Thursday, December 5, 2024
Google search engine
Homeಇ-ಪತ್ರಿಕೆಅಮೆಜಾನ್‌ನಲ್ಲಿ ಆರ್ಡರ್‌ ಮಾಡಿದ್ದು ಗೇಮಿಂಗ್‌ ವಸ್ತು, ಬಂದಿದ್ದು ಜೀವಂತ ಹಾವು!

ಅಮೆಜಾನ್‌ನಲ್ಲಿ ಆರ್ಡರ್‌ ಮಾಡಿದ್ದು ಗೇಮಿಂಗ್‌ ವಸ್ತು, ಬಂದಿದ್ದು ಜೀವಂತ ಹಾವು!

ಬೆಂಗಳೂರು: ಇ-ಕಾಮರ್ಸ್ ವಲಯದ ದೈತ್ಯ ಕಂಪನಿ ಅಮೆಜಾನ್, ‘ಎಕ್ಸ್‌ಬಾಕ್ಸ್ ಕಂಟ್ರೋಲರ್’ಗಾಗಿ ಆರ್ಡರ್ ಮಾಡಿದ ಬೆಂಗಳೂರಿನ ಗ್ರಾಹಕರ ಮನೆಗೆ ಜೀವಂತ ಹಾವನ್ನೂ ಕಳುಹಿಸಿಕೊಟ್ಟಿದೆ!

ವಿಡಿಯೊ ಹಂಚಿಕೊಂಡಿರುವ ಪ್ರಕಾಶ್ ಎಂಬವರು, ‘ಸರ್ಜಾಪುರ ರಸ್ತೆಯಲ್ಲಿರುವ ಕುಟುಂಬವೊಂದು, ಅಮೆಜಾನ್‌ನಲ್ಲಿ ತಾವು ಆರ್ಡರ್ ಮಾಡಿದ್ದ ಎಕ್ಸ್‌ ಬಾಕ್ಸ್ ಕಂಟ್ರೋಲರ್ ಜೊತೆಗೆ ಜೀವಂತ ಹಾವನ್ನೂ ಸ್ವೀಕರಿಸಿರುವ ಆಘಾತಕಾರಿ ಘಟನೆ ನಡೆದಿದೆ. ಅದೃಷ್ಟವಶಾತ್, ಆ ವಿಷಕಾರಿ ಹಾವು ಪ್ಯಾಕಿಂಗ್ ಟೇಪ್‌ನಲ್ಲೇ ಸಿಲುಕಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ’ ಎಂದು ತಿಳಿಸಿದ್ದಾರೆ.

ಅದೃಷ್ಟವಶಾತ್, ವಿಷಪೂರಿತ ಹಾವು ಪ್ಯಾಕೇಜಿಂಗ್ ಟೇಪ್‌ಗೆ ಅಂಟಿಕೊಂಡಿತ್ತು. ಇದರಿಂದ ಬಾಕ್ಸ್‌ ಓಪನ್‌ ಮಾಡಿದ ಯುವತಿ ಅಪಾಯದಿಂದ ಪಾರಾಗಿದ್ದಾರೆ. ಇಲ್ಲದಿದ್ದರೆ ಹಾವು ಕಚ್ಚುವ ಸಾಧ್ಯತೆ ಇತ್ತು. ಆಘಾತದ ಹೊರತಾಗಿಯೂ, ಅವರು ಘಟನೆಯ ವೀಡಿಯೋವನ್ನು ಸೆರೆಹಿಡಿದಿದ್ದಾರೆ. ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಅರ್ಧ ತೆರೆದಿರುವ ಆನ್‌ಲೈನ್‌ ಡೆಲಿವರಿ ಪ್ಯಾಕೇಜ್ ಅನ್ನು ಬಕೆಟ್‌ನಲ್ಲಿ ಇರಿಸಿರುವುದನ್ನು ವೀಡಿಯೋದಲ್ಲಿ ಕಾಣಬಹುದು. ಬಕೆಟ್‌ ಒಳಗೆ ಪ್ಯಾಕೇಜಿಂಗ್ ಟೇಪ್‌ನಲ್ಲಿ ಸಿಲುಕಿಕೊಂಡಿದ್ದ ನಾಗರಹಾವು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ದೃಶ್ಯ ವೀಡಿಯೋದಲ್ಲಿದೆ.

ವಿಡಿಯೊವನ್ನು ಎಕ್ಸ್/ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ತನ್ವಿ ಎಂಬವರು, ‘ಅಮೆಜಾನ್‌ನಲ್ಲಿ ಎಕ್ಸ್‌ಬಾಕ್ಸ್ ಕಂಟ್ರೋಲರ್‌ಗಾಗಿ ಆರ್ಡರ್ ಮಾಡಿದೆ. ಅದರೊಂದಿಗೆ ಹಾವನ್ನು ಉಚಿತವಾಗಿ ಪಡೆದೆ’ ಎಂದು ಬರೆದುಕೊಂಡಿದ್ದಾರೆ. ತನ್ನಿ ಅವರ ಖಾತೆಯಲ್ಲಿ ಬೆಂಗಳೂರಿನವರು ಎಂಬ ಮಾಹಿತಿ ಇದೆ.

ಈ ಪೋಸ್ಟ್‌ಗೆ ಎಕ್ಸ್‌ನಲ್ಲೇ ಪ್ರತಿಕ್ರಿಯಿಸಿ, ಕ್ಷಮೆಯಾಚಿಸಿರುವ ಅಮೆಜಾನ್, ಕೂಡಲೇ ಸಂಪರ್ಕಿಸುವುದಾಗಿ ತಿಳಿಸಿದೆ.

RELATED ARTICLES
- Advertisment -
Google search engine

Most Popular

Recent Comments