ಮಹಾನಗರ ಪಾಲಿಕೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಾಸಕ ಚನ್ನಬಸಪ್ಪ ಸೂಚನೆಗೆ ಮಾಹಿತಿ ನೀಡಿದ ಅಧಿಕಾರಿ
ಶಿವಮೊಗ್ಗ: ಶಿವಮೊಗ್ಗ ನಗರದಲ್ಲಿ ಬೀದಿ ನಾಯಿಗಳಿಂದ ಆಗುತ್ತಿರುವ ತೊಂದರೆಗಳನ್ನು ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಶಿವಮೊಗ್ಗ ನಗರ ಶಾಸಕ ಎಸ್.ಎನ್.ಚನ್ನಬಸಪ್ಪ ಸೂಚಿಸಿದಾಗ, ಬೀದಿ ನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ ಎಂದು ಅನಿಮಲ್ ವಿಭಾಗದ ಡಾ.ರೇಖಾ ಸಂಪೂರ್ಣ ಮಾಹಿತಿ ನೀಡಿದರು.
ಮಂಗಳವಾರ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಡಾ.ರೇಖಾ ಅವರು, ಬೀದಿನಾಯಿಗಳಿಗೆ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿ, ಪುನಃ ಅವುಗಳನ್ನು ಅದೇ ಸ್ಥಳಕ್ಕೆ ಬಿಡಲಾಗುವುದು. ಬೀದಿನಾಯಿಗಳನ್ನು ಕೊಲ್ಲುವುದಕ್ಕಾಗಲೀ, ಸ್ಥಳಾಂತರಿಸುವುದಕ್ಕಾಗಲೀ ಕಾನೂನಿನಲ್ಲಿ ಅವಕಾಶವಿಲ್ಲ್ಲ. ಯಾವುದೇ ರೀತಿಯ ರೇಬಿಸ್ ಹಾಗೂ ವಾಸಿ ಆಗದಂತಹ ಇನ್ನಿತರೆ ಕಾಯಿಲೆಗಳಿದ್ದ ನಾಯಿಗಳನ್ನು ಮಾತ್ರ ಕೊಲ್ಲುವುದಕ್ಕೆ ಅವಕಾಶವಿರುತ್ತದೆ. ಹಾಗಾಗಿ ಸೋಮವಾರದಿಂದ ಅನಿಮಲ್ ಬರ್ತ್ ಕಂಟ್ರೋಲ್ ಪ್ರೋಗ್ರಾಮ್ ಶುರು ಶುರುಮಾಡಲಾಗುತ್ತಿದೆ. ವಿಶೇಷ ತಂಡವೊಂದು ಬರುತ್ತಿದ್ದು 1800 ನಾಯಿಗಳಿಗೆ ಎನ್‍ಜಿಓ ಆರ್ಗನೈಜ್ ಅವರು ಆಪರೇಷನ್ ಮಾಡಿ ವಾಪಾಸ್ ಅದೇ ಸ್ಥಳಕ್ಕೆ ಬಿಡುತ್ತಾರೆ. ಸೋಮವಾರದಿಂದ ಈ ಕಾರ್ಯ ಆರಂಭವಾಗುತ್ತದೆ ಎಂದು ಅನಿಮಲ್ ವಿಭಾಗದ ಡಾ. ರೇಖಾ ಸಭೆಯಲ್ಲಿ ಸಂಪೂರ್ಣ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತೆ ಕವಿತಾ ಯೋಗಣ್ಣನವರ್, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಇಂಜಿಯರ್ಸ್ ಉಪಸ್ಥಿತರಿದ್ದರು.