Tuesday, October 8, 2024
Google search engine
Homeಅಂಕಣಗಳುಲೇಖನಗಳುಚೀನಾ ಉತ್ಪನ್ನಗಳನ್ನು ನಿಷೇಧಿಸಲು ಒತ್ತಾಯ

ಚೀನಾ ಉತ್ಪನ್ನಗಳನ್ನು ನಿಷೇಧಿಸಲು ಒತ್ತಾಯ

ಶಿವಮೊಗ್ಗ: ನೆರೆಯ ರಾಷ್ಟ್ರ ಚೀನಾ ನಮ್ಮ ದೇಶದ ಮೇಲೆ ಪದೇ ಪದೇ ದಾಳಿ ನಡೆಸುತ್ತಿದ್ದು, ಈ ಹಿನ್ನೆಲೆಯಲ್ಲಿ ಚೀನಾದ ಎಲ್ಲಾ ಉತ್ಪನ್ನ ಹಾಗೂ ಸರಕುಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಯುವ ಕಾಂಗ್ರೆಸ್ ವತಿಯಿಂದ ಇಂದು ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.
ಇದೀಗ ಚೀನಾ ದೇಶವು ಸಿಕ್ಕಿಂ ರಾಜ್ಯ ವಶಪಡಿಸಿಕೊಳ್ಳುವ ಚಿತಾವಣೆ ನಡೆಸುತ್ತಿದ್ದು, ಮತ್ತೊಂದೆಡೆ ಹಿಂದೂ ಮಹಾಸಾಗರದ ಮೇಲೆ ಪರಾಕ್ರಮ ಸಾಧಿಸಲು ಹವಣಿಸುತ್ತಿದೆ. ಚೀನಾದ ಮಾಧ್ಯಮಗಳು ಭಾರತದ ವಿರುದ್ಧ ಸಮರ ಸಾರುವ ಮಾತುಗಳನ್ನಾಡುತ್ತಿವೆ. ಇಷ್ಟೆಲ್ಲಾ ಆದರೂ ಚೀನಾದ ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡಲು ಅವಕಾಶ ಕೊಟ್ಟಿರುವುದು ಸರಿಯಲ್ಲ ಎಂದು ದೂರಿದರು.
ಚೀನಾ ಸೈನ್ಯದ ಮೂಲಕ ಭಾರತದ ಭೌಗೋಳಿಕ ಪ್ರದೇಶಗಳ ಮೇಲೆ ಅಕ್ರಮಣ ಮಾಡಲು ಮುಂದಾದಂತೆ, ಭಾರತದ ಮಾರುಕಟ್ಟೆಯಲ್ಲಿ ಅಗ್ಗದ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ಇಲ್ಲಿನ ಆರ್ಥಿಕ ವ್ಯವಸ್ಥೆ ಯನ್ನು ನಿಯಂತ್ರಣ ಮಾಡುತ್ತಿದೆ ಎಂದರು.
ಈ ಹಿಂದೆ ಯುಪಿಎ ಅಧಿಕಾರದಲ್ಲಿದ್ದಾಗ ಭಾರತದ ಮೇಲೆ ಉಗ್ರ ಚಟುವಟಿಕೆಗಳನ್ನು ನಡೆಸುತ್ತಿದ್ದ ಪಾಕಿಸ್ತಾನದೊಂದಿಗೆ ಎಲ್ಲಾ ಬಾಂಧವ್ಯಗಳನ್ನೂ ಕಡಿದುಕೊಳ್ಳಲಾಗಿತ್ತು. ಆದರೆ, ಕೇಂದ್ರ ಸರ್ಕಾರ ಇಂದು ಪಾಕಿಸ್ತಾನ ಮತ್ತು ಚೀನಾಗಳಿಂದ ದೇಶಕ್ಕೆ ಆಪತ್ತು ಎದುರಾಗುವ ಸಂದರ್ಭ ಒದಗಿದ್ದರೂ ಚೀನಾದ ಉತ್ಪನ್ನಗಳನ್ನು ದೇಶದಲ್ಲಿ ಎಗ್ಗಿಲ್ಲದೇ ಮಾರಾಟ ಮಾಡಲು ಅವಕಾಶ ನೀಡಿದೆ ಎಂದು ಟೀಕಿಸಿದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯ ವಿಶ್ವನಾಥ್ ಕಾಶಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಜಿ. ಮಧುಸೂದನ್, ಎಸ್.ಎಂ. ಶರತ್, ಭರತ್, ಮೊಹಮ್ಮದ್ ಆರೀಫ್, ಮೊದಲಾದವರಿದ್ದರು.

RELATED ARTICLES
- Advertisment -
Google search engine

Most Popular

Recent Comments