ಶಿವಮೊಗ್ಗ: ಮಥುರ ಪ್ಯಾರಡೈಸ್ ಪ್ರಾರಂಭವಾಗಿ 25 ವರ್ಷಗಳು ತುಂಬಿವೆ. ಮಥುರ ಪ್ಯಾರಡೈಸ್ ಅಂದರೆ ತಕ್ಷಣ ಎಲ್ಲರಿಗೂ ನೆನಪಾಗುವ ಹೆಸರು ಗೋಪಿ, ಮಥುರ ಪ್ಯಾರಡೈಸ್ ಹಲವಾರು ಸಂಘ ಸಂಸ್ಥೆಗಳಿಗೆ ತವರುಮನೆ ಇದ್ದಂತೆ. ಇಲ್ಲಿ ಪ್ರತಿನಿತ್ಯ ಒಂದಲ್ಲಾ ಒಂದು ಸಂಘ-ಸಂಸ್ಥೆಯವರು ಸಭೆ ಸಮಾರಂಭ ನಡೆಸುತ್ತಾರೆ. ಪತ್ರಿಕಾ ಗೋಷ್ಠಿಯನ್ನು ಕೂಡ ಇಲ್ಲಿ ಹಮ್ಮಿಕೊಳ್ಳಲಾಗುತ್ತಿತ್ತು. ಗೋಪಿಯ ಉಪಚಾರ ಸ್ನೇಹ ಮನೋಭಾವನೆ ಸಲಹೆ ಸಹಕಾರ ಯಾರೊಬ್ಬರೂ ಮರೆಯುವಂತಿಲ್ಲ ಎಂದು ಮಥುರ ಪ್ಯಾರಡೈಸ್ ರಜತೋತ್ಸವ ಸಮಿತಿಯ ಅಧ್ಯಕ್ಷ ವಸಂತ್ ಹೋಬಳಿದಾರ್ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.
1991ರಲ್ಲಿ ಪ್ರಾಂಭವಾದ ಮಥುರ ಪ್ಯಾರಡೈಸ್ ನಗರದಲ್ಲಿ ಮೊದಲ ಬಾರಿಗೆ ಹಾಲ್ ಬಾಡಿಗೆ ಇಲ್ಲದೆ ಕಾರ್ಯಕ್ರಮಗಳಿಗೆ ಸ್ಥಳಾವಕಾಶ ನೀಡುವ ಸೌಲಭ್ಯ ಪ್ರಾರಂಭಿಸಿದವರು. ಅಂದು ಒಂದು ಊಟದ ಬೆಲೆ 30 ರೂಪಾಯಿಗಳು. ಕೇವಲ ಮೂರು ಸಾವಿರ ರೂಪಾಯಿಗಳ ವೆಚ್ಚದಲ್ಲಿ ನೂರು ಜನರಿಗೆ ಕಾರ್ಯಕ್ರಮ ಏರ್ಪಡಿಸುವ ಸುಲಭ ವಿಧಾನ ಹಲವರಿಗೆ ವರದಾನವಾಯಿತು. ನಾಮಕರಣ, ಸೀಮಂತ, ಹುಟ್ಟುಹಬ್ಬ, ತೊಟ್ಟಿಲ ಶಾಸ್ತ್ರದಿಂದ ಹಿಡಿದು ವಿವಾಹ ಮಹೋತ್ಸವದವರೆಗೂ ಕಾರ್ಯಕ್ರಮಗಳು ಸುಲಲಿತವಾಗಿ ನಡೆದ ತೃಪ್ತಿ ಜನಮಾನಸದಲ್ಲಿ ಬೆಳೆಸಿತು. ಇಂತಹ ಸಾರ್ವಜನಿಕರ ಸೇವೆಯನ್ನು ಪ್ರಪ್ರಥಮ ಬಾರಿಗೆ ಶಿವಮೊಗ್ಗ ನಗರದಲ್ಲಿ ಸ್ಥಾಪಿಸಿ ಜನಸಾಮಾನ್ಯರಿಗಾಗಿ ಹೋಟೆಲ್ ಉದ್ಯಮದಲ್ಲಿ ದೊಡ್ಡದೊಂದು ಕನಸು ಕಂಡು, ನನಸು ಮಾಡಬಹುದೆಂದು ಹಲವರಿಗೆ ಸ್ಫೂರ್ತಿಯಾಗಿ, ಮಾದರಿಯಾಗಿ ನಿಂತವರು ಎನ್. ಗೋಪಿನಾಥ್ ಎಂದು ಹೇಳಿದರು.
ಗೋಪಿನಾಥ್ ಅವರ ಅಭಿಮಾನದಿಂದ ನಗರದ ಸುಮಾರು 50ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಒಂದು ವರ್ಷಕಾಲ ಸ್ವಯಂಪ್ರೇರಿತವಾಗಿ ‘ಮಥುರ ಪ್ಯಾರಡೈಸ್ ರಜತೋತ್ಸವ’ವನ್ನು ಅಚರಿಸಲು ಮುಂದಾಗಿದೆ ಎಂದು ಮಾಹಿತಿ ನೀಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಸಮಿತಿಯ ಸಂಯೋಜಕ ಅ.ನಾ.ವಿಜಯೇಂದ್ರ ರಾವ್, ಜಿ.ವಿಜಯಕುಮಾರ್. ಉಪಾಧ್ಯಕ್ಷ ಶ್ರೀಮತಿ ಶಾಂತ ಶೆಟ್ಟಿ. ನಿರ್ದೇಶಕ ಅಚ್ಚುತ್ ರಾವ್ ಉಪಸ್ಥಿತರಿದ್ದರು.