Sunday, November 10, 2024
Google search engine
Homeಇ-ಪತ್ರಿಕೆಎನ್‌ ಡಿಎ ನಾಯಕರಾಗಿ ಮೋದಿ: ಜೂ.೮ಕ್ಕೆ ಪ್ರಮಾಣ ವಚನ?

ಎನ್‌ ಡಿಎ ನಾಯಕರಾಗಿ ಮೋದಿ: ಜೂ.೮ಕ್ಕೆ ಪ್ರಮಾಣ ವಚನ?

– ಬುಧವಾರ ಸಂಜೆ ಪ್ರಧಾನಿ ನಿವಾಸದಲ್ಲಿ ನಡೆಯಿತು ಎನ್‌ಡಿಎ ಮೈತ್ರಿಕೂಟದ ಮಹತ್ವದ ಸಭೆ

– ಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟದ ನಾಯಕರಾಗಿ ಪ್ರಧಾನಿ ಮೋದಿ ಆಯ್ಕೆ

– ಸಭೆಯಲ್ಲಿ  ಜೆ.ಪಿ.ನಡ್ಡಾ,  ಅಮಿತ್ ಶಾ, ರಾಜನಾಥ್ ಸಿಂಗ್ ,  ಜೆಡಿಯು ನಾಯಕ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು, ಶಿವಸೇನೆ ನಾಯಕ ಏಕನಾಥ್ ಶಿಂಧೆ, ಹೆಚ್.ಡಿ.ಕುಮಾರಸ್ವಾಮಿ ಸೇರಿ ಹಲವರು ಭಾಗಿ

ನವದೆಹಲಿ: ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲೇ ರಾಷ್ಟ್ರ ರಾಜಧಾನಿಯಲ್ಲ ಹೊಸ ಸರ್ಕಾರ ರಚನೆಯ ಚಟುವಟಿಕೆಗಳು ಬಿರುಸುಗೊಂಡಿದ್ದು, ಬುಧವಾರ ಎನ್‌ ಡಿಎ ಹಾಗೂ ಇಂಡಿಯಾ ಒಕ್ಕೂಟಗಳು ತಮ್ಮ ಮೈತ್ರಿ ಪಕ್ಷಗಳ ನಾಯಕರೊಂದಿಗೆ ಮಹತ್ವದ ಸಭೆ ನಡೆಸಿದವು. ಈ ನಡುವೆ  ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವ ಹಿನ್ನೆಲೆಯಲ್ಲಿಕೇಂದ್ರ ಸಚಿವ ಸಂಪುಟವು, ೧೭ನೇ ಲೋಕಸಭೆಯನ್ನು ವಿಸರ್ಜಿಸುವಂತೆ ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡಿತು.

ಪ್ರಧಾನಿ ನೇತೃತ್ವದಲ್ಲಿ ಬುಧವಾರ ನಡೆದ ಕೊನೆಯ ಸಚಿವಸಂಪುಟ ಸಭೆಯಲ್ಲಿ ೧೭ನೇ ಲೋಕಸಭೆಯನ್ನು ವಿಸರ್ಜಿಸುವ ನಿರ್ಣಯ ಕೈಗೊಳ್ಳಲಾಯಿತು.ಆನಂತರ ಪ್ರಧಾನಿಯವರು ರಾಷ್ಟ್ರಪತಿ ಭವನಕ್ಕೆ ತೆರಳಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ ೧೭ನೇ ಲೋಕಸಭೆ ವಿಸರ್ಜನೆಗೆ ಮನವಿ ಮಾಡಿದರು.

ಪ್ರಧಾನಿ ಅವರು ಪ್ರಮಾಣವಚನ ಸ್ವೀಕಾರಕ್ಕೆ ವೇದಿಕೆ ಸಜ್ಜುಗೊಂಡಿರುವ ಹಿನ್ನೆಲೆಯಲ್ಲಿ ಲೋಕಸಭೆಯನ್ನು ವಿಸರ್ಜಿಸುವ ತೀರ್ಮಾಣ ಮಾಡಲಾಗಿದೆ. ಹಾಲಿ ಲೋಕಸಭೆಯ ಅವಧಿ ಜೂ. ೧೬ಕ್ಕೆ ಮುಕ್ತಾಯಗೊಳ್ಳಲಿದ್ದು,ಅಷ್ಟರೊಳಗೆನೂತನ ಸರ್ಕಾರ ರಚನೆಯಾಗಬೇಕಿದೆ.

ಸಚಿವ ಸಂಪುಟ ಸಭೆಯ ಬಳಿಕ ಪ್ರಧಾನಿನರೇಂದ್ರ ಮೋದಿ ಅವರು ರಾಷ್ಟ್ರಪತಿ ಭವನಕ್ಕೆ ತೆರಳಿ ದ್ರೌಪದಿಮುರ್ಮು ಅವರಿಗೆ ೧೭ನೇ ಲೋಕಸಭೆ ವಿಸರ್ಜಿಸಿರುವ ಮನವಿಯನ್ನು ಸಲ್ಲಿಸಿದರು. ನೂತನ ಸರ್ಕಾರ ಅಸ್ತಿತ್ವಕ್ಕೆ ಬರುವ ತನಕ ಉಸ್ತುವಾರಿ ಪ್ರಧಾನಿಯಾಗಿ ಕಾರ್ಯನಿರ್ವಹಿಸುವಂತೆ ರಾಷ್ಟ್ರಪತಿಗಳು ಮೋದಿ ಅವರಿಗೆ ಸೂಚಿಸಿದರು. ಈ ನಡುವೆ ಇತ್ತ ಸರ್ಕಾರ ರಚನೆಗೆ ಎನ್‌ ಡಿ ಎ ಮತ್ತು ಇಂಡಿಯಾ ಒಕ್ಕೂಟಗಳು ತಮ್ಮದೇ ಕಾರ್ಯತಂತ್ರ ನಡೆಸಿದವು.

ಇದೇ ವೇಳೆ ಪ್ರಧಾನಿ ಮೋದಿ ನಿವಾಸಲ್ಲಿ ಬುಧವಾರ ಸಂಜೆ ನಡೆದ ಎನ್‌ ಡಿಎ ಮೈತ್ರಿಕೂಟದ ನಾಯಕರ ಮಹತ್ವದ ಸಭೆ  ನಡೆಯಿತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಹಿರಿಯ ನಾಯಕರಾದ ಅಮಿತ್ ಶಾ, ರಾಜನಾಥ್ ಸಿಂಗ್ ಹಾಗೂ ಜೆಡಿಯು ನಾಯಕ ನಿತೀಶ್ ಕುಮಾರ್, ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು, ಶಿವಸೇನೆ ನಾಯಕ ಏಕನಾಥ್ ಶಿಂಧೆ, ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಸೇರಿದಂತೆ ಪ್ರಮುಖರು ಪಾಲ್ಗೊಂಡಿದ್ದರು. ಈ ಸಭೆಯಲ್ಲಿನರೇಂದ್ರ ಮೋದಿ ಅವರನ್ನು ಎನ್‌ ಡಿಎ ಮೈತ್ರಿಕೂಟದ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು.

ಅಮೂಲಕ ಲೋಕಸಭೆಯಲ್ಲಿ ಅತೀ ಹೆಚ್ಚು ಸ್ಥಾನ ಪಡೆದು ಸರ್ಕಾರ ರಚನೆಗೆ ಬಹುಮತ ಪಡೆದಿರುವ ಎನ್‌ ಡಿ ಎ ಮೈತ್ರಿಕೂಟ ಈಗ ಸರ್ಕಾರ ರಚನೆಯ ಹಾದಿಯಲ್ಲಿದೆ. ತನ್ನ ಮೈತ್ರಿ ಪಕ್ಷದ ಮುಖಂಡರಾದ ಟಿಟಿಪಿ ಮುಖಂಡ ಚಂದ್ರಬಾಬು ನಾಯ್ಡು ಹಾಗೂ ಜೆಡಿಯು ಮುಖಂಡ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಬೆಂಬಲದೊಂದಿಗೆ ಸರ್ಕಾರ ರಚನೆಗೆ ಮುಂದಾಗಿದ್ದು, ಜೂ ೮ ರಂದು ಶನಿವಾರ ನರೇಂದ್ರ ಮೋದಿ ಅವರು, ದೇಶದ ನೂತನ ಪ್ರಧಾನಿಯಾಗಿ  ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಗಳಿವೆ.

ಎನ್‌ಡಿಎ ಸಂಸದೀಯ ಪಕ್ಷದ ಸಭೆ ಜೂ. ೭ ರಂದು ನಡೆಯಲಿದ್ದು, ಅಂದು ನರೇಂದ್ರಮೋದಿ ಅವರನ್ನು ಎನ್‌ಡಿಎನ ಸಂಸದೀಯ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗುತ್ತದೆ. ಈ ಸಭೆಯಲ್ಲಿ ಪಾಲ್ಗೊಳ್ಳುವಂತೆ ಎನ್‌ಡಿಎ ಎಲ್ಲ ನೂತನ ಲೋಕಸಭಾ ಸದಸ್ಯರಿಗೆ ಸೂಚನೆ ರವಾನಿಸಲಾಗಿದೆ. ಇದಾದ ಬಳಿಕ ಮೋದಿ ಅವರು ರಾಷ್ಟ್ರಪತಿ ಬಳಿಗೆ ತೆರಳಿ ಸರ್ಕಾರ ರಚನೆಯ ಹಕ್ಕು ಮಂಡಿಸಲಿದ್ದು, ಜೂ. ೮ ರಂದು ಪ್ರಧಾನಿಯಾಗಿ ಪ್ರಮಾಣ ಸ್ವೀಕರಿಸುವರು ಎಂದು ಉನ್ನತ ಮೂಲಗಳು ಹೇಳುತ್ತಿವೆ.

ಈ ನಡುವೆ ಎನ್‌ಡಿಎ ಸರ್ಕಾರ ರಚನೆಯಲ್ಲಿ ಕಿಂಗ್‌ಮೇಕರ್ ಆಗಿರುವ ಟಿಡಿಪಿ ಮತ್ತು ಜೆಡಿಯುಗಳು ನರೇಂದ್ರಮೋದಿ ಅವರು ಪ್ರಧಾನಿಯಾಗಲು ಅಚಲ ಬೆಂಬಲ ವ್ಯಕ್ತಪಡಿಸಿರುವ ನಡುವೆಯೇ ಅಧಿಕಾರ ಹಂಚಿಕೆಯ ಚೌಕಾಸಿಯನ್ನೂ ಬಿಜೆಪಿ ಜತೆ ನಡೆಸಿದ್ದು, ಅತ್ಯಂತ ಮಹತ್ವದ ಲೋಕಸಭೆಯ ಸ್ಪೀಕರ್ ಸ್ಥಾನಕ್ಕೆ ಟಿಡಿಪಿ ಮತ್ತು ಜೆಡಿಯು ಬೇಡಿಕೆ ಇಟ್ಟಿವೆ ಎಂದು ಹೇಳಲಾಗಿದೆ.

ಬಿಜೆಪಿ ನಾಯಕರುಗಳಿಗೆ ಟಿಡಿಪಿ ಮತ್ತು ಜೆಡಿಯು ಎರಡೂ ಪಕ್ಷಗಳ ಮುಖ್ಯಸ್ಥರು ಲೋಕಸಭೆಯ ಅಧ್ಯಕ್ಷ ಸ್ಥಾನವನ್ನು ತಮ್ಮ ಪಕ್ಷಕ್ಕೆ ನೀಡಬೇಕು ಎಂಬ ಸಂದೇಶವನ್ನು ಕಳುಹಿಸಿದ್ದಾರೆ ಎಂದು ಹೇಳಲಾಗಿದ್ದು, ಬಿಜೆಪಿ ನಾಯಕರು ಈ ಬಗ್ಗೆ ಎರಡೂ ಪಕ್ಷಗಳ ನಾಯಕರ ಜತೆ ಚರ್ಚೆ ನಡೆಸಿದ್ದಾರೆನ್ನಲಾಗಿದೆ. ಈ ಹಿಂದೆ ಅಟಲ್‌ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಟಿಡಿಪಿಯ ಜಿಎಂಸಿ ಬಾಲಯೋಗಿ ಲೋಕಸಭೆಯ ಸ್ಪೀಕರ್ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.ಭವಿಷ್ಯದಲ್ಲಿ ಮಿತ್ರಪಕ್ಷಗಳಲ್ಲಿ ಭಿನ್ನಾಭಿಪ್ರಾಯ ರೂಪುಗೊಂಡು ಪಕ್ಷಗಳಲ್ಲಿ ಒಡಕು ಮೂಡಿದ ಸಂದರ್ಭದಲ್ಲಿ ಲೋಕಸಭೆಯ ಸ್ಪೀಕರ್ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿರುವುದರಿಂದ ಟಿಡಿಪಿ ಮತ್ತು ಜೆಡಿಯು ಸ್ಪೀಕರ್ ಸ್ಥಾನಕ್ಕೆ ಬೇಡಿಕೆ ಇಟ್ಟಿವೆ ಎಂದು ಹೇಳಲಾಗಿದೆ.

RELATED ARTICLES
- Advertisment -
Google search engine

Most Popular

Recent Comments