Tuesday, November 5, 2024
Google search engine
Homeಇ-ಪತ್ರಿಕೆವ್ಯಕ್ತಿತ್ವ ವಿಕಾಸಕ್ಕೆ ಕನ್ನಡ ಭಾಷೆ, ಸಾಹಿತ್ಯ ಮಹತ್ವ ಪಡೆದಿದೆ: ಎ.ಕೆ. ನಾಗೇಂದ್ರಪ್ಪ

ವ್ಯಕ್ತಿತ್ವ ವಿಕಾಸಕ್ಕೆ ಕನ್ನಡ ಭಾಷೆ, ಸಾಹಿತ್ಯ ಮಹತ್ವ ಪಡೆದಿದೆ: ಎ.ಕೆ. ನಾಗೇಂದ್ರಪ್ಪ

ಶಿವಮೊಗ್ಗ :- ವ್ಯಕ್ತಿಯ ವ್ಯಕ್ತಿತ್ವ ವಿಕಾಸಗೊಳ್ಳಲು ಸೃಜನಾತ್ಮಕ ಆಲೋಚನೆಗೆ ಕನ್ನಡ ಭಾಷೆ, ಸಾಹಿತ್ಯ ಸಹಕಾರಿಯಾಗಲಿದೆ. ನಮ್ಮ ಮಾತೃಭಾಷೆ, ಪರಿಸರದ ಭಾಷೆಯನ್ನು ಚನ್ನಾಗಿ ಮಾತನಾಡಲು, ಓದಲು, ಬರೆಯಲು ಆಸಕ್ತಿ ತೋರಬೇಕು. ಆ ಮೂಲಕ ಎಲ್ಲರೂ ನಾಡಿಗೆ ಕೊಡುಗೆಯಾಗಿರಿ ಎಂದು ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಕರೆನೀಡಿದರು.

ಅವರು ಜೂನ್ 22 ರಂದು ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ಗೋಣಿಬೀಡು ಶ್ರೀ ವೀರಭದ್ರೇಶ್ವರ ಪ್ರೌಢಶಾಲಾ ಆವರಣದಲ್ಲಿ  ಶಾಲಾ ಕಾಲೇಜು ಅಂಗಳದಲ್ಲಿ ವಿದ್ಯಾರ್ಥಿಗಳಿಗೆ ಕಥೆ, ಕವನ, ಪ್ರಬಂಧ ರಚನಾ ಕಮ್ಮಟವನ್ನು ದೀಪಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾದ ಭದ್ರಾವತಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ. ಕೆ. ನಾಗೇಂದ್ರಪ್ಪ ವಿದ್ಯಾರ್ಥಿಗಳಿಗೆ ಈ ಕಮ್ಮಟ ಉಪಯುಕ್ತ. ಕನ್ನಡ ಪಠ್ಯವನ್ನು ನೋಡುವ ದೃಷ್ಟಿಕೋನ ಬೇರೆಯಾಗುತ್ತೆ. ಸಾಹಿತ್ಯದ ಅನೇಕ ಪ್ರಕಾರಗಳು ನಮ್ಮ ಪಠ್ಯದಲ್ಲಿವೆ. ಆ ವಿಚಾರವಾಗಿ ಮಾಹಿತಿ ಕೊರತೆಯಿತ್ತು. ನಿಮ್ಮ ಆಸಕ್ತಿಯನ್ನು ಬೌದ್ಧಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ. ಸಾಂಸ್ಕೃತಿಕ ವಲಯದ ಮನಸ್ಥಿತಿ ಸಿದ್ದಪಡಿಸಲು ಸಹಕಾರಿಯಾಗಲಿದೆ. ಫಲಿತಾಂಶದ ಸ್ಪರ್ಧೆ ಹಿನ್ನೆಲೆಯಲ್ಲಿ ಪಠ್ಯ ಪುಸ್ತಕ ಜ್ಞಾನ ವನ್ನು ಹೆಚ್ಚಿಸುವ ಕೆಲಸ ಆಗುತ್ತಿದೆ ಎಂದು ವಿವರಿಸಿದರು.

ತಾಲ್ಲೂಕು ಕಸಾಸಾಂ ವೇದಿಕೆ ಅಧ್ಯಕ್ಷರಾದ ಶ್ರೀಮತಿ ಸುಧಾಮಣಿ ವೆಂಕಟೇಶ್ ಸಾಹಿತ್ಯದತ್ತ ಮಕ್ಕಳ ಆಸಕ್ತಿ, ಗಮನ ಸೆಳೆಯುವ ಪ್ರಯತ್ನ ಸಫಲವಾಗುತ್ತಿದೆ ಎಂದರು.

ಗೋಣಿಬೀಡು ನಿವಾಸಿಗಳಾದ ಲೋಕೇಶ್ ಗೌಡ ಆರ್. ಜಿ. ಸಂಪನ್ಮೂಲ ವ್ಯಕ್ತಿಗಳಾದ ಸಾಹಿತಿಗಳು, ಅಂಕಣಕಾರರಾದ ಬಿ. ಚಂದ್ರೇಗೌಡರು ಪ್ರಬಂಧ ಸಾಹಿತ್ಯ ಅಂದರೆ ಏನು. ಅದನ್ನು ಬರೆಯಲು ಇರಬೇಕಾದ ಸಿದ್ದತೆಗಳೇನು. ಅವುಗಳ ಓದು, ಅರಿವು, ಬರೆಯುವ ಕ್ರಮಗಳನ್ನು ಕುರಿತು ಮಾಹಿತಿ ನೀಡಿದರು.

 ಸಾಹಿತಿಗಳು, ಕನ್ನಡ ಪ್ರಾಧ್ಯಾಪಕರಾದ ಡಾ. ಎಸ್. ಎಂ. ಮುತ್ತಯ್ಯ ಅವರು ಕಾವ್ಯ, ಪದ್ಯ, ಕವನ, ಹನಿಗವನ ಇವುಗಳ ಕುರಿತು ಮಾಹಿತಿ ನೀಡುತ್ತಲೆ ಹತ್ತು ಸಾಲಿನಲ್ಲಿ ಎಷ್ಟೊಂದು ಮಾಹಿತಿ ನೀಡಲು ಕವನಕ್ಕಿರುವ ಶಕ್ತಿಯನ್ನು ವಿವರಿಸಿದರು.

ರಂಗ ನಿರ್ದೇಶಕರು, ಉಪನ್ಯಾಸಕರಾದ ಡಾ. ಜಿ. ಆರ್. ಲವ ಅವರು ಪುಣ್ಯ ಕೋಟಿ ಕಥೆಯನ್ನು ಉದಾಹರಿಸಿ ಅದೇ ವಿಚಾರವಾಗಿ ಕಥೆ ಹೇಗೆ ಕಟ್ಟಬಹುದು, ಕವನ ಹೇಗೆ ಬರೆಯಬಹುದು ಎಂಬುದನ್ನು ವಿವರಿಸುತ್ತಲೇ ಕಥೆ ಹೇಳುವ, ಬರೆಯುವ ಕ್ರಮಗಳನ್ನು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯರಾದ  ಹಾಲೇಶ್ ನಾಯ್ಕ ಪ್ರತಿಭೆ ಪ್ರಯತ್ನದಿಂದ ಬರುತ್ತದೆ. ಪ್ರತಿಭೆ ಹುಟ್ಟಿನಿಂದ ಬರುತ್ತದೆ ಎನ್ನುವ ಕಾವ್ಯ ಮೀಮಾಂಸೆ ಮಾತು ಸರಿಯಲ್ಲ. ಸಾಹಿತ್ಯಕ್ಕೆ ಹೆಣ್ಣು, ಗಂಡು ಎಂಬ ಬೇದವಿಲ್ಲ. ಸಾಹಿತ್ಯಕ್ಕೆ ಎಲ್ಲರಿಗೂ ಮುಕ್ತ ಅವಕಾಶವಿದೆ. ಹಿಂದಿನಂತೆ ಅಡಚಣೆ ಉಂಟುಮಾಡುವವರು ಕಡಿಮೆ ಆಗಿದ್ದಾರೆ ಎಂದು ಹೇಳುತ್ತಲೆ ಸಾಹಿತ್ಯ ರಚನಾ ಕಮ್ಮಟವನ್ನು ಪ್ರಶಂಸಿದರು. ಭದ್ರಾವತಿ ಸರ್. ಎಂ. ವಿ. ಸರ್ಕಾರಿ ವಿಜ್ಞಾನ ಕಾಲೇಜು ಉಪನ್ಯಾಸಕರಾದ ಡಾ. ಅರಸಯ್ಯ ಉಪಸ್ಥಿತರಿದ್ದರು.

ಕು. ನಾಗಶ್ರೀ ಪ್ರಾರ್ಥನೆ ಹಾಡಿದರು. ಕು. ಸಿಂಧೂ ಸ್ವಾಗತಿಸಿದರು.

RELATED ARTICLES
- Advertisment -
Google search engine

Most Popular

Recent Comments