Thursday, December 5, 2024
Google search engine
Homeಇ-ಪತ್ರಿಕೆಹೇರ್‌ ಸ್ಟೈಲ್‌ ವಿಚಾರ ಬಿಡಿ, ರೈತರ ಕಷ್ಟ ನಷ್ಟ ಕೇಳಿ:  ಮಧು ಬಂಗಾರಪ್ಪ ಅವರಿಗೆ ಟಾಂಗ್‌...

ಹೇರ್‌ ಸ್ಟೈಲ್‌ ವಿಚಾರ ಬಿಡಿ, ರೈತರ ಕಷ್ಟ ನಷ್ಟ ಕೇಳಿ:  ಮಧು ಬಂಗಾರಪ್ಪ ಅವರಿಗೆ ಟಾಂಗ್‌ ನೀಡಿದ ಮಹೇಶ್‌

ಶಿಕಾರಿಪುರ : ಮಕ್ಕಳಿಗೆ ಶಿಕ್ಷಕರು ರೋಲ್ ಮಾಡೆಲ್, ಅದೇ ರೀತಿ ಶಿಕ್ಷಕರು ಮತ್ತು ಹಿರಿಯ ಅಧಿಕಾರಿಗಳಿಗೆ ಶಿಕ್ಷಣ ಸಚಿವರು ರೋಲ್ ಮಾಡೆಲ್ ಆಗಿರುತ್ತಾರೆ. ಅವರ ಹೇರ್ ಸ್ಟೈಲ್ ಮಕ್ಕಳಿಗೆ ಮಾದರಿಯಾಗುತ್ತದೆ. ಸಚಿವರು ಈ ಬಗ್ಗೆ ಮೊದಲು ಗಮನಹರಿಸಲಿ ಎಂದು ಪುರಸಭೆ ಸದಸ್ಯ ಹುಲ್ಮಾರ್ ಮಹೇಶ್ ಹೇಳಿದರು.

ಪಟ್ಟಣದ ಸುದ್ದಿಮನೆಯಲ್ಲಿ, ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಿಮ್ಮ ಹೇರ್ ಕಟ್ಟಿಂಗ್ ಸ್ಟೈಲ್ ಬಗ್ಗೆ  ನಮ್ಮ ರಾಜ್ಯಾಧ್ಯಕ್ಷರು ಹೇಳಿಲ್ಲ, ಆದರೆ ಚನ್ನರಾಯಪಟ್ಟಣದ ಹಳ್ಳಿಯೊಂದರ ವಿದ್ಯಾರ್ಥಿ ಹೇಳಿದ ಮಾತನ್ನು ಉದಾಹರಿಸಿದ್ದಾರೆ. ಇದನ್ನೇ ಸಚಿವ ಮಧು ಬಂಗಾರಪ್ಪನವರು ದೊಡ್ಡದನ್ನಾಗಿ ಮಾಡಿದ್ದಾರೆ. ನಿಮ್ಮ ಕಾರ್ಯಕರ್ತರು ಕೂಡ ಇದನ್ನೇ ದೊಡ್ಡ ಇಷ್ಯೂ ಮಾಡುತ್ತಿದ್ದಾರೆ. ನೀವು ಕಟಿಂಗ್ ಬಗ್ಗೆ ಬಿಟ್ಟು ರಾಜ್ಯದ ಸಮಸ್ಯೆಗಳ ಬಗ್ಗೆ ಗಮನಹರಿಸಿ ಎಂದರು.

ನಮ್ಮ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕ್ಷಮೆ ಕೇಳಬೇಕು ಎಂದು ಹೇಳುತ್ತಾರೆ. ಅವರು ಯಾಕೆ ಕ್ಷಮೆ ಕೇಳಬೇಕು. ಸಚಿವರಾದ ಮೇಲೆ ಜನತೆಯ ಸಮಸ್ಯೆಗಳಿಗೆ ಸ್ಪಂದಿಸದ, ರೈತರ ಕಷ್ಟ ಕೇಳದ ನೀವು ಕ್ಷಮೆ ಕೇಳಬೇಕು. ಯಡಿಯೂರಪ್ಪನವರು, ಸಂಸದ ರಾಘವೇಂದ್ರ ಅವರು ಜಿಲ್ಲೆಯನ್ನು ತಾಲೂಕನ್ನು ಅಭಿವೃದ್ಧಿ ಮಾಡಿದ್ದಾರೆ. ಶಾಶ್ವತ ನೀರಾವರಿ ಯೋಜನೆ ರೈತರಿಗೆ ಅನುಕೂಲವಾಗಿದೆ ಎಂದರು.

ನಮ್ಮ ನಾಯಕ ಬಿ.ವೈ.ವಿಜಯೇಂದ್ರ ಅವರನ್ನು ತಮ್ಮ ತಂದೆಯವರ ಹೆಸರಿನ ಮೇಲೆ ರಾಜ್ಯದ್ಯಕ್ಷರಾಗಿದ್ದೀರಿ ಎಂದು ಆಪಾದನೆ ಮಾಡುತ್ತೀರಿ, ಆದರೆ ನೀವೂ ಕೂಡ ನಿಮ್ಮ ತಂದೆಯವರ ಹೆಸರಿನಲ್ಲೇ ಅಧಿಕಾರಕ್ಕೆ ಬಂದಿರುವದನ್ನು ನೀವು ನೆನಪಿಟ್ಟುಕೊಳ್ಳಬೇಕು. ಈಡಿಗ ಸಮುದಾಯದ ಹಿರಿಯ ನಾಯಕ ಹರಿಪ್ರಸಾದ್ ಮತ್ತು ಭದ್ರಾವತಿಯ ಹಿರಿಯ ಶಾಸಕ ಸಂಗಮೇಶ್ವರ ಅವರನ್ನು ಹಿಂದೆ ಸರಿಸಿ ಸಚಿವರಾಗಿದ್ದು, ನಿಮ್ಮ ತಂದೆ ದಿ. ಬಂಗಾರಪ್ಪನವರ ಹೆಸರಿನ ಮೇಲೆ ನಿಮ್ಮ ಕೊಡುಗೆ ಏನು ಎಂದು ಪ್ರಶ್ನೆ ಮಾಡಿದರು.

ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಮತ್ತು ಹಾಲಿ ನಿರ್ದೇಶಕ ಶಶಿಧರ್ ಚುರ್ಚಿಗುಂಡಿ ಮಾತನಾಡಿ, ಕಳೆದ ವರ್ಷದ ಭೀಕರ ಬರಗಾಲದಿಂದ ರೈತರು ಕಂಗಾಲಾಗಿದ್ದಾರೆ, ಮಳೆಗಳು ಬಂದರೂ ಸಣ್ಣ ಗುಂಡಿಯಷ್ಟು ನೀರು ತುಂಬಿಲ್ಲ. ರೈತರ ಬೋರ್‍ವೆಲ್‍ಗಳು ರೀಚಾರ್ಜ್ ಆಗಿಲ್ಲ. ಮುಂಗಾರು ಪ್ರಾರಂಭವಾಗಿದೆ. ರೈತರಿಗೆ ಗೊಬ್ಬರ, ಬಿತ್ತನೆ ಬೀಜಗಳ ಬಗ್ಗೆ ಗಮನಹರಿಸಬೇಕು. ಮೋಡ ಬಿತ್ತನೆ ಮಾಡಿ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಮೊದಲು ಯೋಚನೆ ಮಾಡುವ ಅಗತ್ಯವಿದೆ. ಶಿಕಾರಿಪುರಕ್ಕೆ ಯಡಿಯೂರಪ್ಪನವರು ಮಂಜೂರು ಮಾಡಿದ ಜಿಲ್ಲಾಸ್ಪತ್ರೆಯನ್ನು ವಿರೋಧಿಸಿ ವಾಪಸ್ ಕಳಿಸಿದ ಕೀರ್ತಿ ಸಚಿವ ಮಧು ಬಂಗಾರಪ್ಪ ಅವರಿಗೆ ಸಲ್ಲಬೇಕು ಎಂದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧಿಕಾರಿ ಚಂದ್ರಶೇಖರ್ ಅವರ ಆತ್ಮಹತ್ಯೆಯಿಂದ ಬ್ರಹ್ಮಾಂಢ ಭ್ರμÁ್ಟಚಾರದ ದರ್ಶನವಾಗಿದೆ. ಇನ್ನೂ ಸಂಬಂಧಪಟ್ಟ ಸಚಿವರು ರಾಜೀನಾಮೆ ನೀಡಿಲ್ಲ. ಈ ವಿಚಾರವನ್ನು ಡೈವೋರ್ಟ್ ಮಾಡಿ ಕಾಂಗ್ರಸ್ ಪಕ್ಷದವರು ಅನಗತ್ಯ ವಿಚಾರಗಳ ಬಗ್ಗೆ ಮಾತನಾಡುತ್ತಾರೆ. ಜೂ.04 ರ ನಂತರ ಹೊಸ ಬದಲಾವಣೆಯಾಗಲಿದೆ, ಸಂಸದ ಬಿ.ವೈ.ರಾಘವೇಂದ್ರ ಅತ್ಯಂತ ಹೆಚ್ಚಿನ ಮತಗಳನ್ನು ಗಳಿಸಿ ಗೆಲ್ಲಲಿದ್ದಾರೆ. ದೇಶದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರ ಹಿಡಿಯಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಯುವಮೋರ್ಚಾ ಅಧ್ಯಕ್ಷ ವೀರನಗೌಡ, ಮಂಜಾಚಾರ್, ಪರಮೇಶ್ವರಪ್ಪ, ಮಲ್ಲಿಕಾರ್ಜುನ, ಬಸವರಾಜ್ ಇತರರಿದ್ದರು.

RELATED ARTICLES
- Advertisment -
Google search engine

Most Popular

Recent Comments