Thursday, December 5, 2024
Google search engine
Homeಇ-ಪತ್ರಿಕೆಕೇಂದ್ರ ಸಚಿವರಿಗೆ ಖಾತೆ ಹಂಚಿಕೆ: ಎಚ್‌ ಡಿಕೆ ಗೆ ಉಕ್ಕು, ಬೃಹತ್‌ ಕೈಗಾರಿಕೆ

ಕೇಂದ್ರ ಸಚಿವರಿಗೆ ಖಾತೆ ಹಂಚಿಕೆ: ಎಚ್‌ ಡಿಕೆ ಗೆ ಉಕ್ಕು, ಬೃಹತ್‌ ಕೈಗಾರಿಕೆ

ಜೋಶಿಗೆ ಆಹಾರ, ಶೋಭಾ ಅವರಿಗೆ ಸಣ್ಣ ಕೈಗಾರಿಕೆ, ಸೋಮಣ್ಣಗೆ ಜಲಶಕ್ತಿ ಮತ್ತು ರೈಲ್ವೆ ( ರಾಜ್ಯಖಾತೆ)

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸತತ ಮೂರನೇ ಬಾರಿಗೆ ಕೇಂದ್ರದಲ್ಲಿ ಎನ್ಡಿಎ ಸರ್ಕಾರ ರಚನೆಯಾಗಿದ್ದು, ಸೋಮವಾರ ಬೆಳಗ್ಗೆ ನರೇಂದ್ರ ಮೋದಿ ಪ್ರಧಾನಿ ಅವರು ಕಚೇರಿಗೆ ತೆರಳಿ ತಮ್ಮ ಮೊದಲ ಕಡತಕ್ಕೆ ಸಹಿ ಹಾಕಿದರು. ಆಬಳಿಕ ಮೊದಲ ಸಚಿವ ಸಂಪುಟ ಸಭೆ ನಡೆಸಿ, ಖಾತೆ ಹಂಚಿಕೆ ಮಾಡಿದ್ದಾರೆ.

ಪ್ರಧಾನಿ ಮೋದಿ ಸೇರಿ 72 ಸಂಪುಟ ಸದಸ್ಯರಲ್ಲಿ 30 ಕ್ಯಾಬಿನೆಟ್ ಸಚಿವರು, ಐವರು ಸ್ವತಂತ್ರ ಉಸ್ತುವಾರಿ ಮತ್ತು 36 ರಾಜ್ಯ ಸಚಿವರು ಪದಗ್ರಹಣ ಮಾಡಿದ್ದು, ಯಾರಿಗೆ ಯಾವ ಖಾತೆ ಹಂಚಿಕೆ ಎಂಬ ಮಾಹಿತಿ ಇಲ್ಲಿದೆ.

ರಾಜನಾಥ್ ಸಿಂಗ್ – ರಕ್ಷಣಾ ಖಾತೆ,ಅಮಿತ್ ಶಾ – ಗೃಹ ಇಲಾಖೆ, ನಿತೀನ್ ಜೈರಾಮ್ ಗಡ್ಕರಿ – ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ, ಜಗತ್ ಪ್ರಕಾಶ್ ನಡ್ಡಾ – ಆರೋಗ್ಯ ಇಲಾಖೆ,ಶಿವರಾಜ್ ಸಿಂಗ್ ಚೌಹಾಣ್ – ಕೃಷಿ ಇಲಾಖೆ, ನಿರ್ಮಲಾ ಸೀತಾರಾಮನ್ – ಹಣಕಾಸು ಇಲಾಖೆ, ಸುಬ್ರಹ್ಮಣ್ಯಂ ಜೈಶಂಕರ್ – ವಿದೇಶಾಂಗ ಇಲಾಖೆ, ಮನೋಹರ್ ಲಾಲ್ ಖಟ್ಟರ್ – ಇಂಧನ, ಕಿರೆನ್ ರಿಜಿಜು – ಸಂಸದೀಯ ವ್ಯವಹಾರ, ಹೆಚ್ ಡಿ ಕುಮಾರಸ್ವಾಮಿಗೆ ಉಕ್ಕು, ಬೃಹತ್ ಕೈಗಾರಿಕೆ, ಪಿಯೂಷ್ ಗೋಯಲ್ – ವಾಣಿಜ್ಯ ಇಲಾಖೆ, ಧರ್ಮೇಂದ್ರ ಪ್ರಧಾನ್ – ಶಿಕ್ಷಣ, ಜಿತನ್ ರಾಮ್ ಮಾಂಝಿ – ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್ – ಪಂಚಾಯತ್ ರಾಜ್, ಮೀನುಗಾರಿಕೆ, ಪಶುಸಂಗೋಪನೆ , ಸರ್ಬಾನಂದ ಸೋನೋವಾಲ್ – ಬಂದರು, ಡಾ.ವೀರೇಂದ್ರ ಕುಮಾರ್ – ಸಾಮಾಜಿಕ ನ್ಯಾಯ ಮತ್ತು ಸಮಾಜ ಕಲ್ಯಾಣ, ಕಿಂಜರಾಪುರ ರಾಮಮೋಹನ ನಾಯ್ಡು – ವಿಮಾನಯಾನ ಖಾತೆ ನೀಡಲಾಗಿದೆ.

ಹಾಗೆಯೇ ಪ್ರಲ್ಹಾದ್ ಜೋಶಿ – ಆಹಾರ ಮತ್ತು ವಿತರಣೆ, ನವೀಕರಿಸಬಹುದಾದ ಇಂಧನ,  ಜುಯಲ್ ಓರಂ – ಆದಿವಾಸಿ ಇಲಾಖೆ,  ಗಿರಿರಾಜ್ ಸಿಂಗ್ – ಜವಳಿ ಖಾತೆ
ಅಶ್ವಿನಿ ವೈಷ್ಣವ್ – ರೈಲ್ವೆ, ಮಾಹಿತಿ ತಂತ್ರಜ್ಞಾನ,  ಜ್ಯೋತಿರಾದಿತ್ಯ ಎಂ. ಸಿಂಧಿಯಾ -ಕಮ್ಯುನಿಕೇಷನ್, ಈಶಾನ್ಯ ರಾಜ್ಯಗಳ ಅಭಿವೃದ್ಧಿ,  ಭೂಪೇಂದರ್ ಯಾದವ್ – ಅರಣ್ಯ ಮತ್ತು ಹವಾಮಾನ,  ಗಜೇಂದ್ರ ಸಿಂಗ್ ಶೇಖಾವತ್ – ಪ್ರವಾಸೋದ್ಯಮ,  ಅನ್ನಪೂರ್ಣ ದೇವಿ – ಮಹಿಳಾ ಮತ್ತು ಮಕ್ಕಳ ಕಲ್ಯಾಣ,  ಹರ್ದೀಪ್ ಸಿಂಗ್ ಪುರಿ – ಪೆಟ್ರೋಲಿಯಂ, ನೈಸರ್ಗಿ ಅನಿಲ,  ಮನ್ಸುಖ್ ಮಾಂಡವಿಯಾ – ಕಾರ್ಮಿಕ, ಕ್ರೀಡಾ ಮತ್ತು ಯುವಜನ ಇಲಾಖೆ,  ಜಿ ಕಿಶನ್ ರೆಡ್ಡಿ – ಕಲ್ಲಿದ್ದಲ್ಲು, ಗಣಿ,  ಚಿರಾಗ್ ಪಾಸ್ವಾನ್ – ಆಹಾರ ಸಂಸ್ಕರಣ,  ಸಿ ಆರ್ ಪಾಟೀಲ್ – ಜಲ ಶಕ್ತಿ ಖಾತೆ ಸಿಕ್ಕಿದೆ.

ಹೆಚ್ ಡಿ ಕುಮಾರಸ್ವಾಮಿ – ಉಕ್ಕು ಮತ್ತು ಬೃಹತ್ ಕೈಗಾರಿಕೆ
ಪಿಯೂಷ್ ಗೋಯಲ್? – ವಾಣಿಜ್ಯ ಇಲಾಖೆ
ಧರ್ಮೇಂದ್ರ ಪ್ರಧಾನ್ – ಶಿಕ್ಷಣ
ಜಿತನ್ ರಾಮ್ ಮಾಂಝಿ – ಸಣ್ಣ ಮತ್ತು ಮಧ್ಯಮ ಕೈಗಾರಿಕೆ
ರಾಜೀವ್ ರಂಜನ್ ಸಿಂಗ್ ಅಲಿಯಾಸ್ ಲಾಲನ್ ಸಿಂಗ್ – ಪಂಚಾಯತ್ ರಾಜ್, ಮೀನುಗಾರಿಕೆ, ಪಶುಸಂಗೋಪನೆ
ಸರ್ಬಾನಂದ ಸೋನೋವಾಲ್ – ಬಂಧರು
ಡಾ.ವೀರೇಂದ್ರ ಕುಮಾರ್ – ಸಾಮಾಜಿಕ ನ್ಯಾಯ ಮತ್ತು ಸಮಾಜ ಕಲ್ಯಾಣ
ಕಿಂಜರಾಪುರ ರಾಮಮೋಹನ ನಾಯ್ಡು – ವಿಮಾನಯಾನ
ಪ್ರಲ್ಹಾದ್ ಜೋಶಿ – ಆಹಾರ ಮತ್ತು ವಿತರಣೆ, ನವೀಕರಿಸಬಹುದಾದ ಇಂಧನ
ಜುಯಲ್ ಓರಂ – ಆದಿವಾಸಿ ಇಲಾಖೆ
ಗಿರಿರಾಜ್ ಸಿಂಗ್ – ಜವಳಿ ಖಾತೆ
ಅಶ್ವಿನಿ ವೈಷ್ಣವ್ – ರೈಲ್ವೆ, ಮಾಹಿತಿ ತಂತ್ರಜ್ಞಾನ
ಜ್ಯೋತಿರಾದಿತ್ಯ ಎಂ. ಸಿಂಧಿಯಾ -ಕಮ್ಯುನಿಕೇಷನ್, ಈಶಾನ್ಯ ರಾಜ್ಯಗಳ ಅಭಿವೃದ್ಧಿ
ಭೂಪೇಂದರ್ ಯಾದವ್ – ಅರಣ್ಯ ಮತ್ತು ಹವಾಮಾನ
ಗಜೇಂದ್ರ ಸಿಂಗ್ ಶೇಖಾವತ್ – ಪ್ರವಾಸೋದ್ಯಮ
ಅನ್ನಪೂರ್ಣ ದೇವಿ – ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಹರ್ದೀಪ್ ಸಿಂಗ್ ಪುರಿ – ಪೆಟ್ರೋಲಿಯಂ, ನೈಸರ್ಗಿ ಅನಿಲ
ಮನ್ಸುಖ್ ಮಾಂಡವಿಯಾ – ಕಾರ್ಮಿಕ, ಕ್ರೀಡಾ ಮತ್ತು ಯುವಜನ ಇಲಾಖೆ
ಜಿ ಕಿಶನ್ ರೆಡ್ಡಿ – ಕಲ್ಲಿದ್ದಲ್ಲು, ಗಣಿ
ಚಿರಾಗ್ ಪಾಸ್ವಾನ್ – ಆಹಾರ ಸಂಸ್ಕರಣ
ಸಿ ಆರ್ ಪಾಟೀಲ್ – ಜಲ ಶಕ್ತಿ ಖಾತೆ

………………………….
ಕ್ಯಾಬಿನೆಟ್ ದರ್ಜೆಯ ಸಚಿವರಿಗೆ ಖಾತೆ ಹಂಚಿಕೆ
ರಾಜನಾಥ್ ಸಿಂಗ್ – ರಕ್ಷಣಾ ಖಾತೆ
ಅಮಿತ್ ಶಾ – ಗೃಹ ಇಲಾಖೆ
ನಿತೀನ್ ಜೈರಾಮ್ ಗಡ್ಕರಿ – ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ
ಜಗತ್ ಪ್ರಕಾಶ್ ನಡ್ಡಾ – ಆರೋಗ್ಯ ಇಲಾಖೆ
ಶಿವರಾಜ್ ಸಿಂಗ್ ಚೌಹಾಣ್ – ಕೃಷಿ ಇಲಾಖೆ
ನಿರ್ಮಲಾ ಸೀತಾರಾಮನ್ – ಹಣಕಾಸು ಇಲಾಖೆ
ಸುಬ್ರಹ್ಮಣ್ಯಂ ಜೈಶಂಕರ್ – ವಿದೇಶಾಂಗ ಇಲಾಖೆ
ಮನೋಹರ್ ಲಾಲ್ ಖಟ್ಟರ್? – ಇಂಧನ
ಕಿರೆನ್ ರಿಜಿಜು – ಸಂಸದೀಯ ವ್ಯವಹಾರ

ಶೋಭಾ ಕರಂದ್ಲಾಜೆಗೆ ಸಣ್ಣ ಮತ್ತು ಅತೀ ಸೂಕ್ಷ್ಮ ಕೈಗಾರಿಕೆ ರಾಜ್ಯ ಖಾತೆ ಹಂಚಿಕೆ ಮಾಡಲಾಗಿದೆ.

RELATED ARTICLES
- Advertisment -
Google search engine

Most Popular

Recent Comments