Saturday, December 14, 2024
Google search engine
Homeಇ-ಪತ್ರಿಕೆಬಿಜೆಪಿಯವರು ಐದು ವರ್ಷ ಹೋರಾಟ ಮಾಡುತ್ತಲೇ ಇರಲಿ: ಅಯನೂರು ಮಂಜುನಾಥ್

ಬಿಜೆಪಿಯವರು ಐದು ವರ್ಷ ಹೋರಾಟ ಮಾಡುತ್ತಲೇ ಇರಲಿ: ಅಯನೂರು ಮಂಜುನಾಥ್

ಶಿವಮೊಗ್ಗ : ವಿರೋಧ ಪಕ್ಷವಾಗಿರುವ ಬಿಜೆಪಿಯು ಈಗ ದಿನನಿತ್ಯ ಹೋರಾಟವನ್ನು ಹಮ್ಮಿಕೊಳ್ಳುತ್ತಿದೆ. ತಮ್ಮ ಅಧಿಕಾರಾವಧಿಯಲ್ಲಿ ಶೇ.40 ರಷ್ಟು ಕಮಿಷನ್ ಭ್ರμÁ್ಟಚಾರದ ಸಾಧನೆ ಮಾಡಿದವರಿಗೆ ಜನರು ವಿಧಾನಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದಾರೆ. ಭ್ರμÁ್ಟಚಾರದ ಕಾರಣಕ್ಕೆ ಅಧಿಕಾರ ಕಳೆದುಕೊಂಡವರು ಈಗ ಬಹಳ ಸಜ್ಜನರಂತೆ ಜನರ ಮನಸ್ಸನ್ನು ಬೇರೆಡೆ ಸೆಳೆಯಲು ರಾಜ್ಯ ಸರಕಾರದ ವಿರುದ್ಧ ಹೋರಾಟ ಹಮ್ಮಿಕೊಳ್ಳುತ್ತಿರುವುದು ತುಂಬಾ ಹಾಸ್ಯಸ್ಪದ ಸಂಗತಿ. ಅವರ ಪಕ್ಷದವರು ಮಾಡಿದ ಹಲವು ಹಗರಣಗಳ ಟಿಪ್ಸ್‍ನ್ನು ನಾನು ಕೊಡುತ್ತೇನೆ. ಅವುಗಳ ಕುರಿತು ಬಿಜೆಪಿಯವರು ಹೋರಾಟ ಹಮ್ಮಿಕೊಳ್ಳಲಿ ಎಂದು ಮಾಜಿ ಸಂಸದ ಅಯನೂರು ಮಂಜುನಾಥ್ ಸವಾಲೆಸೆದರು.

ಪತ್ರಿಕಾಭವನದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಮೈಸೂರಿನ ಮುಡಾ ಹಗರಣದದಲ್ಲಿ ಅವರ ಅಧಿಕಾರಾವಧಿಯಲ್ಲಿ ಅವರೇ ಮಾಡಿದ ತಪ್ಪಿಗೆ ಮುಖ್ಯಮಂತ್ರಿಯ ರಾಜೀನಾಮೆ ಕೇಳುತ್ತಿದ್ದಾರೆ. ಇವರುಗಳೆ ರಾಜ್ಯದ ಎಲ್ಲೆಡೆ ನಗರ ಅಭಿವೃದ್ದಿ ಪ್ರಾಧಿಕಾರಗಳಲ್ಲಿ ಅವ್ಯವಹಾರ ಮತ್ತು ಭ್ರμÁ್ಟಚಾರಗಳಲ್ಲಿ ಮುಳುಗಿದ್ದು ಬೆಳಕಿಗೆ ಬಂದಿವೆ ಎಂದು ಹೇಳಿದರು.

ಶಿವಮೊಗ್ಗದಲ್ಲಿಯೂ ಬಹು ದೊಡ್ಡ ಹಗರಣಗಳು ನಡೆದಿವೆ. ಅಜಾತ ಶತ್ರು ವಾಜಪೇಯಿ ಹೆಸರಿನಲ್ಲಿ ಲೇಔಟ್ ಮಾಡಿ ನಿವೇಶನ ಹಂಚಿಕೆಯಲ್ಲಿಯೂ ದೊಡ್ಡ ಭ್ರμÁ್ಟಚಾರವು ಬಿಜೆಪಿಯವರಿಂದ ನಡೆದಿದೆ. ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಕಾಲದಲ್ಲಿಯೂ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ಕೊಡದೆ ಭ್ರμÁ್ಟಚಾರ ನಡೆದಿದೆ. ಈ ರೀತಿಯ ಹತ್ತು ಹಲವು ಹಗರಣಗಳ ಕುರಿತು ಬಿಜೆಪಿಯವರು ಐದು ವರ್ಷ ಹೋರಾಟ ಮಾಡುತ್ತಲೇ ಇರಲಿ ಎಂದು ತಿಳಿಸಿದರು.

ಭೋವಿ ನಿಗಮದಲ್ಲಿ ನೂರಾರು ಕೋಟಿ ರೂ. ಭ್ರμÁ್ಟಚಾರ ನಡೆದಿದೆ. ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿದ್ದ ಶಂಕರ ದೇವರಮನಿಯವರನ್ನು ಬಿಜಾಪುರದಲ್ಲಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧಿಕಾರಿಯನ್ನಾಗಿ ನೇಮಕ ಮಾಡಿರುವುದು ಎಷ್ಟು ಸರಿಯಾಗಿತ್ತು. ಇದರ ಕುರಿತು ಸಿಬಿಐ ತನಿಖೆಯಾಗಲಿ. ರಾಜ್ಯದ   ಎಲ್ಲಾ ನಿಗಮಗಳಲ್ಲಿ ಇವರ ಕಾಲಾವಧಿಯಲ್ಲಿ ಲೂಟಿಯಾಗಿದೆ. ಕೆಂಗೇರಿ ಸಮೀಪದಲ್ಲಿ 150 ಜನರು ಕಳೆದ 40-50 ವರ್ಷದಿಂದ ಬಗುರು ಹುಕುಂ ಜಮೀನನ್ನು ಸಾಗುವಳಿ ಮಾಡುತ್ತಾ ಬಂದಿದ್ದು ಅವರಿಗೆ ಹಕ್ಕುಪತ್ರವನ್ನು ತಪ್ಪಿಸಿ ಬೇರೆಯವರಿಗೆ ಖಾತೆ ಮಾಡಿಕೊಡಲಾಗಿದೆ. 50-60 ಸಾವಿರ ಕೋಟಿ ರೂ. ಬೆಲೆಬಾಳುವ ಸುಮಾರು 2500 ಎಕರೆ ಜಮೀನನ್ನು ಆರ್. ಅಶೋಕ್ ಅವರು ತಮಗೆ ಬೇಕಾದವರಿಗೆ ಬೇನಾಮಿ ಹೆಸರಿನಲ್ಲಿ ಕೊಡಿಸಿದ್ದಾರೆ. ಕೋವಿಡ್ ಸಮಯದಲ್ಲಿ 40 ಸಾವಿರ ಕೋಟಿ ರೂ. ಭ್ರμÁ್ಟಚಾರ ನಡೆದಿದೆ. ಶಿವಮೊಗ್ಗ ನಗರದಲ್ಲೂ ನಾಲ್ಕೈದು ಅಸ್ಪತ್ರೆಗಳು ಈ ಭ್ರμÁ್ಟಚಾರದಲ್ಲಿ ಪಾಲುದಾರರಾಗಿವೆ. ಸ್ವತಃ ಬಿಜೆಪಿಯ ಬಸವನಗೌಡ ಯತ್ನಾಳ್ ಅವರೇ ಇವುಗಳ ದಾಖಲೆಗಳಿವೆ ಎಂದಿದ್ದಾರೆ ಎಂದು ಹೇಳಿದರು.

ಬೆಂಗಳೂರಿನ ಬಿಡಿಎದಲ್ಲಿ  ಡಿನೋಟಿಪಿಕೇಶನ್ ಗೆ ಸಂಬಂಧಿಸಿದಂತೆ  ಮುಖ್ಯಮಂತ್ರಿಯ ಮಗನಿಂದ ಪೆÇೀರ್ಜರಿ ಸಹಿ ನಡೆದಿದೆ ಎಂದು ಕುಮಾರಸ್ವಾಮಿಯವರು ಆಗ ಹೇಳಿದ್ದರು. ಈ ಕುರಿತು ಸಿಬಿಐ ತನಿಖೆಗೆ ಅವರು ಒತ್ತಾಯಿಸಲಿ. ಯತ್ನಾಳ್, ಸಿ.ಟಿ.ರವಿ, ಕುಮಾರಸ್ವಾಮಿಯವರು ಇಂತಹ ಹತ್ತು ಹಲವು ಹಗರಣಗಳ ಕುರಿತು ಹೋರಾಟ ಹಮ್ಮಿಕೊಳ್ಳಲಿ ಎಂದು ತಿಳಿಸಿದರು.

ಈಗಿನ ಬಿಜೆಪಿಯವರ ಹೋರಾಟಗಳಿಗೆ ನೈಜ ಕಾರಣಗಳಿವೆಯೇ? ಅಸಹ್ಯ ರೀತಿಯಲ್ಲಿ ಹಾಸನದಲ್ಲಿ ಸಾಮೂಹಿಕ ಅತ್ಯಾಚಾರದ ಲೈಂಗಿಕ ಪ್ರಕರಣ ನಡೆದಿದೆ. ಸಂಸ್ಕøತಿ, ಮಹಿಳೆಯರನ್ನು ಮಾತೆ ಎನ್ನುವ ಬಿಜೆಪಿಯವರು ಇತ್ತ ಗಮನಹರಿಸಲಿ. ಪಶು ಪ್ರವೃತ್ತಿಯಂತೆ ಪುರುಷರ ಮೇಲೆಯೂ ಅತ್ಯಾಚಾರ ನಡೆದಿವೆ. ಬಿಜೆಪಿಯ ಹಿರಿಯ ರಾಜಕಾರಣಿಯ ವಿರುದ್ಧ ಫೆÇೀಕ್ಸೊ ಪ್ರಕರಣ ದಾಖಲಾಗಿದೆ. ಯಡಿಯೂರಪ್ಪನವರನ್ನು ಹಣಿಯಲು ಈ ಹಿಂದೆ ಬಿಜೆಪಿಯವರು ಈ ಪ್ರಕರಣವನ್ನು ಬೆಳಕಿಗೆ ತಂದಿದ್ದರು.  ತಾತನ ಸಮಾನರಾದವರೊಂದಿಗೆ ನ್ಯಾಯ ಕೇಳಲು ಬಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ಕಿರುಕುಳ ನಡೆದ ಆರೋಪ ಕೇಳಿ ಬಂದಿದೆ. ಇವೆಲ್ಲಾ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಿಜೆಪಿಯವರು ಹೋರಾಟ ಹಮ್ಮಿಕೊಳ್ಳಲಿ. 5 ವರ್ಷ ಅವರು ಹೋರಾಟ ಮಾಡುತ್ತಾ ಕಾಲ ಕಳೆಯಲಿ ಎಂದು ವ್ಯಂಗ್ಯವಾಡಿದರು.

ತುರ್ತು ಪರಿಸ್ಥಿತಿ ಕುರಿತು ಕರಾಳ ಹೋರಾಟವನ್ನು ಬಿಜೆಪಿಯವರು ಹಮ್ಮಿಕೊಂಡಿದ್ದರು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲಿಗೆ ಹೋದ ತಮ್ಮ ಪಕ್ಷದವರಿಗೆ ಪಿಂಚಣಿ ಕೊಡಿಸುವ ಕುರಿತು ಅವರ ಕಾರ್ಯಕರ್ತರಿಗೆ ಅಶ್ವಾಸನೆ ನೀಡಿದ್ದರು. ಇಲ್ಲಿಯವರೆಗೆ ಈ ಅಶ್ವಾಸನೆ ಈಡೇರಿಸುವ ನಿಟ್ಟಿನಲ್ಲಿ ಯಾವುದೇ ಪ್ರಯತ್ನವನ್ನು ಬಿಜೆಪಿಯವರು ಮಾಡುತ್ತಿಲ್ಲ. ಇವೆಲ್ಲಾ ಹಗರಣಗಳು, ಭ್ರμÁ್ಟಚಾರ, ಅತ್ಯಾಚಾರ ಪ್ರಕರಣಗಳು ಸದನದಲ್ಲಿ ಚರ್ಚೆಯಾಗಲಿ. ಇವುಗಳ ಕುರಿತು ಮಾತನಾಡದ ಬಿಜೆಪಿಯವರು ಮೂಡಾ ಹಗರಣದಲ್ಲಿ ಸಿದ್ದರಾಮಯ್ಯನವರು ರಾಜೀನಾಮೆ ಕೊಡಲಿ ಎಂದು ಕೇಳುವ ನೈತಿಕತೆ ಇದೆಯೇ? ಎಂದು ಪ್ರಶ್ನಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕಲಗೋಡು ರತ್ನಾಕರ್, ವೈ.ಹೆಚ್.ನಾಗರಾಜ್, ಎಸ್.ಟಿ.ಹಾಲಪ್ಪ, ರಮೇಶ್ ಹೆಗ್ಡೆ, ಅನಿತಾಕುಮಾರಿ, ಈಕ್ಕೇರಿ ರಮೇಶ್, ಯು.ಶಿವಾನಂದ್, ಅಡ್ಡು, ದೀನರಾಜ್ ಹೊನ್ನಾವಿಲೆ, ಹಿರಣ್ಣಯ್ಯ, ವಿಜಯಲಕ್ಷ್ಮೀ ಪಾಟೀಲ್, ಶಿವಣ್ಣ, ಹೆಚ್.ಎಂ.ಮಧು ಇನ್ನಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments