ಶಿವಮೊಗ್ಗ : ಜೂನ್ ೦೮ರಂದು ನಡೆಯಲಿರುವ ವಿಧಾನ ಪರಿಷತ್ ದ್ವೈವಾರ್ಷಿಕ ನೈಋತ್ಯ ಶಿಕ್ಷಕರ ಮತ್ತು ಪದವೀಧರರ ಚುನಾವಣೆಗೆ ಮೇ ೧೫ರಂದು ಅಸೂಚನೆ ಹೊರಡಿಸಿದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರಲಿದೆ ಎಂದು ಜಿಲ್ಲಾ ಸಹಾಯಕ ಚುನಾವಣಾಕಾರಿ ಹಾಗೂ ಜಿಲ್ಲಾಕಾರಿ ಡಾ.ಎಂ. ಲೋಕೇಶ್ ಹೇಳಿದರು.
ಇಂದು ತಮ್ಮ ಕಚೇರಿ ಸಭಾಂ ಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಚುನಾವಣೆಗೆ ಸಂಬಂಸಿದಂತೆ ಮಾಹಿತಿ ನೀಡಿ ಮಾತನಾಡಿದರು.
ಈ ಚುನಾವಣೆಗೆ ಮೇ ೨೨ ನಾಮಪತ್ರ ಸಲ್ಲಿಸಲು ಕೊನೆ ದಿನ. ಈ ನಾಮಪತ್ರಗಳನ್ನು ೨೩ರಂದು ಪರಿಶೀಲಿಸಲಾಗುವುದು. ಮೇ ೨೫ ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಜೂನ್ ೦೮ರಂದು ನಡೆಯ ಲಿರುವ ಚುನಾವಣೆಯ ಮತಎಣಿ ಕೆಯು ಜೂನ್ ೧೨ರಂದು ಮೈಸೂರಿ ನಲ್ಲಿ ನಡೆಯಲಿದೆ ಎಂದು ಜಿಲ್ಲಾಕಾರಿಗಳು ತಿಳಿಸಿದರು.
ವಿಭಾಗೀಯ ಆಯುಕ್ತರು ಚುನಾವಣಾಕಾರಿಗಳಾಗಿ ಕರ್ತವ್ಯ ನಿರ್ವಹಿಸಲಿದ್ದು, ಜಿಲ್ಲಾಕಾರಿಗಳು ಸಹಾಯಕ ಚುನಾವಣಾಕಾರಿ ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಚುನಾವಣೆಯ ಉಸ್ತುವಾರಿಗಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಕಾರಿಗಳನ್ನು ನೋಡಲ್ ಅಕಾರಿಗಳನ್ನಾಗಿ ನೇಮಿಸಲಾಗಿದೆ ಎಂದರು.
ಈ ಚುನಾವಣೆಯ ವ್ಯವಸ್ಥಿತ ಅನುಷ್ಠಾನಕ್ಕಾಗಿ ವಿವಿಧ ತಂಡಗಳನ್ನು ನೇಮಿಸಲಾಗಿದೆ. ಜಿಲ್ಲಾ ಪಂಚಾ ಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಕಾರಿಗಳು, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ, ಅಬಕಾರಿ ಇಲಾಖೆ ಉಪಆಯುಕ್ತರು, ಜಿಲ್ಲಾ ಪಂಚಾಯಿತಿ ಉಪಕಾರ್ಯ ದರ್ಶಿ-೧ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೆ ಶಕರು ಜಿಲ್ಲಾ ಮಟ್ಟದ ತಂಡ ದಲ್ಲಿರುವರು. ಮಹಾನಗರಪಾಲಿಕೆ ಮುಖ್ಯ ಆಡಳಿತಾಕಾರಿ, ಕಂದಾಯ ಅಕಾರಿಗಳು, ಅಬಕಾರಿ ಅಕ್ಷಕರು ಹಾಗೂ ಕೋಟೆ/ದೊಡ್ಡಪೇಟೆ ಪೊಲೀಸ್ ಸರ್ಕಲ್ ಇನ್ಸ್‌ಫೆಕ್ಟರ್ ಅವರು ಮಹಾನಗರಪಾಲಿಕೆ ತಂಡದ ಲ್ಲಿರುವರು. ಉಳಿದಂತೆ ಆಯಾ ತಾಲೂಕಿನ ಕಾರ್ಯನಿರ್ವಾಹಕ ಅಕಾರಿಗಳು, ವೃತ್ತ ನಿರೀಕ್ಷಕರು ಹಾಗೂ ಅಬಕಾರಿ ಇನ್ಸ್‌ಫೆಕ್ಟರ್‌ರವರು ತಾಲೂಕು ಮಟ್ಟದ ತಂಡದಲ್ಲಿದ್ದು, ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಈ ಚುನಾವಣೆಗೆ ಶಿಕ್ಷಕರ ಕ್ಷೇತ್ರಕ್ಕೆ ೩೨ ಹಾಗೂ ಪದವೀಧರರ ಕ್ಷೇತ್ರಕ್ಕೆ ೩೨ ಮತಗಟ್ಟೆ ಸೇರಿದಂತೆ ಒಟ್ಟು ೬೪ಮತಗಟ್ಟೆಗಳನ್ನು ಜಿಲ್ಲೆಯ ಆಯ್ದ ಸ್ಥಳಗಳಲ್ಲಿ ಸ್ಥಾಪಿಸಲಾಗುವುದು. ಚುನಾವಣಾ ಕಾರ್ಯಕ್ಕಾಗಿ ೨೭೦ ಸಿಬ್ಬಂಗಳು, ೭೦ಮೈಕ್ರೋ ಆಬ್ಜ ರ್ವರ್‌ಗಳು ಹಾಗೂ ೭೦ಪೊಲೀಸ್ ಸಿಬ್ಬಂಗಳನ್ನು ಬಳಸಿಕೊಳ್ಳಲಾಗು ವುದು. ಇದರೊಂದಿಗೆ ಪ್ರತಿ ತಾಲೂ ಕಿನಲ್ಲಿ ೦೨ಪ್ಲೈಯಿಂಗ್ ಸ್ಕ್ವಾಡ್ ಗಳನ್ನು ನೇಮಿಸಲಾಗಿದೆ ಎಂದರು.
ಪ್ರಸಕ್ತ ಚುನಾವಣೆಗೆ ಮತಪತ್ರ ಗಳನ್ನು ಬಳಸಲಾಗುತ್ತಿದ್ದು, ೧, ೨, ೩, ೪ ಹೀಗೆ ಆದ್ಯತೆಯ ಮತಗಳಿಗೆ ಅವಕಾಶವಿರಲಿದೆ. ಈ ಮತಗಟ್ಟೆಯಲ್ಲಿ ನೀರು, ನೆರಳು, ಬೆಳಕು ಹೀಗೆ ಮುಂತಾದ ಅಗತ್ಯ ಮೂಲಭೂತ ಸೌಕರ್ಯಗಳಿರುವ ಬಗ್ಗೆ ಪರಿಶೀಲಿಸಿ ಮಾಹಿತಿ ನೀಡಲು ಸಂಬಂಸಿದ ಅಕಾರಿಗಳಿಗೆ ಸೂಚಿಸಲಾಗಿದೆ. ಬೆಳಿಗ್ಗೆ ೮ರಿಂದ ಸಂಜೆ ೪ರವರಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ ಎಂದವರು ನುಡಿದರು.
ಮತಗಟ್ಟೆಗಳನ್ನು ಆಯಾ ತಾಲೂಕು ತಹಶೀಲ್ದಾರರ ಕಚೇರಿಯಿಂದ ಮತಕೇಂದ್ರಕ್ಕೆ ರವಾನಿಸಿ ನಂತರ ಅವುಗಳನ್ನು ಜಿಲ್ಲಾಕಾರಿಗಳ ಕಚೇರಿಯಲ್ಲಿ ಸಂಗ್ರಹಿಸಲಾಗುವುದು. ಅಂತಿಮವಾಗಿ ಕ್ರೋಡೀಕರಿಸಿದ ಮತಪೆಟ್ಟಿಗೆಗಳನ್ನು ಮೈಸೂರಿನ ವಿಭಾಗೀಯ ಆಯುಕ್ತರ ಸುಪರ್ದಿಗೆ ವಹಿಸಲಾಗುವುದು ಎಂದವರು ನುಡಿದರು.
ಸದರಿ ಚುನಾವಣೆಗೆ ಸಂಬಂಸಿದಂತೆ ಮಾದರಿ ನೀತಿ ಸಂಹಿತೆ ರಾಜಕೀಯ ಪಕ್ಷದವರಿಗೆ ಹಾಗೂ ರ್ಸ್ಪಸುವ ಅಭ್ಯರ್ಥಿಗಳಿಗೆ ಅನ್ವಯವಾಗಲಿದೆ. ರಾಜ್ಯದ ಶಿಕ್ಷಕರು ಹಾಗೂ ಪದವೀಧರರ ಮೇಲೆ ಪ್ರಭಾವ ಬೀರುವಂತಹ ಯಾವುದೇ ಕಾರ್ಯಕ್ರಮಗಳನ್ನು ಪ್ರಕಟಿಸುವಂತಿಲ್ಲ. ಸಚಿವರು ಯಾವುದೇ ವಿದ್ಯಾಸಂಸ್ಥೆಗಳು ಮತ್ತು ಪದವೀಧರ ಕ್ಷೇತ್ರಗಳಲ್ಲಿ ಶಂಕುಸ್ಥಾಪನೆ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ ಎಂದವರು ನುಡಿದರು.
ಈ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಶಿಕ್ಷಕರ ಕ್ಷೇತ್ರಕ್ಕೆ ೨೮೨೫ ಪುರುಷರು, ೧೬೩೮ಮಹಿಳೆಯರು ಸೇರಿದಂತೆ ಒಟ್ಟು ೪೪೬೫ ಮತದಾರರು ಹಾಗೂ ಪದವೀಧರರ ಕ್ಷೇತ್ರಕ್ಕೆ ೧೫,೩೨೭ ಪುರುಷರು ಹಾಗೂ ೮೯೯೫ ಮಹಿಳೆಯರು ಸೇರಿದಂತೆ ಒಟ್ಟು ೨೪,೩೨೪ ಪುರುಷರು ಮತಚಲಾಯಿಸಲಿದ್ದಾರೆ. ಇವರಷ್ಟೇ ಅಲ್ಲದೇ ಇತ್ತೀಚೆಗೆ ಹೆಸರು ನೋಂದಾಯಿಸಿದ ಅಭ್ಯರ್ಥಿಗಳು ಮತ ಚಲಾಯಿಸಲಿದ್ದಾರೆ ಎಂದವರು ನುಡಿದರು.
ಜಿಲ್ಲೆಯಲ್ಲಿ ಚುನಾವಣೆಗೆ ಸಂಬಂಸಿದಂತೆ ಅಭ್ಯರ್ಥಿಗಳು ಪ್ರಕಟಪಡಿಸುವ ಜಾಹಿರಾತು ಹಾಗೂ ಪ್ರಚಾರಕ್ಕೆ ಸಂಬಂಸಿದಂತೆ ಮಾಧ್ಯಮ ಪ್ರಮಾಣಿಕರಣ ಮತ್ತು ಮೇಲುಸ್ತುವಾರಿ ಸಮಿತಿ ಕಾರ್ಯನಿರ್ವಹಿಸಲಿದೆ. ಚುನಾವಣೆ ಸಂಬಂಧದ ಯಾವುದೇ ಜಾಹಿರಾತುಗಳು ಮತ್ತು ಟಿ.ವಿ.ಕೇಬಲ್, ರೇಡಿಯೋ, ಎಫ್ ಎಂ. ಚಾನಲ್‌ಗಳಲ್ಲಿ ಪ್ರದರ್ಶಿಸುವ ಪೂರ್ವದಲ್ಲಿ ಈ ಸಮಿತಿಯ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಮತದಾನ ದಿನಾಂಕದ ೪೮ಗಂಟೆಗಳ ಪೂರ್ವದಲ್ಲಿ ಮದ್ಯ ಮಾರಾಟ ಹಾಗೂ ಸಾಗಾಣಿಕೆಯನ್ನು ನಿಷೇಸಲಾಗಿದೆ ಎಂದವರು ತಿಳಿಸಿದ್ದಾರೆ.
ಈ ಚುನಾವಣೆಗೆ ಸಂಬಂಸಿದಂತೆ ಸಾರ್ವಜನಿಕರು ಹಾಗೂ ಮತದಾರರ ಅನುಕೂಲಕ್ಕಾಗಿ ಜಿಲ್ಲಾಕಾರಿಗಳ ಕಚೇರಿಯಲ್ಲಿ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಈ ಚುನಾವಣೆಗೆ ಸಂಬಂಸಿದ ದೂರುಗಳನ್ನು ಸಾರ್ವಜನಿಕರು ಕರೆ ಮಾಡಿ ದಾಖಲಿಸಬಹುದಾಗಿದೆ. ಹಾಗೂ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದವರು ನುಡಿದರು.
ಚುನಾವಣೆಗೆ ರ್ಸ್ಪಸಿರುವ ಅಭ್ಯರ್ಥಿಗಳು ಚುನಾವಣೆಗೆ ಸಂಬಂಸಿದಂತೆ ಸಭೆ, ಸಮಾರಂಭಗಳನ್ನು ನಡೆಸುವ ಪೂರ್ವದಲ್ಲಿ ಚುನಾವಣಾಕಾರಿಗಳ ಅನುಮತಿ ಪಡೆಯುವುದು ಕಡ್ಡಾಯವಾಗಿದೆ. ಪ್ರಚಾರ ಕಾರ್ಯಕ್ಕಾಗಿ ಪ್ರಚಾರ ಫಲಕಗಳ ಅಳವಡಿಸುವುದು, ಬ್ಯಾನರ್ ಹಾಕುವುದನ್ನು ನಿಷೇದಿಸಲಾಗಿದೆ ಎಂದವರು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಕಾರಿ ಡಾ.ಕೆ.ರಾಕೇಶ್‌ಕುಮಾರ್, ಅಪರ ಜಿಲ್ಲಾಕಾರಿ ಚನ್ನಬಸಪ್ಪ ಮುಂತಾದವರು ಉಪಸ್ಥಿತರಿದ್ದರು.
ಜೂ.೮ರಂದು ವಿಧಾನಪರಿಷತ್ ಚುನಾವಣೆ : ನೀತಿಸಂಹಿತೆ ಜಾರಿ
RELATED ARTICLES