Thursday, December 5, 2024
Google search engine
Homeಇ-ಪತ್ರಿಕೆಸಚಿವ ಮಧು ಬಂಗಾರಪ್ಪರಿಂದ ಜೂ.28 ರಂದು ‘ಜನ ಸ್ಪಂದನ’ ಕಾರ್ಯಕ್ರಮ

ಸಚಿವ ಮಧು ಬಂಗಾರಪ್ಪರಿಂದ ಜೂ.28 ರಂದು ‘ಜನ ಸ್ಪಂದನ’ ಕಾರ್ಯಕ್ರಮ

ಶಿವಮೊಗ್ಗ: ಜನರ ವಿವಿಧ ರೀತಿಯ ಅಹವಾಲುಗಳನ್ನು ಜಿಲ್ಲಾ ಮಟ್ಟದಲ್ಲಿಯೇ ಆಲಿಸಿ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ಇವರ ನೇತೃತ್ವದಲ್ಲಿ ಜೂ.28 ರ ಬೆಳಿಗ್ಗೆ 9.30 ರಿಂದ ನಗರದ ಕುವೆಂಪು ರಂಗಮಂದಿರದಲ್ಲಿ ‘ಜನ ಸ್ಪಂದನ’ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿರುವುದರಿಂದ ಜಿಲ್ಲೆಯ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿರುತ್ತದೆ. ವೈಯಕ್ತಿಕ ಅಹವಾಲು ಸಲ್ಲಿಸುವವರು ತಮ್ಮ ಅಹವಾಲನ್ನು ತಾವೊಬ್ಬರೇ ಸಲ್ಲಿಸಬಹುದು.

ಸಾರ್ವಜನಿಕವಾಗಿ ಅಹವಾಲು ಸಲ್ಲಿಸುವವರು ಗರಿಷ್ಟ ಇಬ್ಬರಿಗೆ ಅವಕಾಶ ನೀಡಲಾಗುವುದು ಹಾಗೂ ಅರ್ಜಿ ನೋಂದಾಯಿಸಿದ ನಂತರ ಟೋಕನ್‍ಗಳನ್ನು ಪಡೆಯಬೇಕು. ತಮ್ಮ ಅಹವಾಲು ಸಲ್ಲಿಕೆಯಾದ ನಂತರ ಉಳಿದವರಿಗೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments