ದಾವಣಗೆರೆ: ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಖಂಡಿಸಿ ನಗರದಲ್ಲಿ ವೀರಶೈವ ಸಮಾಜದಿಂದ ಪ್ರತಿಭಟನೆ ನಡೆಸಲಾಯಿತು.
ಇಲ್ಲಿನ ಮಹಾನಗರ ಪಾಲಿಕೆಯ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸಿ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಹಕ್ಕೋತ್ತಾಯ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರ ಪಾತ್ರ ಪ್ರಧಾನವಾಗಿರುವ ಮಾಹಿತಿ ಕೇಳಿಬರುತ್ತಿದೆ. ಆದರೆ, ರಾಜಕಾರಣಿಗಳು ಅವರನ್ನು ಸೇಫ್‌ಗಾರ್ಡ್ ಮಾಡಲು ಮೃದುವಾಗಿ ಮಾತನಾಡುತ್ತಿರುವುದು ಖಂಡನೀಯ. ರೇಣುಕಾಸ್ವಾಮಿ ಹತ್ಯೆಯಲ್ಲಿ ಪ್ರತ್ಯಕ್ಷ, ಪರೋಕ್ಷವಾಗಿ ಭಾಗವಹಿಸಿದ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಸಮಾಜದಲ್ಲಿ ಇನ್ನು ಮುಂದೆ ಈ ರೀತಿಯ ಕೃತ್ಯಗಳು ನಡೆಯದಂತೆ ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನೆಕಾರರು ಒತ್ತಾಯಿಸಿದರು.
ಸಮಾಜದ ಮುಖಂಡರಾದ ಸಿದ್ಧಲಿಂಗ ಸ್ವಾಮಿ, ಬಲ್ಲೂರು ರವಿಕುಮಾರ್, ತ್ಯಾವಣಿಗಿ ವೀರಭದ್ರಸ್ವಾಮಿ, ಪಂಚಾಕ್ಷರಯ್ಯ ಸಿ.ಎಲ್., ಎಂ.ಆರ್. ಬಸವರಾಜಯ್ಯ, ಮಂಜುನಾಥಸ್ವಾಮಿ, ಮಲ್ಲೇಶ್ವರಪ್ಪ, ದ್ರಾಕ್ಷಾಯಣಮ್ಮ, ವಾಗೀಶ್ವರಯ್ಯ, ಬಿ.ಎಂ.ರವಿ, ಕೋಟೆಹಾಳ್
ಸಿದ್ಧೇಶ್, ರಾಜೇಂದ್ರ, ಮಟ್ಟಿಕಲ್ ವೀರಭದ್ರಸ್ವಾಮಿ, ಹಾಲೇಶ್ ಮುಂತಾದವರು ಭಾಗವಹಿಸಿದ್ದರು.