Thursday, December 5, 2024
Google search engine
Homeಅಂಕಣಗಳುಲೇಖನಗಳುಪಾಲಿಕೆ ಬಜೆಟ್ ಪೂರ್ವಭಾವಿ ಸಭೆ ಗ್ರಂಥಾಲಯ ಸ್ಥಾಪನೆ-ಚರಂಡಿ ಒತ್ತುವರಿ ತೆರವಿಗೆ ಒತ್ತಾಯ

ಪಾಲಿಕೆ ಬಜೆಟ್ ಪೂರ್ವಭಾವಿ ಸಭೆ ಗ್ರಂಥಾಲಯ ಸ್ಥಾಪನೆ-ಚರಂಡಿ ಒತ್ತುವರಿ ತೆರವಿಗೆ ಒತ್ತಾಯ

ಶಿವಮೊಗ್ಗ : ಗ್ರಂಥಾಲಯ, ಚರಂಡಿ ಒತ್ತುವರಿ, ಕುಡಿಯುವ ನೀರಿನ ಸೋರಿಕೆ ಮತ್ತು ಪರಿಸರ ಸ್ವಚ್ಛತೆಗೆ ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪಾಲಿಕೆ ತನ್ನ ಬಜೆಟ್‌ನಲ್ಲಿ ಘೋಷಿಸಬೇಕೆಂದು ಅನೇಕ ನಾಗರೀಕರು ಹೇಳಿದರು.
ಇಂದು ಪಾಲಿಕೆ ಸಭಾಂಗಣದಲ್ಲಿ ಮೇಯರ್ ಏಳುಮಲೈ ಅಧ್ಯಕ್ಷತೆಯಲ್ಲಿ ನಡೆದ ಬಜೆಟ್ ಪೂರ್ವಭಾವಿ ಸಭೆ ಯಲ್ಲಿ ವಿವಿಧ ಬಡಾವಣೆಯ ಹಾಗೂ ಸಂಘ ಸಂಸ್ಥೆಗಳ ಅನೇಕ ಮುಖಂಡರು ಈ ಒತ್ತಾಯ ಮಾಡಿದರು.
ಎಲ್‌ಬಿಎಸ್ ನಗರದ ಅನಂತ ಸ್ವಾಮಿ ಮಾತನಾಡಿ, ನಮ್ಮ ಬಡಾವಣೆ ಯಲ್ಲಿ ಗ್ರಂಥಾಲಯ ನಿರ್ಮಾಣಕ್ಕಾಗಿ ಜಾಗ ಮೀಸಲಿರಿಸಲಾಗಿದೆ. ಆದರೆ ಇದುವರೆಗೂ ಗ್ರಂಥಾಲಯ ನಿರ್ಮಾಣ ಕಾರ್ಯವಾಗಿಲ್ಲ. ಈ ಬಾರಿಯ ಬಜೆಟ್‌ನಲ್ಲಾದರೂ ಅದಕ್ಕೆ ಹಣ ಒದಗಿಸಿ. ಆದೇ ರೀತಿ ನಗರದ ವಿವಿಧ ಬಡಾವಣೆಗಳಲ್ಲಿ ಗ್ರಂಥಾಲಯ ಸ್ಥಾಪಿಸುವ ಮೂಲಕ ನಾಗರೀಕರಲ್ಲಿ ಓದುವ ಹವ್ಯಾಸವನ್ನು ಹೆಚ್ಚಿಸಿ ಎಂದರು.
ಹಲವು ಬಡಾವಣೆಗಳಲ್ಲಿ ಚರಂಡಿ ಗಳನ್ನೇ ಒತ್ತುವರಿ ಮಾಡಲಾಗಿದೆ. ಈ ಜಾಗವನ್ನು ಬಳಸಿಕೊಂಡು ಕಾರ್‌ಶೆಡ್ ಗಳನ್ನು ನಿರ್ಮಿಸಲಾಗಿದೆ. ಇದನ್ನು ತೆರವುಗೊಳಿಸಬೇಕು. ಹಲವು ಮನೆ ಗಳಲ್ಲಿ ನೀರಿನ ಸಂಪ್ ತುಂಬಿ ಹರಿಯು ತ್ತಿದ್ದು, ಇದರಿಂದ ನೀರು ಪೋಲಾಗು ತ್ತಿದೆ. ಇದನ್ನು ಸರಿಪಡಿಸಬೇಕು. ಇಲ್ಲದೇ ಹೋದರೆ ಇದಕ್ಕೆ ಸಂಬಂಧಿಸಿದಂತೆ ವಿಶೇಷ ಕಾನೂನನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು.
ಗಾಂಧಿನಗರ ನಿವಾಸಿಗಳ ಸಂಘದ ಕೊಟ್ರಯ್ಯ ಮಾತನಾಡಿ, ಗ್ರಂಥಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪಾಲಿಕೆ ತನ್ನ ಬಜೆಟ್‌ನಲ್ಲಿ ಯೋಜನೆ ರೂಪಿಸ ಬೇಕು ಎಂದ ಅವರು, ವಿವಿಧ ಬಡಾ ವಣೆಗಳಲ್ಲಿ ಕಟ್ಟಡವನ್ನು ನಿರ್ಮಾಣ ಮಾಡಲು ಬರುವಂತಹ ಕಾರ್ಮಿಕರಿಗೆ ತಾತ್ಕಾಲಿಕ ಶೌಚಾಲಯ ವ್ಯವಸ್ಥೆ ಮಾಡಿ ಕೊಡಬೇಕು. ಇಲ್ಲದೇ ಹೋದರೆ ಸ್ವಚ್ಛ ಭಾರತದ ಪರಿಕಲ್ಪನೆ ಕೇವಲ ಘೋಷಣೆ ಯಾಗಿಯೇ ಉಳಿಯುತ್ತದೆ ಎಂದರು.
ಮಹಾತ್ಮಗಾಂಧಿ ಉದ್ಯಾನವನದಲ್ಲಿ ಸಾರ್ವಜನಿಕರಿಗೆ ಶೌಚಾಲಯವನ್ನು ನಿರ್ಮಿಸಬೇಕು. ಪ್ರತಿ ದಿನವೂ ಸಹ ನೂರಾರು ಸಂಖ್ಯೆಯ ನಾಗರೀಕರು ಈ ಉದ್ಯಾನವನಕ್ಕೆ ಬರುತ್ತಾರೆ. ಭಾನು ವಾರ ಸಾಕಷ್ಟು ಸಂಖ್ಯೆಯಲ್ಲಿ ನಾಗರೀ ಕರು ತಮ್ಮ ಕುಟುಂಬದ ಸದಸ್ಯ ರೊಂದಿಗೆ ಆಗಮಿಸುತ್ತಾರೆ. ಆದರೆ ಶೌಚಾಲಯದ ವ್ಯವಸ್ಥೆ ಇಲ್ಲದೇ ಇರುವುದರಿಂದ ಇವರುಗಳಿಗೆ ತೊಂದರೆಯಾಗುತ್ತಿದೆ ಎಂದರು.
ಪುರುಷೋತ್ತಮ್ ಮಾತನಾಡಿ, ಆಶ್ರಯ ಸಮಿತಿಯ ಖಾತೆ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆಗೆ ಆದೇಶ ನೀಡಲಾಗಿದ್ದು, ಅದು ಎಲ್ಲಿಯವರೆಗೆ ಬಂದಿದೆ ಎಂಬುದನ್ನು ಬಜೆಟ್‌ನಲ್ಲಾದರೂ ತಿಳಿಸಬೇಕೆಂದರು.
ಸಭೆಯಲ್ಲಿ ಉಪಮೇಯರ್ ರೂಪಾಲಕ್ಷ್ಮಣ್ ಸೇರಿದಂತೆ ಪಾಲಿಕೆ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments