟಿ. ಎಸ್., ಕಾವ್ಯ ಬಿ.ಯೋಗೇಶ್, ನಂದೀಶ್, ಗೌತಮ್, ಆಕಾಶ್ ಮುಂತಾದ ಕಾರ್ಯಕರ್ತರು ಹಾಗೂ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

……………………………………………….
ಹಲವು ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಿರುವುದಾಗಿ, ಆ ಕಾರಣದಿಂದ ಫಲಿತಾಂಶದಲ್ಲಿ ಹೆಚ್ಚು ಅಂಕಗಳು ಬಂದಿರುವುದಾಗಿ ಎನ್ ಟಿ ಎ ಸಮಜಾಯಿಸಿ ನೀಡಿದೆ. ಆದರೆ, ಕೃಪಾಂಕಗಳನ್ನು ನೀಡುವ ಕುರಿತು ಎನ್ ಟಿಎ ಎಲ್ಲೂ ಪ್ರಕಟಿಸಿಲ್ಲ. ಹರಿಯಾಣದ ಯಾವುದೋ
ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆ ಪತ್ರಿಕೆ ತಡವಾಗಿ ನೀಡಿದ್ದಕ್ಕಾಗಿ ಕೃಪಾಂಕಾಗಳನ್ನು ನೀಡಿರುವ ಅಸಂಬದ್ಧ ಕಾರಣವನ್ನು ಕೊಟ್ಟಿರುವ ಎನ್ ಟಿಎ ಕೊಟ್ಟಿದೆ. ಇನ್ನೊಂದೆಡೆ, ಬಿಹಾರ್ ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಮಾಹಿತಿ ಆತಂಕಕಾರಿಯಾಗಿದೆ. ಈ ಹಿಂದೆ ರಾಜ್ಯವಾರು ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಗೆ ಸಿಇಟಿ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು. ಭ್ರಷ್ಟಚಾರ ತಡೆ ಹಾಗೂ ವಿದ್ಯಾರ್ಥಿಗಳ ಹೊರೆ ಕಡಿಮೆ ಮಾಡುವ ಕಾರಣಗಳನ್ನು ಮುಂದಿಟ್ಟು ಕೇಂದ್ರ ಸರ್ಕಾರ ಇಡೀ ದೇಶಕ್ಕೆ ಒಂದು ಪರೀಕ್ಷೆ ಎಂದು ನೀಟ್
ಪರೀಕ್ಷೆಯನ್ನು ಪರಿಚಯಿಸಿತು. ಈಗ ನೀಟ್‌ ಕೂಡ ಹಗರಣಗಳ ದಾರಿ ಹಿಡಿದಿದೆ ಎಂದು ಆರೋಪಿಸಿದರು.
-ಮಹಾಂತೇಶ್‌ ಬೀಳೂರು, ಎಐಡಿಎಸ್‌ ಮುಖಂಡ

RELATED ARTICLES
- Advertisment -
Google search engine

Most Popular

Recent Comments