Thursday, December 5, 2024
Google search engine
Homeಅಂಕಣಗಳುಲೇಖನಗಳುಬೇಡಿಕೆಗಳನ್ನು ಈಡೇರಿಸಿ- ನ್ಯಾಯ ಒದಗಿಸಿ ಅಂಗನವಾಡಿ ಕಾರ್ಯಕರ್ತೆಯರ -ಸಹಾಯಕಿಯರ ಬೃಹತ್ ಪ್ರತಿಭಟನೆ

ಬೇಡಿಕೆಗಳನ್ನು ಈಡೇರಿಸಿ- ನ್ಯಾಯ ಒದಗಿಸಿ ಅಂಗನವಾಡಿ ಕಾರ್ಯಕರ್ತೆಯರ -ಸಹಾಯಕಿಯರ ಬೃಹತ್ ಪ್ರತಿಭಟನೆ

ಶಿವಮೊಗ್ಗ: ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ ಜಿಲ್ಲಾ ಸಮಿತಿ ಇಂದು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತು.
ಸಮಗ್ರ ಶಿಶು ಅಭಿವೃದ್ದಿ ಯೋಜನೆ ಪ್ರಾರಂಭವಾಗಿ ಸುಮಾರು ೪೨ ವರ್ಷಗಳಾಗಿದೆ. ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು ರಾಜ್ಯ ಮತ್ತು ಕೇಂದ್ರ ಸರ್ಕಾರ ಮಹಿ ಳೆಯರ ಮತ್ತು ಮಕ್ಕಳ ಸರ್ವತೋ ಮುಖ ಅಭಿವೃದ್ದಿಗೆ ಪೂರಕವಾದ ಅನೇಕ ಯೋಜನೆ ಗಳನ್ನು ಜಾರಿಗೆ ತರಲಾಗಿದೆ. ಆದರೆ ಇದರಲ್ಲಿ ದುಡಿ ಯುವ ಅಂಗನವಾಡಿ ಕಾರ್ಯಕರ್ತೆ ಯರು ಮತ್ತು ಸಹಾಯಕಿಯರಿಗೆ ಇದುವರೆಗೂ ಸೇವೆ ಖಾಯಂ ಗೊಳಿ ಸುವ ಚಿಂತನೆ ಮಾಡದಿರು ವುದು ದುರಾದೃಷ್ಟಕರ ಸಂಗತಿ ಎಂದರು.
ತಾಯಂದಿರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಂಗನವಾಡಿ ಕೇಂದ್ರಗಳ ಸಮಯ ವನ್ನು ೨೦೧೧ರಿಂದ ಅನ್ವಯವಾಗು ವಂತೆ ಬೆಳಿಗ್ಗೆ ೯.೩೦ರಿಂದ ಸಂಜೆ ೪ ಗಂಟೆವರೆಗೆ ವಿಸ್ತರಿಸಿದೆ. ಜೊತೆಗೆ ೨೦೧೭ರ ಅಕ್ಟೋಬರ್ ೨ ರಿಂದ ಮಾತೃಪೂರ್ಣ ಯೋಜನೆ ಜಾರಿಗೆ ತಂದಿದ್ದು, ಇದಕ್ಕಾಗಿ ಹೆಚ್ಚುವರಿ ಶ್ರಮ ವಹಿಸಬೇಕಾಗಿದೆ. ಆದರೆ ಅಂಗನವಾಡಿಗಳ ಶ್ರಮಕ್ಕೆ ತಕ್ಕ ವೇತನ ನೀಡುವಲ್ಲಿ ಸರ್ಕಾರ ಕ್ರಮ ಕೈಗೊಳ್ಳದಿರುವುದು ಬೇಸರವುಂಟು ಮಾಡಿದೆ ಎಂದು ಆರೋಪಿಸಿದರು.
z ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸೇವೆ ಖಾಯಂಗೊಳಿಸಬೇಕು.
z ಕನಿಷ್ಠ ೧೮೦೦೦ ವೇತನ ಹಾಗೂ ೩೦೦೦ ಸಾವಿರ ರೂ.ಪಿಂಚಣಿ
ಜಾರಿಗೆ ತರಬೇಕು.
ಮಿನಿ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಬೇಕು. ಇಚ್ಚಿಸಿದಾಗ ಪರಿಹಾರ ಸಮೇತ ಸ್ವಯಂಘೋಷಣಾ ನಿವೃತ್ತಿ ನೀಡಬೇಕು.
ಸೇವಾ ಹಿರಿತನದ ಮೇಲೆ ವೇತನ ಹೆಚ್ಚಿಸಬೇಕು.
ಮಾತೃಪೂರ್ಣ ಯೋಜನೆಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು.
ಬೇಸಿಗೆ ರಜೆ ೧೫ ದಿನದ ಬದಲು ಒಂದು ತಿಂಗಳಿಗೆ ಹೆಚ್ಚಿಸಬೇಕು.
ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಕರ್ಯ ಒದಗಿಸಬೇಕು.
೧೫ ವರ್ಷ ಸೇವೆ ಸಲ್ಲಿಸಿದ ಅಂಗನವಾಡಿ ಕಾರ್ಯಕರ್ತೆಯರಿಗೆ ಶೇ.೩೦ರಷ್ಟು ಮೀಸಲಾತಿ ನೀಡಬೇಕು.

RELATED ARTICLES
- Advertisment -
Google search engine

Most Popular

Recent Comments