ಶಿವಮೊಗ್ಗ: ಪ್ರತಿಭೆಗಳನ್ನು ಹೊರತೆಗೆದು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಅವಕಾಶ ಕಲ್ಪಿಸುವ ಹಿನ್ನಲೆಯಲ್ಲಿ ಶೈನ್ ಕ್ರಿಯೇಟಿವ್ ಗ್ರೂಪ್ ಸಂಸ್ಥೆ ವತಿಯಿಂದ ಜು.28ರಂದು ಬೆಳಿಗ್ಗೆ 10ರಿಂದ ಸಂಜೆ ೬ರವರೆಗೆ ಕೋಟೆ ರಸ್ತೆಯ ಶ್ರೀಕೋಟೆ ಮಾರಿಕಾಂಬಾ ದೇವಸ್ಥಾನದ ಸಭಾಂಗಣದಲ್ಲಿ ಮಲೆನಾಡಿನ ಮಹಾನಟಿ-ಮಹಾನಟ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಶೈನ್ ಸಂಸ್ಥೆಯ ಮುಖ್ಯಸ್ಥೆ ಶೃತಿ ಶೇಟ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಒಂಬತ್ತು ವರ್ಷದಿಂದ ನಮ್ಮ ಸಂಸ್ಥೆಯು ಮಕ್ಕಳಿಗಾಗಿ ಮಾತ್ರ ಸ್ಪರ್ಧೆಗಳನ್ನು ಆಯೋಜಿಸುತ್ತಾ ಬ ರುತ್ತಿತ್ತು. ಇದೇ ಪ್ರಥಮ ಬಾರಿ ದೊಡ್ಡವರನ್ನು ಒಳಗೊಂಡಂತೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ 5ರಿಂದ 60 ವರ್ಷದೊಳಗಿನ ಮಕ್ಕಳು, ವಯಸ್ಕರು, ಮಹಿಳೆಯರು ಮತ್ತು ಪುರುಷರು ಭಾಗವಹಿಸಬಹುದಾಗಿದೆ. ತೀರ್ಪುಗಾರರ ತೀರ್ಮಾನವೇ ಅಂತಿಮ ಎಂದರು.
ಪ್ರತಿಸ್ಪರ್ಧಿಗೂ 5 ನಿಮಿಷಗಳ ಕಾಲ ಅವಕಾಶ ನೀಡಲಾಗುವುದು. ಹೆಸರು ನೊಂದಾಯಿಸಲು ಜು.26 ಕೊನೆಯ ದಿನವಾಗಿದೆ. ಭಾಗವಹಿಸುವರೆಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು. 250 ರೂ. ಶುಲ್ಕ ವಿಧಿಸಲಾಗಿದೆ. ಆದರೆ ಬಡ ಮಕ್ಕಳಿಗೆ, ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಪ್ರವೇಶವಿರುತ್ತದೆ ಎಂದರು.
ಸ್ಪರ್ಧೆಯಲ್ಲಿ ಸೋತ ಮಕ್ಕಳಿಗೆ ಕಾರ್ಯಗಾರವನ್ನು ಆಯೋಜಿಸಿ ಸ್ಪರ್ಧೆಯ ಸಮಯದಲ್ಲಿ ಅವರು ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳುವ ತರಬೇತಿಯನ್ನು ನೀಡಲಾಗುತ್ತದೆ. ಇದು ನಮ್ಮ ಸಂಸ್ಥೆಯ ವಿಶೇಷತೆಯಾಗಿದೆ. ಇಲ್ಲಿ ಆಯ್ಕೆಯಾದವರಿಗೆ ಸಿನಿಮಾ ಮತ್ತು ಧಾರವಾಹಿಗಳಲ್ಲಿ ಅವಕಾಶ ಸಿಗಬಹುದಾಗಿದೆ. ಆ ನಿಟ್ಟಿನಲ್ಲಿ ನಮ್ಮ ಸಂಸ್ಥೆ ಸಹಕರಿಸುತ್ತದೆ ಎಂದರು.ಹೆಚ್ಚಿನ ವಿವರಕ್ಕಾಗಿ 9845958313, 998650616, 72957232ನ್ನು ಸಂಪರ್ಕಿಸಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪರಮೇಶ್ವರ್, ಅಶ್ವಿನಿಗೌಡ ಉಪಸ್ಥಿತರಿದ್ದರು.