Saturday, December 14, 2024
Google search engine
Homeಇ-ಪತ್ರಿಕೆಶಿವಮೊಗ್ಗದಲ್ಲಿ ಕಿದ್ವಾಯಿ ಮಾದರಿಯ ಕ್ಯಾನ್ಸರ್ ಆಸ್ಪತ್ರೆ ವಿಳಂಬ: ಕೆ.ಬಿ.ಪ್ರಸನ್ನ ಕುಮಾರ್

ಶಿವಮೊಗ್ಗದಲ್ಲಿ ಕಿದ್ವಾಯಿ ಮಾದರಿಯ ಕ್ಯಾನ್ಸರ್ ಆಸ್ಪತ್ರೆ ವಿಳಂಬ: ಕೆ.ಬಿ.ಪ್ರಸನ್ನ ಕುಮಾರ್

ಶಿವಮೊಗ್ಗ : ಕಿದ್ವಾಯಿ ಮಾದರಿಯ ಆಸ್ಪತ್ರೆ ನಿರ್ಮಾಣದಲ್ಲಿ ತಡವಾಗುತ್ತಿರುವುದು, ಆಶ್ರಯ ಮನೆಗಳ ನಿರ್ಮಾಣ ನಿಧಾನಗತಿಯಲ್ಲಿ ಸಾಗುತ್ತಿರುವುದು, ಅವ್ಯವಹಾರಗಳ ಅವೈಜ್ಞಾನಿಕ ಸ್ಮಾರ್ಟ್‍ಸಿಟಿ ಕಾಮಗಾರಿಗಳ ಕುರಿತು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಮತ್ತು ಕೋರ್ ಕಮಿಟಿ ಸದಸ್ಯ ಕೆ.ಬಿ.ಪ್ರಸನ್ನ ಕುಮಾರ್ ಆರೋಪಿಸಿದರು.

ಮಂಗಳವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ನವೆಂಬರ್‍ನಲ್ಲಿ ಶಿವಮೊಗ್ಗ ನಗರದಲ್ಲಿ ಕಿದ್ವಾಯಿ ಆಸ್ಪತ್ರೆಯ ಮಾದರಿಯಲ್ಲಿ ಕ್ಯಾನ್ಸರ್ ಆಸ್ಪತ್ರೆಯನ್ನು ಕಟ್ಟುವುದಾಗಿ ಸಚಿವ ಮಧು ಬಂಗಾರಪ್ಪ ಹಾಗೂ ಶರಣ್‍ಪ್ರಕಾಶ್ ಪಾಟೀಲ್ ಗುದ್ದಲಿ ಪೂಜೆ ಮಾಡಿ, 8-10 ತಿಂಗಳಲ್ಲಿ ಕಟ್ಟಡ ನಿರ್ಮಾಣವಾಗಲಿದೆ ಎಂದು ಭರವಸೆ ನೀಡಿದ್ದರು. ಆಗ ನಿಜಕ್ಕೂ ನಾವೆಲ್ಲ ಖುಷಿ ಪಡ್ಡಿದ್ದೆವು. ಆದರೆ ಕಟ್ಟಡ ಇನ್ನು ಮೇಲೇಳುತ್ತಿರುವುದು ತುಂಬಾ ತಡವಾಗುತ್ತಿದೆ ಎಂದರು.

ನಗರದಲ್ಲಿ 3-4 ಖಾಸಗಿ ಕ್ಯಾನ್ಸರ್ ಆಸ್ಪತ್ರೆಗಳಿವೆ. ಪೆಟ್ ಸ್ಕ್ಯಾನ್ ಮಾಡಲಿಸಲು ಸುಮಾರು 30 ಸವಿರ ಹಣ ಖರ್ಚಾಗುತ್ತದೆ. ಆ ಹಣವನ್ನು ಹೊಂದಿಸಿಕೊಂಡು ಸ್ಕ್ಯಾನ್ ಮಾಡಿಸಿ ಡಾಕ್ಟರ್ ಬಳಿ ರಿಪೋರ್ಟ್ ಪಡೆಯುವಷ್ಟರಲ್ಲಿ ಕ್ಯಾನ್ಸರ್ ನಾಲ್ಕನೇ ಹಂತಕ್ಕೆ ತಲುಪಿರುತ್ತದೆ. ಕ್ಯಾನ್ಸರ್ ಪತ್ತೆಗೆ ಅನುಕೂಲವಾಗಿರುವ ಪೆಟ್ ಸ್ಕ್ಯಾನ್ ಮಾಡಿಸುವುದನ್ನಾದರೂ ತಕ್ಷಣ ಪ್ರಾರಂಭಿಸಬೇಕು. ಇದರಿಂದ ಕ್ಯಾನ್ಸರ್ ಪತ್ತೆಹಚ್ಚಲು ಅನುಕೂಲವಾಗಲಿದೆ. ಈ ಬಗ್ಗೆ ಸಿಮ್ಸ್ ನಿರ್ದೇಶಕರಿಗೆ ಕೇಳಿದರೆ ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ ಎನ್ನುತ್ತಾರೆ. ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವರು ಭರವಸೆ ಕೊಟ್ಟಂತೆ ಆದಷ್ಟು ಬೇಗ ಇತ್ತ ಗಮನ ಹರಿಸಿ, ಕನಸನ್ನು ನನಸು ಮಾಡಲಿ ಎಂದು ಒತ್ತಾಯಿಸಿದರು.

ಜನರಿಗೆ ಸೂರು ಮಾಡಿಕೊಡುವ ದೃಷ್ಟಿಯಿಂದ ಗೋಪಿಶೆಟ್ಟಿಕೊಪ್ಪ ಮತ್ತು ಗೋವಿಂದಾಪುರದಲ್ಲಿ ಆಶ್ರಯ ಮನೆಗಳ ನಿರ್ಮಾಣ ಆರಂಭಿಸಿ ವರ್ಷಗಳೇ ಕಳೆದರೂ ಇನ್ನು ಮನೆ ಪೂರ್ಣವಾಗದೇ ಬಹಳ ನಿಧಾನಗತಿಯಲ್ಲಿ ಸಾಗುತ್ತಿದೆ. 2021 ರ ಜುಲೈನಲ್ಲಿ ನಾಗಾರ್ಜುನ ಕನ್‍ಸ್ಟ್ರಕ್ಷನ್ ಸಂಸ್ಥೆಗೆ 236 ಕೋಟಿ ಹಣವನ್ನು ಅಂದಿನ ಸರ್ಕಾರ ಅಗ್ರಿಮೆಂಟ್ ಮಾಡಿಕೊಟ್ಟಿತ್ತು. ಇದರಲ್ಲಿ 128 ಕೋಟಿ ಹಣ ಪೇಮೆಂಟ್ ಆಗಿದೆ. ಹಣ ಕೊಟ್ಟಿರೋ ಜನರಿಗೆ ಈಗ ಬ್ಯಾಂಕ್‍ನಲ್ಲಿ ಕಂತು ಶುರುವಾಗಿದೆ. ಆದಷ್ಟು ಬೇಗ ಇದನ್ನು ಪೂರ್ಣಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಸ್ಮಾರ್ಟ್ ಸಿಟಿಯ ಅನುದಾನದಲ್ಲಿ ಹೆಚ್ಚುಕಮ್ಮಿ ಶೇ.30 ರಷ್ಟು ಹಣವನ್ನು ಯುಜಿ ಕೇಬಲ್‍ಗೆ ವ್ಯಯ ಮಾಡಲಾಗಿದೆ. ಆದರೆ ನಗರದಲ್ಲಿ ಸುಮಾರು 8-10 ವಾರ್ಡ್‍ಗಳಲ್ಲಿ ಯುಜಿ ಕೇಬಲ್ ಬಗ್ಗೆಯ ಕಂಪ್ಲೇಟ್ ಬಂದ ಮೇಲೆ ಮೆಸ್ಕಾಂ ಮುಖ್ಯ ಅಭಿಯಂಯತರ ನೇತೃತ್ವದಲ್ಲಿ ತನಿಖಾ ಸಮಿತಿ ರಚಿಸಲಾಗಿದೆ. ಆದರೆ ತನಿಖಾ ಸಮಿತಿಯು ಇನ್ನೂ ಗುತ್ತಿಗೆದಾರರು ಇಲಾಖೆಗೆ ಹಸ್ತಾಂತರ ಮಾಡಿಲ್ಲ ಎನ್ನುತ್ತಿದ್ದಾರೆ. ಯುಜಿ ಕೇಬಲ್ ಹಾಳಾಗಿ ಮತ್ತೆ ಬೇರೆ ಕಂಬಗಳ ಮೂಲಕ ವಿದ್ಯುತ್ ಸಂಪರ್ಕ ನೀಡಲಾಗುತ್ತಿದೆ. ಇದರ ಬಗ್ಗೆ ಸರಿಯಾದ ರೀತಿಯಲ್ಲಿ ತನಿಖೆ ಆಗಬೇಕು. ತನಿಖೆ ಮತ್ತು ತಪಾಸಣೆಗೆ ಹೋಗುವ ಮುಂಚೆ ಅಧಿಕಾರಿಗಳು ಅಲ್ಲಿಯ ನಿವಾಸಿಗಳು, ಸ್ಥಳೀಯ ಸಂಘ ಸಂಸ್ಥೆಗಳ ಗಮನಕ್ಕೆ ತಂದು ಈ ಕಾಮಗಾರಿಯ ಬಗ್ಗೆ ಕೂಲಂಕುಶವಾಗಿ ತನಿಖೆಯಾಗಬೇಕು. ನಗರಕ್ಕೆ ಸಾಕಾರವಾಗುವ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು ಎಂದ ಅವರು, ದೇವರಾಜ್ ಅರಸು ಭವನವನ್ನು ಆದಷ್ಟು ಬೇಗ ಲೋಕಾರ್ಪಣೆ ಮಾಡಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಜೆಡಿಎಸ್‍ನ ಪ್ರಮುಖರಾದ ದೀಪಕ್ ಸಿಂಗ್, ರಾಮಕೃಷ್ಣ, ಸಿದ್ದಪ್ಪ, ಸಂಗಯ್ಯ, ನಾಗೇಶ್, ಮಂಜುನಾಥ್, ಕಾಂತ್‍ರಾಜ್, ನರಸಿಂಹ ಗಂಧದಮನೆ, ನಿಖಿಲ್, ದಯಾನಂದ್, ರಘು, ಗೀತಾ ಸತೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments