ಶಿವಮೊಗ್ಗ : ಪತ್ರ ಸಂಸ್ಕೃತಿ ಸಂಘಟನೆ ವತಿಯಿಂದ ನ.23, 24 ರಂದು ಬಿ.ಆರ್.ಪ್ರಾಜೆಕ್ಟ್‍ನ ಕೆ.ಪಿ.ಸಿ.ರಂಗಮಂದಿರದಲ್ಲಿ ಬೆಳ್ಳಿ ಹಬ್ಬ ಸಮಾರಂಭವನ್ನು ಆಯೋಜಿಸಲಾಗಿದೆ ಎಂದು ಪತ್ರ ಸಂಸ್ಕೃತಿ ಸಂಘಟನೆಯ ಸಂಚಾಲಕ ಹೊಸಹಳ್ಳಿ ದಾಳೇಗೌಡ ತಿಳಿಸಿದರು.
ಮಂಗಳವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮಾನಸಿಕ ಒತ್ತಡವನ್ನು ನಿವಾರಿಸಿಕೊಳ್ಳಬಹುದಾಗಿದ್ದ ಪತ್ರ ಬರೆವ ಕಲೆಯನ್ನು ಉಳಿಸಿ ಬೆಳೆಸಲು ಹಾಗೂ ಬರಹ ಸಂಸ್ಕøತಿಯನ್ನು ಉಳಿಸಲು ಯಾವುದೇ ಅಧ್ಯಕ್ಷ, ಕಾರ್ಯದರ್ಶಿ, ಖಜಾಂಚಿಗಳಿಲ್ಲದ ಪತ್ರ ಸಂಸ್ಕøತಿ ಸಂಘಟನೆಯನ್ನು 1999 ರಲ್ಲಿ ಆರಂಭಿಸಲಾಗಿದೆ. ಸತತವಾಗಿ 25 ವರ್ಷದಿಂದ ಮಿತ್ರರ ಸಮ್ಮಿಲನ ಏರ್ಪಡಿಸುತ್ತಾ ಬಂದಿದ್ದು, ಪತ್ರ ಸಂಸ್ಕøತಿಯನ್ನು ಬೆಳೆಸುವ ಮೂಲಕ ಮಾನವೀಯ ಮೌಲ್ಯಗಳನ್ನು ಬೆಸೆಯುವ ಕೆಲಸ ಮಾಡುತ್ತಿದೆ ಎಂದರು.
ಪತ್ರ ಸಂಸ್ಕøತಿ ಸಂಘಟನೆಯು ಪಿಸು ಮಾತು ಎಂಬ ಪತ್ರ ಸಂಸ್ಕøತಿ ಮಿತ್ರರ ತ್ರೈಮಾಸಿಕ ಪತ್ರಿಕೆಯನ್ನೂ ಕೂಡ ಕಳೆದ 15 ವರ್ಷಗಳಿಂದ ಹೊರತರುತ್ತಿದೆ. ದೇಶ ಮತ್ತು ವಿದೇಶಗಳು ಸೇರಿ ಸುಮಾರು 150 0ಕ್ಕೂ ಹೆಚ್ಚು ಪತ್ರ ಮಿತ್ರ ಗೆಳೆಯರು ಸಂಘಟನೆಯಲ್ಲಿದ್ದಾರೆ ಎಂದರು.
ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಬರಹ ಸಂಸ್ಕøತಿ ಇಂದಿನ ಸವಾಲುಗಳು ಹಾಗೂ ಕನ್ನಡ ಭಾಷೆ ಹುಟ್ಟು ಮತ್ತು ಬೆಳವಣಿಗೆ ಕುರಿತು ಉಪನ್ಯಾಸ ನಡೆಯುವುದು. ಮತ್ತು ಕವಿಗೋಷ್ಠಿ, ಹರಟೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುತ್ತವೆ. ನಾಡಿನ ವಿವಿಧ ಭಾಗಗಳಿಂದ ಬಂದ ಪತ್ರ ಪ್ರೇಮಿ ಗೆಳೆಯರು ಪರಸ್ಪರ ತಮ್ಮ ಸಂಸ್ಕøತಿ ಸಾಹಿತ್ಯ, ಕಲೆ ಮುಂತಾದವುಗಳನ್ನು ವಿನಿಮಯ ಮಾಡಿಕೊಳ್ಳಲಾಗುವುದು.
ಪತ್ರಿಕಾಗೋಷ್ಟಿಯಲ್ಲಿ ಕಾಂತೇಶ್ ಕದರಮಂಡಲಗಿ, ರಮೇಶ್, ಉಮಾ ದಾಳೇಗೌಡ ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟದ ಅಂಚೆ ಕಾರ್ಡ್ ಲೇಖನ ಸ್ಪರ್ಧೆ :
ಬೆಳ್ಳಿ ಹಬ್ಬದ ಅಂಗವಾಗಿ ಜಿಲ್ಲಾ ಮಟ್ಟದ ಅಂಚೆ ಕಾರ್ಡ್ ಲೇಖನ ಸ್ಪರ್ಧೆಯನ್ನೂ ಕೂಡ ಆಯೋಜಿಸಲಾಗಿದೆ. ಅಂಚೆ ಕಾರ್ಡ್‍ನಲ್ಲಿ ಬಾಂಧವ್ಯಕ್ಕೆ ಸಂಬಂಧಿಸಿದಂತೆ ತಮ್ಮ ಅನಿಸಿಕೆಗಳನ್ನು ಬರೆಯಬಹುದು. ಇದಕ್ಕೆ ಯಾವುದೇ ವಯೋಮಿತಿ ಇಲ್ಲ. ಆದರೆ, ಬರಹ ಅಂಚೆ ಕಾರ್ಡ್‍ನಲ್ಲಿಯೇ ಇರಬೇಕು. ಮತ್ತು ನ.16 ರೊಳಗೆ ಅದು ತಲುಪಬೇಕು. ಅತ್ಯುತ್ತಮವಾಗಿ ಬರೆದ 10 ಜನರಿಗೆ ರೂ.250 ಬಹುಮಾನ ನೀಡಲಾಗುವುದು. ವಿಳಾಸ: ಹೊಸಹಳ್ಳಿ ದಾಳೇಗೌಡ, ನಂ. 4, ಚೌಡಮ್ಮ ಕ್ಯಾಂಪ್, ಸಿಂಗನಮನೆ, ಬಿ.ಆರ್. ಪ್ರಾಜೆಕ್ಟ್, ಶಿವಮೊಗ್ಗ ಜಿಲ್ಲೆ. ಪಿನ್- 577115 ಆಗಿದೆ.