Wednesday, November 13, 2024
Google search engine
Homeಇ-ಪತ್ರಿಕೆಹಾಲಿನ ದರ ಏರಿಕೆ ಮಾಡಿಲ್ಲ, ಲೀಟರ್‍ ಗೆ 50 ಎಂಎಲ್ ಹಾಲು ಸೇರ್ಪಡೆ: ಸಿದ್ದರಾಮಯ್ಯ

ಹಾಲಿನ ದರ ಏರಿಕೆ ಮಾಡಿಲ್ಲ, ಲೀಟರ್‍ ಗೆ 50 ಎಂಎಲ್ ಹಾಲು ಸೇರ್ಪಡೆ: ಸಿದ್ದರಾಮಯ್ಯ

ಬೆಂಗಳೂರು: ನಂದಿನಿ ಹಾಲಿನ ಪ್ಯಾಕೇಟ್‌ ಗಳಲ್ಲಿ ಹಾಲಿನ ಪ್ರಮಾಣವನ್ನು 50 ಎಂ.ಎಲ್‌ ಹೆಚ್ಚಳ ಮಾಡಿ, ಹೆಚ್ಚುವರಿ ಹಾಲಿಗೆ 2 ರೂ. ದರ ನಿಗದಿಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಅರ್ಧಲೀಟರ್‌ ಹಾಲಿನ ಪ್ಯಾಕೇಟ್‌ ನಲ್ಲಿ 550 ಎಂಎಲ್‌ ಹಾಲು ಹಾಗೂ ಲೀಟರ್‌ ಪ್ಯಾಕೇಟ್‌ ನಲ್ಲಿ 1,050 ಎಂಎಲ್‌ ಹಾಲು ದೊರೆಯಲಿದೆ. ಡೈರಿಗಳಿಗೆ ರೈತರು ಲೀಟರ್‍ ಗಿಂತ ಹೆಚ್ಚುವರಿಯಾಗಿ ತರುತ್ತಿರುವ ಹಾಲಿಗೂ ದರ ನಿಗದಿಪಡಿಸಲು ಕೆಎಂಎಫ್‌ ಸಂಸ್ಥೆ ಈ ನಿರ್ಧಾರ ಮಾಡಿದೆ ಎಂದು ಅವರು ಹೇಳಿದರು.

ಇಲ್ಲಿಯವರೆಗೆ ಒಂದು ಲೀಟರ್‍ ಹಾಲಿಗೆ 42 ರೂ. ಮತ್ತು 500 ಮಿ.ಲೀ ಹಾಲಿಗೆ 22 ರೂ. ಬೆಲೆಯನ್ನು ನೀಡುತ್ತಿತ್ತು. ಈಗಾಗಲೇ ಗರಿಷ್ಟ ಪ್ರಮಾಣದ ಹಾಲನ್ನು ಹಾಲಿನ ಪೌಡರ್‌ ತಯಾರಿಕೆ ಮಾಡುವ ಉದ್ದೇಶಕ್ಕೆ ಬಳಕೆ ಮಾಡಲಾಗುತ್ತಿದೆ. ನಿತ್ಯ ಸುಮಾರು 30 ಲಕ್ಷ ಲೀಟರ್‌ ಹಾಲು ಪೌಡರ್‌ ತಯಾರಿಕೆಗಾಗಿ ಬಳಸಲ್ಪಡುತ್ತಿದ್ದು, 250 ಮೆಟ್ರಿಕ್‌ ಟನ್‌ ಹಾಲಿನ ಪೌಡರ್‌ ತಯಾರಿಸಲಾಗುತ್ತಿದೆ ಎಂದರು.

RELATED ARTICLES
- Advertisment -
Google search engine

Most Popular

Recent Comments