Saturday, December 14, 2024
Google search engine
Homeಅಂಕಣಗಳುಲೇಖನಗಳು224 ಕ್ಷೇತ್ರಗಳಿಗೂ ಪ್ರಭಾರಿಗಳ ನೇಮಕ

224 ಕ್ಷೇತ್ರಗಳಿಗೂ ಪ್ರಭಾರಿಗಳ ನೇಮಕ

ಶಿವಮೊಗ್ಗ : ರಾಜ್ಯದ 224 ಕ್ಷೇತ್ರ ಗಳಿಗೂ ನಮ್ಮ ಪಕ್ಷದ ವತಿಯಿಂದ ಪ್ರಭಾರಿಗಳನ್ನು ನೇಮಕ ಮಾಡಲಾಗಿದೆ ಎಂದು ವಿಧಾನಪರಿ ಷತ್‌ನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಹೇಳಿದರು.
ಇಂದು ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಶಿವಮೊಗ್ಗ ನಗರಕ್ಕೆ ಸುರೇಶ್‌ಕುಮಾರ್ ಅವರನ್ನು ನೇಮಕ ಮಾಡಿದ್ದಾರೆ. ನನ್ನನ್ನು ರಾಯಚೂರು ಜಿಲ್ಲೆಯ ಕನಕಗಿರಿಗೆ ನೇಮಕ ಮಾಡಿದ್ದು, ಅದೇ ರೀತಿ ಶಿವಮೊಗ್ಗ ಗ್ರಾಮಾಂತರಕ್ಕೆ ಜಿ.ಎಂ. ಸಿದ್ದೇಶ್ವರ್, ಶಿಕಾರಿಪುರಕ್ಕೆ ಬಸವರಾಜ್ ಬೊಮ್ಮಾಯಿ, ಸಾಗರ- ಸೊರಬಕ್ಕೆ ಸಿ.ಎಂ. ಉದಾಸಿ, ಭದ್ರಾ ವತಿಗೆ ಕಲ್‌ಮರಳಪ್ಪ, ತೀರ್ಥಹಳ್ಳಿಗೆ ರಂಗೇಗೌಡ ಇವರುಗಳನ್ನು ನೇಮಕ ಮಾಡಲಾಗಿದೆ ಎಂದರು.
ಇಂದು ಸಂಜೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಬೆಂಗಳೂರಿಗೆ ಆಗಮಿಸಲಿದ್ದು, ನಾಳೆ ಕೋರ್‌ಕಮಿಟಿ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮುಂದಿನ ವಿಧಾನಸಭಾ ಚುನಾವಣೆ ಕುರಿತು ಅಭ್ಯರ್ಥಿಗಳ ಆಯ್ಕೆ ಹಾಗೂ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.
ಮಹದಾಯಿ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿನಾಃಕಾರಣ ರಾಜ ಕಾರಣ ಮಾಡುತ್ತಿದೆ. ನೀರಿನ ವಿಷಯ ದಲ್ಲಿ ಯಾವುದೇ ಕಾರಣಕ್ಕೂ ಇದನ್ನು ಮಾಡಬಾರದು. ಎಲ್ಲಾ ಪಕ್ಷಗಳು ಒಟ್ಟಿಗೆ ಕೂತು ಮಾತುಕತೆ ನಡೆಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.
ಕೆಲ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಘೋಷಣೆಯನ್ನು ರಾಜ್ಯಾಧ್ಯಕ್ಷ ಯಡಿಯೂರಪ್ಪನವರು ಮಾಡಿದ್ದಾರೆ. ಅದರ ಬಗ್ಗೆ ಈಗಾಗಲೇ ಸ್ವತಃ ಬಿಎಸ್‌ವೈ ಅವರೇ ಸ್ಪಷ್ಟೀಕರಣ ನೀಡಿದ್ದು, ಅಭ್ಯರ್ಥಿಗಳ ಆಯ್ಕೆಯನ್ನು ರಾಷ್ಟ್ರೀಯ ಅಧ್ಯಕ್ಷರು ಅಂತಿಮಗೊಳಿಸಲಿದ್ದಾರೆ. ಈ ಬಗ್ಗೆ ಯಾವುದೇ ಗೊಂದಲವಿಲ್ಲ. ಪ್ರತೀ ಕ್ಷೇತ್ರದಲ್ಲಿಯೂ ಸಹ ಆಕಾಂಕ್ಷಿಗಳು ಹೆಚ್ಚಾಗಿದ್ದು, ಇದು ಬಿಜೆಪಿ ರಾಜ್ಯದಲ್ಲಿ ಪ್ರಬಲವಾಗಿದೆ ಎಂಬುದನ್ನು ತೋರಿಸುತ್ತದೆ ಎಂದರು.

RELATED ARTICLES
- Advertisment -
Google search engine

Most Popular

Recent Comments