ಶಿವಮೊಗ್ಗ : ಜಿಲ್ಲೆಯಲ್ಲಿ ಇಂದಿ ನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ. ಎಂ.ಲೋಕೇಶ್ ತಿಳಿಸಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಚುನಾವಣಾ ಆಯೋಗ ಇಂದು ರಾಜ್ಯದ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ದಿನಾಂಕವನ್ನು ಘೋಷಿಸಿದ್ದು, ನೀತಿ ಸಂಹಿತೆ ಕೂಡಾ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ ಎಂದರು.
ರಾಜಕೀಯ ಪಕ್ಷಗಳು ಸಾರ್ವ ಜನಿಕ ಸ್ಥಳಗಳಲ್ಲಿ ಹಾಗೂ ಖಾಸಗಿ ಸ್ಥಳಗಳಲ್ಲಿ ಹಾಕಿರುವ ಪಕ್ಷಕ್ಕೆ ಸಂಬಂ ಧಿಸಿದ ಬಂಟಿಂಗ್ಸ್, ಪ್ಲೆಕ್ಸ್ ಇತರೇ ಪ್ರಚಾರ ಫಲಕಗಳನ್ನು ಮುಂದಿನ ೭೨ ಗಂಟೆಯೊಳಗೆ ತೆಗೆಯಬೇಕು. ಇಲ್ಲದಿದ್ದರೆ ಜಿಲ್ಲಾ ಚುನಾವಣಾ ಆಯೋಗ ತೆರವುಗೊಳಿಸಿ ಇದರ ಖರ್ಚನ್ನು ಸಂಬಂಧಪಟ್ಟ ಪಕ್ಷಕ್ಕೆ ವಿಧಿಸಲಾಗುತ್ತದೆ ಎಂದರು.
ಸರ್ಕಾರಿ ಜಾಗದಲ್ಲಿ ಮತ್ತು ಸರ್ಕಾ ರದ ವತಿಯಿಂದಲೇ ಸರ್ಕಾರದ ಯೋಜನೆಗಳನ್ನು ಘೋಷಿಸುವಂತಹ ಸೂಚಿಸಿರುವ ನಾಮಫಲಕವನ್ನೂ ಸಹ ತೆರವುಗೊಳಿಸಲಾಗುತ್ತದೆ ಎಂದ ಅವರು, ಚುನಾವಣೆ ನ್ಯಾಯ ಸಮ್ಮತ ಹಾಗೂ ಮುಕ್ತವಾಗಿ ನಡೆಯಲು ಈಗಾಗಲೇ ಎಲ್ಲಾ ರೀತಿಯ ಕ್ರಮ ಗಳನ್ನು ಕೈಗೊಳ್ಳಲಾಗಿದೆ ಎಂದರು.
ಜಿಲ್ಲೆಯಲ್ಲಿ ಈ ಬಾರಿ ೧೩,೯೨,೮೭೬ ಮತದಾರರಿದ್ದು, ಇದರಲ್ಲಿ ೬,೯೬,೪೧೮ ಪುರುಷರು, ಹಾಗೂ ೬,೯೬,೪೫೮ ಮಹಿಳಾ ಮತದಾರ ರಿದ್ದಾರೆ. ಕಳೆದ ೨೦೧೩ಕ್ಕೆ ಹೋಲಿಸಿ ದರೆ ಈ ಬಾರಿ ಶೇ.೧೦ರಷ್ಟು ಮತದಾ ರರು ಹೆಚ್ಚಾಗಿದ್ದಾರೆ. ಅಲ್ಲದೆ, ಈ ಬಾರಿ ೫೩ ತೃತೀಯ ಲಿಂಗಿಗಳು ಮತದಾನ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
ಕಳೆದ ೨೦೧೩ರ ಚುನಾವಣೆಯಲ್ಲಿ ೭೫.೫೩ ರಷ್ಟು ಮತದಾನವಾಗಿತ್ತು. ಈಬಾರಿ ಮತದಾನದ ಪ್ರಮಾಣ ವನ್ನು ಹೆಚ್ಚಳ ಮಾಡುವ ಉದ್ದೇಶ ದಿಂದ ಮತದಾರರಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮ ಗಳು ಈಗಾಗಲೇ ಪ್ರತಿನಿತ್ಯ ಆರಂಭಗೊಂಡಿವೆ. ಜಿ.ಪಂ. ಸಿಇಓ ರಾಕೇಶ್ ಕುಮಾರ್ ಈ ಕಾರ್ಯ ಕ್ರಮದ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಜಿಲ್ಲೆಯಲ್ಲಿ ೧೨೧೭೪ ವಿಕಲಚೇತನ ಮತದಾರರಿದ್ದು, ಇವರುಗಳಿಗೆ ಮತದಾನ ಮಾಡಲು ಮತದಾನ ಕೇಂದ್ರದಲ್ಲಿ ವೀಲ್ ಚೇರ್ ಇನ್ನು ಮುಂತಾದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ. ಇತರೇ ಮತದಾರರಿಗೆ ಬಿಸಿಲಿನ ತಾಪವನ್ನು ತಗ್ಗಿಸಲು ಶಾಮಿ ಯಾನದ ವ್ಯವಸ್ಥೆ ಮಾಡಲಾಗಿದೆ. ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಯನ್ನೂ ಕೂಡಾ ಮತದಾನ ಕೇಂದ್ರದಲ್ಲಿ ಕಲ್ಪಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿ.ಪಂ. ಸಿಇಓ ಡಾ. ರಾಕೇಶ್‌ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ವಾರ್ತಾಧಿಕಾರಿ ಶಫಿ ಮೊದಲಾದವರು ಹಾಜರಿದ್ದರು.