Thursday, December 5, 2024
Google search engine
Homeಇ-ಪತ್ರಿಕೆಮುಳುಗಡೆ ಸಂತ್ರಸ್ಥರ ಹೆಸರಲ್ಲಿ ಭೂ ಮಾಫಿಯಾ

ಮುಳುಗಡೆ ಸಂತ್ರಸ್ಥರ ಹೆಸರಲ್ಲಿ ಭೂ ಮಾಫಿಯಾ


ಸೋಷಿಯಲ್ ಜಸ್ಟೀಸ್ ಪಬ್ಲಿಕ್ ಪ್ರಾಬ್ಲಂ ಸಂಘಟನೆಯ ಅಧ್ಯಕ್ಷ ರಿಯಾಜ್ ಅಹಮ್ಮದ್ ಆರೋಪ

ಶಿವಮೊಗ್ಗ: ಚಕ್ರಾ ಸಾವೇಹಕ್ಲು ಮುಳುಗಡೆಯ ನಿಜವಾದ ಸಂತ್ರಸ್ತರಿಗೆ ಭೂಮಿ ನೀಡುವ ವಿಚಾರದಲ್ಲಿ ಅನ್ಯಾಯವಾಗುತ್ತಿದೆ. ನಿಜವಾದ ಸಂತ್ರಸ್ತರಿಗೆ  ನ್ಯಾಯ ಸಿಗುತ್ತಿಲ್ಲ. ಮುಳುಗಡೆ ಸಂತ್ರಸ್ತರ ಹೆಸರಲ್ಲಿ ಭೂ ಮಾಫಿಯಾ ನಡೆಯುತ್ತಿದೆ ಎಂದು ಸೋಷಿಯಲ್ ಜಸ್ಟೀಸ್ ಪಬ್ಲಿಕ್ ಪ್ರಾಬ್ಲಂ ಸಂಘಟನೆಯ ಅಧ್ಯಕ್ಷ ರಿಯಾಜ್ ಅಹಮ್ಮದ್ ದೂರಿದ್ದಾರೆ.


ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ತಾಲೂಕು ಕಸಬಾ ೧ನೇ ಹೋಬಳಿ ಅಗಸವಳ್ಳಿ ಗ್ರಾಮದ ಸ.ನಂ. ೧೬೭ರಲ್ಲಿ ಚಕ್ರಾ, ಸಾವೇಹಕ್ಲು ಮುಳುಗಡೆ ಸಂತ್ರಸ್ತರಿಗಾಗಿ ೧೧೪೮ ಎಕರೆ ಜಮೀನನ್ನು ಮೀಸಲಾಗಿಡಲಾಗಿದೆ. ಆದರೆ, ಇಲ್ಲಿ ನಿಜವಾದ ಸಂತ್ರಸ್ತರಿಗೆ ಭೂಮಿ ಸಿಗುತ್ತಿಲ್ಲ ಎಂದು ಆರೋಪಿಸಿದರು.


ಸಾವೆಹಕ್ಲು ಮುಳುಗಡೆ ಸಂತ್ರಸ್ತರು ಸುಮಾರು ೨೦೦ಕ್ಕೂ ಹೆಚ್ಚು ಜನರಿದ್ದಾರೆ. ಅವರ ಸ್ವಾಧೀನಕ್ಕೆ ಜಮೀನುಗಳಿದ್ದರೂ ಕೂಡ ಇದುವರೆಗೂ ಪೋಡಿಯೇ ಆಗಿಲ್ಲ. ಸಾಕಷ್ಟು ಬಾರಿ ಅರ್ಜಿಗಳನ್ನು ಕೊಟ್ಟರೂ ಕೂಡ ತಮ್ಮ ಹೆಸರಿಗೆ ಜಮೀನು ಇಲ್ಲ. ಸುಮಾರು ೫೦ ವರ್ಷಗಳಿಂದ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಇವರಿಗೆ ತಕ್ಷಣವೇ ಜಮೀನು ಮಂಜೂರು ಮಾಡಿ ಪೋಡಿ ಮಾಡಿ ಪಹಣಿ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದರು.


ಸಂತ್ರಸ್ತರಾದ ಗಣೇಶ್, ಲಿಂಗಪ್ಪ ಗೌಡ್ರು, ಶ್ರೀನಿವಾಸ್ ಚಕ್ಕರ್ ಅವರು ಮಾತನಾಡಿ, ಹಲವು ವರ್ಷಗಳಿಂದ ನಾವು ಹೋರಾಟ ಮಾಡುತ್ತಾ ಬಂದಿದ್ದೇವೆ. ಆದರೆ, ಇತ್ತೀಚಿನದ ದಿನಗಳಲ್ಲಿ ಕೆಲವರು ನಾವೇ ಮುಳುಗಡೆ ಸಂತ್ರಸ್ತರು ಎಂದು ಹೇಳಿಕೊಂಡು ಜಮೀನನ್ನು ಪಡೆದುಕೊಂಡಿದ್ದಾರೆ. ಅವರ ಹೆಸರಿಗೆ ಪಹಣಿ ಕೂಡ ಆಗಿದೆ. ಇದು ಹೇಗೆ ಸಾಧ್ಯ? ಅಲ್ಲದೇ ಅರ್ಧ ಎಕರೆ ಮುಳುಗಡೆಯಾದವರಿಗೂ ಕೂಡ ೪ ಎಕರೆ ಜಮೀನು ಮಂಜೂರು ಮಾಡಿದ್ದಾರೆ. ೪ ಎಕರೆ ಮುಳುಗಡೆಯಾದವರಿಗೆ ಕೇವಲ ಒಂದು ಎಕರೆ ನೀಡಿದ್ದಾರೆ. ಹೀಗೆ ಇದು ಕೂಡ ಅವೈಜ್ಞಾನಿಕವಾಗಿದೆ. ಭ್ರಷ್ಟಾಚಾರ ನಡೆದಿದೆ. ಕಂದಾಯಾಧಿಕಾರಿಗಳ ಜೊತೆಗೆ ಸೇರಿಕೊಂಡು ಬಹುದೊಡ್ಡ ಹಗರಣವನ್ನು ಇವರು ಮಾಡುತ್ತಿದ್ದಾರೆ. ಇದು ಮುಡಾ ಹಗರಣಕ್ಕಿಂತ ಬಹುದೊಡ್ಡ ಹಗರಣವಾಗಿದೆ ಮತ್ತು ಭೂಮಾಫಿಯಾಗಿದೆ. ಇದು ಸಂಪೂರ್ಣ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸೈಯದ್ ಸೈಫುಲ್ಲಾ, ಸಂತೋಷ್, ಶ್ರೀಧರ್ ಮುಂತಾದವರಿದ್ದರು.

ರಿಯಾಜ್ ಅಹಮ್ಮದ್,  ಸಂಘಟನೆಯ ಅಧ್ಯಕ್ಷ :

ಸಂತ್ರಸ್ತರ ಪುನರ್ವಸತಿ ಹೋರಾಟ ಸಮಿತಿ ಹೆಸರಲ್ಲಿ ಕೆಲವರು ಸುಳ್ಳು ದಾಖಲೆಗಳನ್ನು ನೀಡಿ ಅಥವಾ ದಾಖಲೆಗಳನ್ನು ಸೃಷ್ಠಿಸಿ ಭೂ ಕಬಳಿಕೆ ಮಾಡಿಕೊಂಡು ಮಾರಾಟ ಮಾಡುವ ಭೂದಂಧೆಯಲ್ಲಿ ತೊಡಗಿದ್ದಾರೆ. ಅನೇಕರು ನಕಲಿ ಸಹಿಯ ಮೂಲಕ ಅನಧಿಕೃತವಾಗಿ ಜಮೀನನ್ನು ಮಂಜೂರು ಮಾಡಿಸಿಕೊಂಡಿರುತ್ತಾರೆ.  ಉಮೇಶ್ ಹಾಗೂ  ಸುಬ್ರಮಣ್ಯ ಎನ್ನುವವರು ತಮ್ಮ ಕುಟುಂಬದ ಸದಸ್ಯರಿಗೆ ಸಂತ್ರಸ್ತರ ಹೆಸರು ಹೇಳಿಕೊಂಡು ಜಮೀನು ಮಂಜೂರು ಮಾಡಿಸಿಕೊಂಡಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments