ದಾವಣಗೆರೆ: ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲೊಂದಾದ ಶ್ರೀಸೋಮೇಶ್ವರ ವಿದ್ಯಾಲಯದ ವಿದ್ಯಾರ್ಥಿಗಳು ಕರಾಟೆಯಲ್ಲಿ ಬೆಳ್ಳಿ ಹಾಗೂ ಕಂಚಿನ ಪದಕ ಪಡೆಡಿದ್ದಾರೆ.
2024-25 ನೇ ಸಾಲಿನ ರಾಷ್ಟೀಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ್ದ 7 ನೇ ತರಗತಿ ವಿದ್ಯಾರ್ಥಿ ರಾಘವಿ ಎನ್ ಹಾಗೂ ಕ್ರಾಂತಿ ಹೆಚ್ ಆರ್ ತಲಾ ಬೆಳ್ಳಿ ಮತ್ತು ಕಂಚಿನ ಪದಕ, ಪ್ರಶಸ್ತಿ ಫಲಕ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಶಾಲೆಯಲ್ಲಿ ಬಹುಮಾನ ನೀಡಿ ಅಭಿನಂದಿಸಲಾಯಿತು. ಇದೇ ರೀತಿ ವಿದ್ಯಾರ್ಥಿಗಳು ಹೆಚ್ಚು ಸಾಧನೆ ಮಾಡಿ ಪೋಷಕರು ಹಾಗೂ ಶಾಲೆಗೆ ಕೀರ್ತಿ ತರಬೇಕೆಂದು ಹಾರೈಸಲಾಯಿತು. ಈ ವೇಳೆ ಶೈಕ್ಷಣಿಕ ನಿರ್ದೇಶಕರಾದ ಪರಮೇಶ್ವರಪ್ಪ, ಪ್ರಾಂಶುಪಾಲರಾದ ಪ್ರಭಾವತಿ ಎನ್ ಹಾಗೂ ಆಡಳಿತಧಿಕಾರಿ ಹರೀಶ್ ಬಾಬು, ದೈಹಿಕ ಶಿಕ್ಷಕರು ಉಪಸ್ಥಿತರಿದ್ದರು.