Saturday, December 14, 2024
Google search engine
Homeಇ-ಪತ್ರಿಕೆಗೆಲುವಿಗಾಗಿ ಹಗಲಿರುಳು ಶ್ರಮಿಸಿದ ಕಾರ್ಯಕರ್ತರಿಗೆ ಕೃತಜ್ಞತೆ: ಬಿ.ವೈ.ರಾಘವೇಂದ್ರ

ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ಕಾರ್ಯಕರ್ತರಿಗೆ ಕೃತಜ್ಞತೆ: ಬಿ.ವೈ.ರಾಘವೇಂದ್ರ

ಭದ್ರಾವತಿ: ಲೋಕಸಭಾ ಹಾಗೂ ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ಪಕ್ಷದ ಕಾರ್ಯಕರ್ತರಿಗೆ ಹಾಗೂ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದ ಹಿತೈಷಿಗಳಿಗೆ ಹೃದಯ ಪೂರ್ವಕವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ನೂತನ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

 ಬಿಜೆಪಿ ಭದ್ರಾವತಿ ನಗರ ಮಂಡಲ ಇಂದು ಪಟ್ಟಣದ ಶ್ರೀ ಮಂಜುನಾಥ ಕಲ್ಯಾಣ ಮಂಟಪದಲ್ಲಿ  ಹಮ್ಮಿಕೊಂಡಿದ್ದ “ಕೃತಜ್ಞತಾ – ಅಭಿನಂದನಾ ಸಮಾರಂಭ” ದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಸತತ ನಾಲ್ಕನೇ ಬಾರಿಗೆ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸದಸ್ಯನಾಗಿ ಎರಡು ಲಕ್ಷಗಳ ಅಧಿಕ ಮತಗಳ ಅಂತರದಿಂದ ಚುನಾಯಿತನಾಗಲು ಪಕ್ಷದ ಎಲ್ಲಾ ಕಾರ್ಯಕರ್ತರ ತಳ ಹಂತದ ಪರಿಶ್ರಮ ಬೆಲೆ ಕಟ್ಟಲಾಗದು. ನನ್ನ ಮೇಲೆ ನೀವು ಇಟ್ಟಿರುವ ಅಚಲ ವಿಶ್ವಾಸಕ್ಕೆ ನಾನು ಸದಾ ಚಿರಋಣಿಯಾಗಿದ್ದೇನೆ. ನಿಮ್ಮ ನಿರೀಕ್ಷೆಗೆ ತಕ್ಕಂತೆ ಕ್ಷೇತ್ರದಲ್ಲಿ ಮತ್ತಷ್ಟು ಹುಮ್ಮಸ್ಸಿನಿಂದ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತರುವ ಮೂಲಕ ಕಾರ್ಯನಿರ್ವಹಿಸುತ್ತೇನೆ ಜೊತೆಗೆ ನಿಮ್ಮ ಆಶೋತ್ತರಗಳನ್ನು ನೆರೆವೇರಿಸುವ ಸಂಕಲ್ಪ ತೊಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಮೇಘರಾಜ್ ಅವರು, ವಿಧಾನಪರಿಷತ್ ಶಾಸಕ ಡಾ. ಶ್ರೀ ಧನಂಜಯ ಸರ್ಜಿ , ಬಿಜೆಪಿ ಭದ್ರಾವತಿ ಅಧ್ಯಕ್ಷ ಧರ್ಮ ಪ್ರಸಾದ್ , ಪ್ರಮುಖ ಶ್ರೀ ಭಾನುಪ್ರಕಾಶ್ ,  ರುದ್ರೇಶ್ ,  ಹಾಲೇಶಪ್ಪ,  ಮಂಜುನಾಥ್ ,  ಕದಿರೇಶ್ ,  ಆನಂದ್ , ಶ್ರೀ ಕರುಣಾಮೂರ್ತಿ, ಶಾರದಾ ಅಪ್ಪಾಜಿ, ಶ್ರೀ ಚಂದ್ರಶೇಖರ್  ಸೇರಿದಂತೆ ಮಂಡಲದ ಎಲ್ಲಾ ಪ್ರಮುಖ ಕಾರ್ಯಕರ್ತರು, ಮುಖಂಡರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments