ಪತ್ರಿಕಾಗೋಷ್ಟಿಯಲ್ಲಿ ಪ್ರಧಾನ ಕಾರ್ಐದರ್ಶಿ ಹೊನ್ನಾಳಿ ಚಂದ್ರಶೇಖರ್ ಮಾಹಿತಿ
ಶಿವಮೊಗ್ಗ : ನಮ್ ಟೀಮ್ ಶಿವಮೊಗ್ಗ ರಂಗತಂಡದ ವತಿಯಿಂದ ಅ.26 ಮತ್ತು 27 ರಂದು ನಗರದ ಕುವೆಂಪು ರಂಗಮಂದಿರದಲ್ಲಿ ನೀನಾಸಂ ನಾಟಕೋತ್ಸವವನ್ನು ಆಯೋಜಿಸಲಾಗಿದೆ ಎಂದು ನಮ್ ಟೀಮ್ ಶಿವಮೊಗ್ಗದ ಪ್ರಧಾನ ಕಾರ್ಯದರ್ಶಿ ಹೊನ್ನಾಳಿ ಚಂದ್ರಶೇಖರ್ ತಿಳಿಸಿದರು.
ಗುರುವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ಬಾರಿಯೂ ಸಹ ನೀನಾಸಂ ತಿರುಗಾಟದ ನಾಟಕಗಳನ್ನು ಶಿವಮೊಗ್ಗದಲ್ಲಿ ಆಯೋಜಿಸಲಾಗಿದೆ. ಈಗಾಗಲೇ ರಾಜ್ಯಾದ್ಯಂತ ಪ್ರದರ್ಶನ ಕಂಡು ವೀಕ್ಷಕರ ಮೆಚ್ಚುಗೆ ಪಡೆದಿರುವ ಎರಡು ನಾಟಕಗಳು ಪ್ರದರ್ಶನಗೊಳ್ಳಲಿವೆ. ಕಳೆದ 24 ವರ್ಷಗಳಿಂದ ಕೇಂದ್ರಿಕರಿಸಿ ರಂಗಚಟುವಟಿಕೆಯನ್ನು ಮಾಡುತ್ತಿರುವ ನಮ್ ಟೀಮ್ ರಂಗತಂಡವು ಇದೂವರೆಗೆ ಶಿವಮೊಗ್ಗದಲ್ಲಿ 37 ನಾಟಕೋತ್ಸವಗಳನ್ನು ಆಯೋಜಿಸಿದೆ. ಸ್ವನಿರ್ಮಿತ 46 ನಾಟಕಗಳನ್ನು ರಂಗದ ಮೇಲೆ ತಂದಿದೆ. ರಾಜ್ಯ ಹಾಗೂ ಹೊರ ರಾಜ್ಯದಲ್ಲಿ ಇದೂವರೆಗೆ 245 ನಾಟಕಗಳ ಪ್ರದರ್ಶನ ಹಾಗೂ ಆಯೋಜನೆ ಮಾಡಿದೆ ಎಂದರು.
ಅ.26 ರಂದು ಸಂಜೆ 6.45 ಕ್ಕೆ ‘ಮಾಲತೀಮಾಧವ ನಾಟಕ’ ಪ್ರದರ್ಶನಗೊಳ್ಳಲಿದೆ. ಈ ನಾಟಕವು ಭವಭೂತಿ ರಚನೆಯ, ವಿದ್ಯಾ ಹೆಗಡೆ ಮತ್ತು ಭಾರ್ಗವ.ಕೆ.ಎನ್ ಸಂಗೀತ ವಿನ್ಯಾಸ ಮಾಡಿದ್ದು, ಎಂ.ಹೆಚ್.ಗಣೇಶ್ ಕನ್ನಡ ರೂಪಾಂತರ ಮಾಡಿದ್ದು, ಅಕ್ಷರ.ಕೆ.ವಿ ನಿರ್ದೇಶನ ಮಾಡಿದ್ದಾರೆ ಎಂದರು.
ಅ.27 ರಂದು ಸಂಜೆ 6.45 ಕ್ಕೆ ‘ಅಂಕದ ಪರದೆ ನಾಟಕ’ ಪ್ರದರ್ಶನಗೊಳ್ಳಲಿದೆ. ಈ ನಾಟಕವವು ಅಭಿರಾಮ್ ಭಡ್ಕಮ್ಕರ್ ರಚನೆಯ, ಜಯಂತ್ ಕಾಯ್ಕಿಣಿ ಕನ್ನಡಕ್ಕೆ ರೂಪಾಂತರಿಸಿದ್ದು, ವಿದ್ಯಾನಿಧಿ ವನಾರಸೆ (ಪ್ರಸಾದ್) ನಿರ್ದೇಶನ ಮಾಡಿದ್ದಾರೆ ಎಂದರು.
ನೇರ ನಾಟಕ ಪ್ರದರ್ಶನಗೊಳ್ಳಲಿದ್ದು, ವೇದಿಕೆ ಕಾರ್ಯಕ್ರಮಗಳಿರುವುದಿಲ್ಲ. ಒಂದು ನಾಟಕಕ್ಕೆ ಪ್ರವೇಶ ದರ ರೂ.50 ನಿಗದಿಪಡಿಸಲಾಗಿದೆ. ಶಿವಮೊಗ್ಗದ ಪ್ರಕೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕೋತ್ಸವವನ್ನು ಯಶಸ್ವಿಗೊಳಿಸುವಂತೆ ಕೋರಿದರು. ಮುಂಗಡ ಟಿಕೆಟ್ ಪಡೆಯಲು ದೂರವಾಣಿ ಸಂಖ್ಯೆ : 9845518866 ನ್ನು ಸಂಪರ್ಕಿಸಬಹುದಾಗಿದೆ.
ಪತ್ರಿಕಾಗೋಷ್ಟಿಯಲ್ಲಿ ನಮ್ ಟೀಮ್ ಶಿವಮೊಗ್ಗದ ಖಜಾಂಚಿ ಸಮನ್ವಯ ಕಾಶಿ, ಅಧ್ಯಕ್ಷ ಹೊತ್ತಾರೆ ಶಿವು ಉಪಸ್ಥಿತರಿದ್ದರು.