ಶಿವಮೊಗ್ಗ : ದೇಶದ ಪ್ರಧಾನಿಯಾದ ನಂತರ ಇದೇ ಪ್ರಥಮ ಬಾರಿಗೆ ಶಿವವಗ್ಗ ನಗರಕ್ಕೆ ನರೇಂದ್ರ ಮೋದಿ ಆಗಮಿಸುತ್ತಿದ್ದು, ಇದರಿಂದ ಕಮಲ ಪಾಳಯದಲ್ಲಿ ಚುನಾವಣಾ ರಾಜಕೀಯ ಚಟುವಟಿಕೆಗಳು ಮತ್ತಷ್ಟು ಗರಿಗೆದರಿಕೊಂಡಿವೆ.
ನಾಳೆ ಮಧ್ಯಾಹ್ನ ೩ ಗಂಟೆಗೆ ಪ್ರಧಾನಿ ನರೇಂದ್ರ ಮೋದಿಯವರು ಶಿವಮೊಗ್ಗ ನಗರಕ್ಕೆ ಆಗಮಿಸಲಿದ್ದು, ಇಲ್ಲಿನ ಎನ್‌ಇಎಸ್ ಮೈದಾನದಲ್ಲಿ ನಿರ್ಮಿ ಸಿರುವ ಬೃಹತ್ ವೇದಿಕೆಯಲ್ಲಿ ಪಕ್ಷದ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ನವರ ಪರವಾಗಿ ಚುನಾವಣಾ ಪ್ರಚಾರ ಭಾಷಣ ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ಪಕ್ಷದ ರಾಜ್ಯಾ ಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವ ರಪ್ಪ, ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ ಸೇರಿದಂತೆ ವಿವಿಧ ಮುಖಂಡರು ಉಪಸ್ಥಿತರಿರುತ್ತಾರೆ. ಪ್ರಧಾನಿ ಮೋದಿ ಆಗಮನದ ಹಿನ್ನೆಲೆಯಲ್ಲಿ ರಕ್ಷಣಾ ಇಲಾಖೆ ಈಗಾಗಲೇ ರಕ್ಷಣಾ ಕಾರ್ಯಗಳನ್ನು ಚುರುಕು ಗೊಳಿಸಲಾಗಿದೆ. ನಾಳೆ ಮಧ್ಯಾಹ್ನ ಸವಳಂಗ ರಸ್ತೆಯಲ್ಲಿ ಸಾರ್ವಜನಿಕ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ಶಿಕಾರಿಪುರ, ಹೊನ್ನಾಳಿ ಮತ್ತು ನ್ಯಾಮತಿ ಭಾಗದಿಂದ ಬರುವಂತಹ ಬಸ್‌ಗಳಿಗೆ ಪರ್ಯಾಯ ಮಾರ್ಗದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಅಲ್ಲದೆ, ಕಾರ್ಯಕ್ರಮ ನಡೆಯುವಂತಹ ಎನ್‌ಇಎಸ್ ಮೈದಾನದ ಸುತ್ತ ರಕ್ಷಣಾ ಕಾರ್ಯಗಳನ್ನು ಬಿಗಿಗೊಳಿಸಲಾಗಿದ್ದು, ಖುದ್ದು ಜಿಲ್ಲಾ ರಕ್ಷಣಾಧಿಕಾರಿಗಳೇ ಈ ಬಗ್ಗೆ ಎಚ್ಚರಿಕೆ ವಹಿಸಿದ್ದಾರೆ.
ಕಾರ್ಯಕ್ರಮಕ್ಕೆ ಮತ್ತು ಮೋದಿ ಭಾಷಣವನ್ನು ಆಲಿಸುವ ಸಲುವಾಗಿ ಸಾವಿರಾರು ಸಂಖ್ಯೆಯಲ್ಲಿ ಜನ ಎನ್‌ಇಎಸ್ ಮೈದಾನದಲ್ಲಿ ಸೇರುವನಿರೀಕ್ಷೆ ಇದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ಸಾಕಷ್ಟು ಸಂಖ್ಯೆಯಲ್ಲಿ ಆಸನದ ವ್ಯವಸ್ಥೆ ಕಲ್ಪಿಸಿದೆ.
ಮೋದಿ ಭೇಟಿ ಹಿನ್ನೆಲೆಯಲ್ಲಿ ಸುರಕ್ಷತೆಯ ಉಸ್ತುವಾರಿ ಹೊತ್ತಿರುವ ಎಸ್‌ಪಿಜಿ ಕಮಾಂಡೋಗಳು ಈಗಾಗಲೇ ಪ್ರಧಾನಿ ಸಾಗುವ ಮಾರ್ಗ ಹಾಗೂ ಸಮಾವೇಶ ನಡೆಯುವ ಸ್ಥಳದಲ್ಲಿ ಭದ್ರತೆ ಪರಿಶೀಲನೆ ನಡೆಸಿದ್ದಾರೆ.
ನರೇಂದ್ರ ಮೋದಿ ಶಿವಮೊಗ್ಗಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಬಿಜೆಪಿಯ ಐಟಿ ಕಾಲ್‌ನಿಂದ ವಿಶಿಷ್ಟ ಪ್ರಯೋಗ ನಡೆಸುತ್ತಿದ್ದು, ಬೆಂಗಳೂರಿನಲ್ಲಿ ನೆಲೆಸಿ, ಅಲ್ಲಿ ಸಾಫ್ಟವೇರ್ ಇಂಜಿನಿಯರ‍್ಸ್ ಹಾಗೂ ಇನ್ನಿತರ ವೃತ್ತಿ ನಿರತ ಶಿವಮೊಗ್ಗದ ಯುವಕ/ಯುವತಿಯರಿಗಾಗಿ ವಿಶೇಷ ಪಾಸ್‌ಗಳನ್ನು ನೀಡುವ ವ್ಯವಸ್ಥೆ ಮಾಡಿಕೊಂಡಿದೆ. ಮೋದಿಯವರ ಕಾರ್ಯಕ್ರಮಕ್ಕೆ ಬರಲಿಚ್ಛಿಸುವ ಹೊರ ಊರಿನಲ್ಲಿರುವ ಶಿವಮೊಗ್ಗ ದವರು ೮೪೭೦೦ ೭೮೮೮೦ಗೆ ಮಿಸ್‌ಕಾಲ್ ಕೊಡುವ ಮೂಲಕ, ಆನ್‌ಲೈನ್ ರಿಜಿಸ್ಟ್ರೇಷನ್‌ಗೆ ಅವಕಾಶ ಕಲ್ಪಿಸಿದೆ.
ಹೀಗೆ ಆನ್‌ಲೈನ್‌ನಲ್ಲಿ ಹೆಸರು ನೊಂದಾಯಿ ಸುವವರಿಗೆ, ಮೊದಲು ಬಂದವರಿಗೆ ಆದ್ಯತೆ ಮೇರೆಗೆ ವಿವಿಐಪಿ ಪಾಸ್ ವಿತರಿಸಲಾಗುವುದು. ವಿವರಗಳಿಗೆ ಅವಿನಾಶ್ (೯೬೬೩೭ ೮೦೦೦೪) ಅವರನ್ನು ಸಂಪರ್ಕಿ ಸಲು ಚುನಾವಣಾ ಜಿಲ್ಲಾ ಮಾಧ್ಯಮ ಸಂಚಾಲಕ ಬಿ.ಆರ್. ಮಧುಸೂದನ್ ತಿಳಿಸಿದ್ದಾರೆ.
ನಾಳೆ ನಗರಕ್ಕೆ ಮೋದಿ
RELATED ARTICLES