Thursday, December 12, 2024
Google search engine
Homeಇ-ಪತ್ರಿಕೆಶಿವಮೊಗ್ಗ: ಮಾಜಿ ಪಾದ್ರಿಯೊಬ್ಬರಿಂದ ಧರ್ಮ ವಿರೋಧಿ ಕೃತ್ಯ: ಕಿಶ್ಚಿಯನ್‌ ಸಮುದಾಯದ ವಿವಿಧ ಸಂಘಟನೆಗಳ ಆರೋಪ

ಶಿವಮೊಗ್ಗ: ಮಾಜಿ ಪಾದ್ರಿಯೊಬ್ಬರಿಂದ ಧರ್ಮ ವಿರೋಧಿ ಕೃತ್ಯ: ಕಿಶ್ಚಿಯನ್‌ ಸಮುದಾಯದ ವಿವಿಧ ಸಂಘಟನೆಗಳ ಆರೋಪ

ಶಿವಮೊಗ್ಗ: ತೀರ್ಥಹಳ್ಳಿಯ ಮಾಜಿ ಪಾದ್ರಿಯೊಬ್ಬರು ಧರ್ಮ ವಿರೋಧಿ ಕೃತ್ಯಗಳನ್ನು ನಡೆಸುತ್ತಿದ್ದು, ಇದನ್ನು ಖಂಡಿಸಿ ಜಿಲ್ಲಾಡಳಿತಕ್ಕೆ ಹಾಗೂ ಜಿಲ್ಲಾ ಪೊಲೀಸ್‌ ಇಲಾಖೆಗೆ ಮನವಿ ಸಲ್ಲಿಸಲಾಗುವುದು ಎಂದು ಕ್ರಿಶ್ಚಿಯನ್‌ ಸಮುದಾಯದ ವಿವಿಧ ಸಂಘಟನೆಗಳ ಮುಖಂಡರು ಬುಧವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ನ್ಯಾಷನಲ್ ಕೌನ್ಸಿಲ್ ಆಫ್ ದಲಿತ್ ಕ್ರಿಶ್ಚಿಯನ್ ನ ಕನ್ವೀನರ್ ಇಸಬೆಲ್ಲಾ ಕ್ಸೇವಿಯರ್  ಅವರು ಬುಧವಾರ ನಗರದ ಪತ್ರಿಕಾಮಾತನಾಡಿ ಕ್ಯಾಥೋಲಿಕ್ ಕ್ರೈಸ್ತ ಧರ್ಮಕ್ಕೆ ಪೋಪ್  ಅವರೇ ಅತ್ಯುನ್ನತ ಶ್ರೇಣಿಯಲ್ಲಿರುತ್ತಾರೆ.  ಅವರ ಕೆಳಗೆ ಬಿಷಪ್ ಮತ್ತು  ನುನ್ಷಿಯೋ ಬರ್ತಾರೆ.  ಇವರು ದೇಶಕ್ಕೆ ಒಬ್ಬರೇ ಇರ್ತಾರೆ.  ಚಿತ್ರದುರ್ಗ, ಶಿವಮೊಗ್ಗ, ಚಿಕ್ಕಮಗಳೂರು ಮೂರು ಕ್ಷೇತ್ರಕ್ಕೆ ಒಬ್ಬ ಧರ್ಮಗುರು ಬರ್ತಾರೆ. ಇವರ ಕೆಳಗೆ 60 ಜನ ಧರ್ಮಗುರುಗಳು ಬರುತ್ತಾರೆ ಎಂದರು.

ಗುರು ಆದವನಿಗೆ ಆಸ್ತಿ ಇರಬಾರದು, ದೇಣಿಗೆ ಬಂದರೆ ಅದನ್ನ ಚರ್ಚ್ ನ ಫೈನಾನ್ಸ್ ಸಮಿತಿಗೆ ಹೋಗಬೇಕು. ಗುರುವನ್ನ(ಫಾದರ್) ಬಿಷಪ್ ನೋಡಿಕೊಳ್ತಾರೆ. ಫಾದರ್ ಗೆ ಸಂಬಳ ೧೦ ಸಾವಿರ ರೂ. ಇರುತ್ತಾರೆ. ಕೆನಾನ್ ಲಾ ಕಥೋಲಿಕ್ ಕ್ರೈಸ್ತರು ಪಾಲಿಸುತ್ತಾರೆ. ತೀರ್ಥಹಳ್ಳಿಯ ಮಾಜಿ ಪಾದ್ರಿಯೊಬ್ಬರು ಹಲವು ಚರ್ಚ್ ನಲ್ಲಿ ಸೇವೆ ಸಲ್ಲಿಸಿದ್ದಾರೆ. ಭದ್ರಾವತಿಯಲ್ಲಿ ಇದ್ದಾಗ ಭಕ್ತರು 60 ಲಕ್ಷ ರೂ ಲೆಕ್ಕ ಕೊಡಲು ಬಿಷಪ್ ಗೆ ಕೇಳಿದ್ದಾರೆ. ಆದರೆ ಯಾವ ಬಗ್ಗೆನೂ ಅವರು  ಮಾಹಿತಿ ಕೊಡಲಿಲ್ಲ. ಸಾಗರದಲ್ಲಿ ಆಸ್ತಿ  ಮಾಡಿಕೊಂಡಿರುವ ಬಗ್ಗೆ ಮಾಹಿತಿ ಕೊಡಲಿಲ್ಲ ಎಂದು ದೂರಿದರು.

35 ವರ್ಷದಿಂದ ಏನು ಕ್ರಮ ಆಗಿಲ್ಲ. ತೀರ್ಥಹಳ್ಳಿಯಲ್ಲಿರುವಾಗ ಅವರು  ಬಾಡಿಗೆ ಮನೆಯಲ್ಲಿಇದ್ದಾರೆ. ಇದು ಕ್ರೈಸ್ತ ಧರ್ಮದ ವಿರುದ್ಧವಾಗಿದೆ. ಬಿಷಪ್ ನವರು ಬಂದು ಮಾಹಿತಿ ಸ್ಪಷ್ಟೀಕರಣಕ್ಕೆ ಸೂಚಿಸಿದರೂ ಧರ್ಮಗುರುಗಳ ಮಾತನ್ನೇ ಉಲ್ಲಂಘಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಾಜಿ ಪಾದ್ರಿಯೊಬ್ಬರು ,  ಬಿಷಪ್ ಹೆಸರು ಹೇಳಿಕೊಂಡು ಯೂಟ್ಯೂಬ್ ನಲ್ಲಿ ಹರಿಬಿಟ್ಟಿರುವುದು ರಾಜ್ಯಾದ್ಯಂತ ಗುಲ್ಲೆಬ್ಬಿದೆ. ಹಾಗಾಗಿ ತಾವೇ ತಪ್ಪಿತಸ್ಥ ಸ್ಥಾನದಲ್ಲಿದ್ದು ಬಿಷಪ್ ಬಗ್ಗೆ ಮಾತನಾಡಿರುವ ಇವರ ವಿರುದ್ಧ ಕ್ರಮಕೈಗೊಳ್ಳಬೇಕು  ಎಂದರು.

ಡಾ ಪಿ ಮೂರ್ತಿ ಮಾತಾನಾಡಿ, ಮಾಜಿ ಪಾದ್ರಿಯವರ  ಅವ್ಯವಹಾರ ಹಾಗೂ ಧರ್ಮವಿರೋಧಿ ಕೃತ್ಯಗಳನ್ನು ಖಂಡಿಸಿ ಶಿವಮೊಗ್ಗ ಧರ್ಮ ಕ್ಷೇತ್ರದ ಭಕ್ತ ಜನತೆ ಅವರ ಅವರ ವಿರುದ್ಧ ವಿವಿಧ ಸ್ಥಳಗಳಲ್ಲಿ ಕೇಸುಗಳನ್ನು ದಾಖಲಿಸಲು ನಿರ್ಧರಿಸಿದ್ದಾರೆ. ಎಸ್ಪಿ ಅವರಿಗೆ ಮನವಿ ನೀಡಲಾಗುತ್ತಿದೆ. ತನಿಖಾತಂಡ ರಚಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳ ಬೇಕು ಇಲ್ಲವಾದಲ್ಲಿ ಪ್ರತಿಭಟನೆ ಅನಿವಾರ್ಯ ಎಂದರು.

ಸುದ್ದಿಗೋಷ್ಠಿಯಲ್ಲಿ ಸಾಮಾಜಿಕ ಪರಿವರ್ತನಾ ಆಂದೋಲನ ವೈ ಮರಿಸ್ವಾಮಿ, ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಭಾನುಪ್ರಸಾದ್, ಅಂಬೇಡ್ಕರ್ ಸೇನೆಯ ಮಂಜುನಾಥ್,  ವೆಂಕಟೇಶ್, ಕದಂಬ ಕನ್ನಡ  ವೇದಿಕೆಯ ಅಧ್ಯಕ್ಷ ವಿಶ್ವನಾಥ್ ಮೊದಲಾದವರು ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular

Recent Comments