Thursday, December 5, 2024
Google search engine
Homeಅಂಕಣಗಳುಲೇಖನಗಳುಜುಲೈ ೨೫ ರಿಂದ ಸೆಪ್ಟಂಬರ್ ೬ರ ವರೆಗೆ

ಜುಲೈ ೨೫ ರಿಂದ ಸೆಪ್ಟಂಬರ್ ೬ರ ವರೆಗೆ

ಶಿವಮೊಗ್ಗ : ನಗರದ ವಿವಿಧ ಬಡಾವಣೆಗಳಲ್ಲಿ ಜು.೨೫ ರಿಂದ ಸೆಪ್ಟಂಬರ್ ೬ರ ವರೆಗೆ ಶ್ರಾವಣ ಮಾಸದ ಅಂಗವಾಗಿ ಶ್ರಾವಣ ಚಿಂತನ ಕಾರ್ಯಕ್ರಮವನ್ನು ಬೆಕ್ಕಿನ ಕಲ್ಮಠದ ವತಿಯಿಂದ ಹಮ್ಮಿಕೊಳ್ಳ ಲಾಗಿದೆ ಎಂದು ಶ್ರೀ ಮಠದ ಶ್ರೀ ಡಾ. ಮಲ್ಲಿಕಾರ್ಜುನ ಮರುಘ ರಾಜೇಂದ್ರ ಮಹಾಸ್ವಾಮಿಗಳು ತಿಳಿಸಿದರು.
ಇಂದು ಸುದ್ಧಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಸಹ ಶ್ರಾವಣ ಚಿಂತನ ಕಾರ್ಯಕ್ರಮವನ್ನು ನಗರದ ವಿವಿಧ ಬಡಾವಣೆಗಳಲ್ಲಿ ಏರ್ಪಡಿಸಲಾಗಿದ್ದು, ಶರಣರ ಮೌಲಿಕ ಚಿಂತನೆ, ಉಪನ್ಯಾಸ, ಅಕ್ಕ ಮಹಾದೇವಿಯ ವಚನ ವ್ಯಾಖ್ಯಾನ ಇನ್ನೂ ಮುಂತಾದ ಕಾರ್ಯಕ್ರಮ ಗಳು ಈ ಅವಧಿಯಲ್ಲಿ ನಡೆಯಲಿವೆ ಎಂದರು.
ಜು.೨೫ ರಂದು ಸಂಜೆ ೬.೩೦ಕ್ಕೆ ನಗರದ ಬೆಕ್ಕಿನ ಕಲ್ಮಠದಲ್ಲಿರುವ ಶ್ರೀ ಗುರು ಬಸವ ಭವನದಲ್ಲಿ ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್ ಶ್ರಾವಣ ಚಿಂತನ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಮುಖ್ಯ ಅತಿಥಿಗಳಾಗಿ ಶಿವಗಂಗಾ ಯೋಗಕೇಂದ್ರದ ಬಿ.ಸಿ. ನಂಜುಂಡಶೆಟ್ರು, ಎಂ. ಮಾಧವಾ ಚಾರ್ ಆಗಮಿಸಲಿದ್ದಾರೆ. ಉಡು ತಡಿಯ ಅಕ್ಕಮಹಾದೇವಿಯ ಪ್ರಾಧ್ಯಾಪಕಿ ಡಾ. ವಿಜಯದೇವಿ ಅಕ್ಕಮಹಾದೇವಿ ವಿಷಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಸಿದ್ದಾಪುರ ತಾಲ್ಲೂಕು ಮಾವಿನ ಗುಂಡಿಯ ಪ್ರಭುದೇವ ಧರ್ಮಪೀಠದ ಜಗ ದ್ಗುರು ಪರಮಪೂಜ್ಯ ಶ್ರೀ ವಿಜಯ ಕುಮಾರ ಮಹಾನುಭಾವಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದೆ.
ಜು.೨೬ ರಂದು ಗಾಂಧಿ ಬಜಾರ್‌ನ ಬಸವೇಶ್ವರ ದೇವಸ್ಥಾನದಲ್ಲಿ ನಡೆ ಯುವ ಕಾರ್ಯಕ್ರಮದಲ್ಲಿ ನಿಔಋತ್ತ ಪ್ರಾಂಸುಪಾಲ ಡಾ. ಗೋಪಾಲಕೃಷ್ಣ ಕೊಳ್ತಾಯ ಉಪನ್ಯಾಸ ನೀಡಲಿದ್ದಾರೆ. ನಗರದ ಕಾಶಿಪುರದ ಕೆ.ಹೆಚ್.ಪಿ. ಕಾಲೋನಿಯಲ್ಲಿ ಜು.೨೭ ರಂದು ನಡೆಯುವ ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ನೂರ್‌ಸಮದ್ ಅಬ್ಬಲಗೆರೆ ಉಪನ್ಯಾಸ ನೀಡಲಿದ್ದಾರೆ ಎಂದರು.
ಆಗಸ್ಟ್ ೭ ರಂದು ಶ್ರಾವಣ ಚಿಂತನ ಕಾರ್ಯಕ್ರಮದ ಜೊತೆಗೆ ೪೫೨ನೇ ಮಾಸಿಕ ಶಿವಾನುಭಗೋಷ್ಠಿಯನ್ನು ಕೂಡಾ ಏರ್ಪಡಿಸಲಾಗಿದ್ದು, ಅಂದು ಸಂಜೆ ೬.೩೦ಕ್ಕೆ ಬೆಕ್ಕಿನ ಕಲ್ಮಠದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಂಸುಪಾಲ ಪ್ರೊ. ಸಿ.ಯು. ಸೋಮಶೇಖರ್ ಉಪನ್ಯಾಸ ನೀಡಲಿದ್ದಾರೆ.
ಪ್ರತಿ ದಿನ ಸಂಜೆ ೬.೩೦ ರಿಂದ ರಾತ್ರಿ ೮.೩೦ರ ವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ನಾಡಿದ ಹೆಸರಾಂತ ವ್ಯಕ್ತಿಗಳು ಹಾಗೂ ಸಾಹಿತಿಗಳಿಂದ ವಿವಿಧ ವಿಷಯಕ್ಕೆ ಸಂಬಂಧಿಸಿದಂತೆ ಉಪನ್ಯಾಸ ಕಾರ್ಯಕ್ರಮಗಳು ನಡೆಯುತ್ತವೆ. ಅಲ್ಲದೆ ವಚನ ಗಾಯನ, ವ್ಯಾಖ್ಯಾನ ಕೂಡ ಈ ಸಂದರ್ಭದಲ್ಲಿ ನಡೆಯಲಿದೆ. ಸೆಪ್ಟಂಬರ್ ೬ ರಂದು ಸಂಜೆ ೬.೩೦ಕ್ಕೆ ಶ್ರಾವಣ ಚಿಂತನ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.
ಸುದ್ಧಿಗೋಷ್ಠಿಯಲ್ಲಿ ರುದ್ರಾರಾದ್ಯ, ಕೋರಿಪ್ರಭು, ಹೆಚ್.ಎಂ. ಚಂದ್ರಶೇಖರಯ್ಯ, ಶಾಂತಾ ಆನಂದ್, ರೇಣುಕಾರಾದ್ಯ, ಕರಿಬಸಯ್ಯ ಮುಂತಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments