ಶಿವಮೊಗ್ಗ, : ಇಂದಿನ ಯುವ ಜನತೆ ಸ್ವಾಮಿ ವಿವೇಕಾನಂದರ ಜೀವ ನಾದರ್ಶಗಳನ್ನು ಮೈಗೂಡಿಸಿ ಕೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ ಅವರು ಕರೆ ನೀಡಿದರು.
ಅವರು ಇಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀ ಕರಣ ಮತ್ತು ಕ್ರೀಡಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ ಇವರುಗಳ ಸಂಯು ಕ್ತಾಶ್ರಯದಲ್ಲಿ ಸ್ವಾಮಿ ವಿವೇಕಾ ನಂದರ ಚಿಕಾಗೋ ಭಾಷಣದ ೧೨೫ನೇ ವರ್ಷಾಚರಣೆ ಅಂಗವಾಗಿ ಬಾಪೂಜಿ ನಗರದ ಪ್ರಥಮದರ್ಜೆ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿ ಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರು ಅಮೇರಿ ಕಾದ ಚಿಕಾಗೋದಲ್ಲಿ ಭಾಷಣ ಮಾಡುವವರೆಗೆ ಭಾರತದ ಬಗ್ಗೆ ಯಾರಿಗೂ ಅಷ್ಟಾಗಿ ತಿಳಿದಿರಲಿಲ್ಲ. ಆದರೆ ವಿವೇಕಾನಂದರ ಭಾಷಣದ ನಂತರ ಇಡೀ ವಿಶ್ವವೇ ನಮ್ಮತ್ತ ನೋಡುವಂತಾಗಿದೆ ಎಂದರು.
ವಿವೇಕರ ಭಾಷಣದ ನಂತರ ಭಾರತಕ್ಕೆ ಹೊಸ ವ್ಯಾಖ್ಯಾನ ಮೂಡಿತು. ಅದೊಂದು ಐತಿಹಾಸಿಕ, ವಿಜಯೋತ್ಸವದ ದಿನ ಎಂದು ಬಣ್ಣಿಸಿದ ಅವರು, ವಿವೇಕಾನಂದರು ತಮ್ಮ ದೂರದೃಷ್ಠಿಯ ಆಲೋಚನೆ ಗಳು ಹಾಗೂ ಚಿಂತನೆಗಳಿಂದ ಸರ್ವಕಾಲಕ್ಕೂ ಪ್ರಸ್ತುತವೆನಿಸುತ್ತಾರೆ ಎಂದರು.
ಇಲ್ಲಿನ ಧರ್ಮ, ಶಿಕ್ಷಣ, ಸಾಮಾ ಜಿಕ ವ್ಯವಸ್ಥೆ, ಭಾರತದ ಶ್ರೀಮಂತ ಸಂಸ್ಕೃತಿಯನ್ನು ಜಗತ್ತಿಗೆ ಸಾರಿದ ಮಹನೀಯ ವಿವೇಕಾನಂದರ ಕುರಿತು ಅನೇಕ ದಶಕಗಳಿಂದ ಪಠ್ಯದ ಮೂಲಕ ಪರಿಚಯಿಸುವ ಕಾರ್ಯ ನಿರಂತರವಾಗಿದೆ ಎಂದ ಅವರು, ದೈವಿಕ ಪರಿಪೂರ್ಣತೆಯನ್ನು ಸಾಧಿಸುವುದೇ ಶಿಕ್ಷಣ ಎಂದು ವಿವೇಕಾ ನಂದರು ವ್ಯಾಖ್ಯಾನಿಸಿದ್ದರು. ಇದನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದಾಗ ಪ್ರತಿ ವ್ಯಕ್ತಿಯೂ ವಿಶಿಷ್ಟ ವ್ಯಕ್ತಿತ್ವವನ್ನು ಹೊಂದಿರುವುದು ಅರಿವಿಗೆ ಬರಲಿದೆ. ಎಲ್ಲರಲ್ಲೂ ಅಸಾಮಾನ್ಯ ಶಕ್ತಿ, ಸಾಮಥ್ಯ ಗಳಿವೆ. ಅವುಗಳನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳುವ ರೀತಿಯನ್ನು ಅರಿಯಬೇಕು ಎಂದರು.
ವಿವೇಕಾನಂದರು ನಿನ್ನಮೇಲೆ ನಂಬಿಕೆ ಇದ್ದರೆ ದೇವರನ್ನು ನಂಬ ಬೇಡ. ದೇವರಿಗಿಂತ ಮಿಗಿಲಾದದ್ದು ತನ್ನಲ್ಲಿರುವ ಶಕ್ತಿ-ಸಾಮರ್ಥ್ಯ ಎಂದು ಹೇಳಿದ್ದರು. ನಾಸ್ತಿಕರಲ್ಲದ ವಿವೇಕರ ಈ ಮಾತಿನ ಸೂಕ್ಷ್ಮತೆಯನ್ನು ಅರಿತುಕೊಳ್ಳಬೇಕು. ಅವರ ಎಲ್ಲಾ ಚಿಂತನೆ. ಆಲೋಚನೆಗಳು ಯು ಪೀಳಿಗೆ ಯನ್ನು ಉದ್ದೇಶಿಸಿವೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಹ್ಯಾದ್ರಿ ವಾಣಿಜ್ಯ ಮತ್ತು ನಿರ್ವ ಹಣಾ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ಡಾ||ಶ್ರೀನಿಧಿ ಅವರು ವಿವೇಕಾನಂದರ ಚಿಕಾಗೋ ಭಾಷಣದ ಮಹತ್ವದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸ.ಪ್ರ.ದ.ಕಾಲೇಜಿನ ಪ್ರಾಂಶುಪಾಲ ಪ್ರೊ.ಶಿವೇಶಿ ಆರ್. ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್, ಮಂಗಲಾ ನಾಯಕ್, ಶಿಲ್ಪಾದೊಡ್ಮನಿ, ಡಾ|| ಸುಮಾ ಮುಂತಾದವರು ಉಪಸ್ಥಿತರಿದ್ದರು.
ವಿವೇಕಾನಂದರ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಿ : ಕೆ.ಚನ್ನಬಸಪ್ಪ
RELATED ARTICLES